Ram Mandir Bhumi Pujan: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ; ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮೋದಿ

PM Modi in Ayodhya Ram Mandir Bhoomi Puja: ಮೊದಲಿಗೆ ಹನುಮಾನ್ ಗುಡಿಗೆ ಮೋದಿ ಭೇಟಿ ನೀಡಿದರು. ನಂತರ ಹನುಮಾನ್ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿಲಾನ್ಯಾಸ ನಡೆಯುವ ಜಾಗದತ್ತ ಮೋದಿ ಪ್ರಯಾಣ ಬೆಳೆಸಿ, ಶಿಲಾನ್ಯಾಸ ನೆರವೇರಿಸಿದರು

news18-kannada
Updated:August 5, 2020, 12:52 PM IST
Ram Mandir Bhumi Pujan: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ; ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಮೋದಿ
ರಾಮ ಮಂದಿರ
  • Share this:
ಅಯೋಧ್ಯೆ (ಜು.5): ಹಲವು ವರ್ಷಗಳ ಕಾಲ ವಿವಾವದ ಸುಳಿಯಲ್ಲಿ ಸಿಲುಕಿದ್ದ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡಲು ಕೊನೆಗೂ ಸಮಯ ಕೂಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಮಾಡಲು ಶಿಲಾನ್ಯಸ ನೆರವೇರಿಸಿದ್ದಾರೆ. ಅನೇಕ ಸಾಧು-ಸಂತರು, ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು. 

ಬೆಳಗ್ಗೆ 10:30ಕ್ಕೆ ಲಖನೌ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಿದರು. ಮೋದಿಯನ್ನು ಸ್ವಾಗತಿಸಲು ಆಗಮಿಸಿದ್ದ ಹಿರಿಯ ನಾಯಕರು ಜೈ ಶ್ರೀರಾಮ್​ ಎನ್ನುವ ಘೋಷಣೆ ಕೂಗಿದರು. ನಂತರ ಹೆಲಿಕಾಪ್ಟರ್​ ಮೂಲಕ ಪ್ರಧಾನಿ ಮೋದಿ ಅಯೋಧ್ಯೆಯ ಸಾಕೇತ್​ ಕಾಲನಿಗೆ ತೆರಳಿದರು. ಅಯೋಧ್ಯೆಗೆ ಕಾಲಿಡುತ್ತಿದ್ದಂತೆ ಜೈ ಶ್ರೀರಾಮ್​ ಎನ್ನುವ ಘೋಷಣೆಗಳು ಮೊಳಗಿದವು.

ಮೊದಲಿಗೆ ಹನುಮಾನ್ ಗುಡಿಗೆ ಮೋದಿ ಭೇಟಿ ನೀಡಿದರು. ನಂತರ ಹನುಮಾನ್ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿಲಾನ್ಯಾಸ ನಡೆಯುವ ಜಾಗದತ್ತ ಮೋದಿ ಪ್ರಯಾಣ ಬೆಳೆಸಿದರು. 12:30 ಭೂಮಿ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. 12:40ಕ್ಕೆ ಮೋದಿ ಅಡಿಗಲ್ಲು ಹಾಕಿದರು.



  • 10.30ಕ್ಕೆ ಲಖನೌ ವಿಮಾನ ನಿಲ್ದಾಣ ತಲುಪಿದ ಮೋದಿ

  • 11.30ಕ್ಕೆ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ
  • 11.40ಕ್ಕೆ ಹನುಮಾನ್​ಗಡಿಯಲ್ಲಿ ಪ್ರಾರ್ಥನೆ

  • ಹನುಮಾನ್ ಪೂಜೆ ಬಳಿಕ ಸರಯೂ ನದಿಗೆ ಪೂಜೆ

  • ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಆಗಮನ

  • 12.30ಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿ

  • 12.40ಕ್ಕೆ ರಾಮಮಂದಿರಕ್ಕೆ ಅಡಿಗಲ್ಲು ಹಾಕಿದ ಮೋದಿ

  • ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ

  • 1.10ಕ್ಕೆ ರಾಮಜನ್ಮಭೂಮಿ ಸಂಕೀರ್ಣ ವೀಕ್ಷಿಸಲಿರುವ ಮೋದಿ

  • ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ‌ಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್ ಮತ್ತಿತರ ಜೊತೆ ಸಮಾಲೋಚನೆ

  • ಮಧ್ಯಾಹ್ನ 02:05ಕ್ಕೆ ಅಯೋಧ್ಯೆಯಿಂದ ಹೆಲಿಕಾಪ್ಟರ್ ಮೂಲಕ ಲಕ್ನೋಗೆ ಪ್ರಯಾಣ


ವಿಶೇಷ ಎಂದರೆ, ರಾಮ ಮಂದರಿ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಪ್ರಮುಖರಾದ ಎಲ್​.ಕೆ ಅಡ್ವಾಣಿ ಆನ್​ಲೈನ್​ನಲ್ಲೇ ರಾಮಮಂದಿರದ ಅಡಿಗಲ್ಲು ಕಾರ್ಯಕ್ರಮ ಕಣ್ತುಂಬಿಕೊಂಡರು. ಕೊರೋನಾ ವೈರಸ್​ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹೊರ ಬರುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾರ್ಯಕ್ರಮ ವೀಕ್ಷಿಸಿದರು
Published by: Rajesh Duggumane
First published: August 5, 2020, 12:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading