HOME » NEWS » National-international » RAM LALLA IDOL TO BE MOVED TO BULLETPROOF MAKESHIFT TEMPLE TILL RAM MANDIR COMES UP IN AYODHYA SNVS

ರಾಮ ಮಂದಿರ ನಿರ್ಮಾಣವಾಗುವವರೆಗೂ ಬುಲೆಟ್ ಪ್ರೂಫ್ ಕಟ್ಟಡಕ್ಕೆ ರಾಮಲಲ್ಲ ವಿಗ್ರಹ ಸ್ಥಳಾಂತರ

1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನಂತರ ಭಕ್ತಾದಿಗಳು ಈ ಪ್ರದೇಶದಲ್ಲಿ ಪೂಜಾ ವಿಧಿ ವಿಧಾನಗಳನ್ನು ಮಾಡುತ್ತಿರಲಿಲ್ಲ. ಫೈಬರ್​ನಿಂದ ಮಾಡಲಾಗುವ ಈ ತಾತ್ಕಾಲಿಕ ಮಂದಿರವು ಪ್ರಸ್ತುತ ರಾಮ ಮಂದಿರದಿಂದ 150 ಮೀಟರ್ ದೂರದಲ್ಲಿದೆ.

news18
Updated:March 3, 2020, 2:07 PM IST
ರಾಮ ಮಂದಿರ ನಿರ್ಮಾಣವಾಗುವವರೆಗೂ ಬುಲೆಟ್ ಪ್ರೂಫ್ ಕಟ್ಟಡಕ್ಕೆ ರಾಮಲಲ್ಲ ವಿಗ್ರಹ ಸ್ಥಳಾಂತರ
ರಾಮ ಮಂದಿರ ಸ್ಥಳದ ಬಳಿ ಇರುವ ಸಾಧು
  • News18
  • Last Updated: March 3, 2020, 2:07 PM IST
  • Share this:
ಲಕ್ನೋ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣವಾಗುವವರೆಗೆ ರಾಮಲಲ್ಲ (ಶ್ರೀರಾಮ ದೇವರು) ಮೂರ್ತಿಯನ್ನು ತಾತ್ಕಾಲಿಕವಾಗಿ ಬುಲೆಟ್ ಪ್ರೂಫ್ ಕಟ್ಟಡವೊಂದಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಮಾರ್ಚ್ 25ರ ನಂತರ ಚೈತ್ರ ನವರಾತ್ರಿಗಾಗಿ ಈ ವಿಶೇಷ ಸ್ಥಳದಲ್ಲಿ ಭಕ್ತರಿಗೆ ದರ್ಶನಕ್ಕೆ ಅನುಮತಿಸಲಾಗಿದೆ. ರಾಮಮಂದಿರ ನಿರ್ಮಾಣ ಆಗುವವರೆಗೂ ರಾಮಲಲ್ಲಾಗೆ ಇಲ್ಲಿಯೇ ಪೂಜೆ ಸಲ್ಲಿಸಲು ಭಕ್ತರಿಗೆ ಅವಕಾಶ ಇರಲಿದೆ. 1992ರ ನಂತರ ಇದೇ ಮೊದಲ ಬಾರಿಗೆ ರಾಮಜನ್ಮಭೂಮಿಯಲ್ಲಿರುವ ಗರ್ಭಗುಡಿಯ ಹೊರಗೆ ರಾಮಲಲ್ಲಾಗೆ ಪೂಜೆ ಸಲ್ಲಿಸಲಾಗುತ್ತಿದೆ.

ತಾತ್ಕಾಲಿಕ ವ್ಯವಸ್ಥೆಯಾಗಿ ಈಗ ರಾಮಲಲ್ಲಾ ವಿಗ್ರಹವನ್ನು ಇರಿಸಲಾಗಿರುವ ಕಟ್ಟಡವನ್ನು ಫೈಬರ್​ನಿಂದ ನಿರ್ಮಿಸಲಾಗಿದೆ. ರಾಮಮಂದಿರ ಸ್ಥಳದಿಂದ 150 ಕಿಮೀ ದೂರದಲ್ಲಿರುವ ಈ ಕಟ್ಟಡ ಬುಲೆಟ್ ಪ್ರೂಫ್ ಆಗಿದೆ.

ಇದೇ ವೇಳೆ, ಶ್ರೀ ರಾಮ ತೀರ್ಥ ಕ್ಷೇತ್ರ ಟ್ರಸ್ಟ್​ನ ಎರಡನೇ ಸಭೆ ಹೋಳಿ ಹಬ್ಬದ ನಂತರ ದೆಹಲಿಯಲ್ಲಿ ನಡೆಯುವ ಸಾಧ್ಯತೆ ಇದೆ. ಇದೇ ವಾರದಲ್ಲಿ ನಡೆಯಬೇಕಿದ್ದ ಸಭೆಯನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ರಾಮ ಮಂದಿರ ನಿರ್ಮಾಣ ಕುರಿತ ಕೆಲಸ ಕಾರ್ಯಗಳ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಓಮರ್ ಅಬ್ದುಲ್ಲಾರಿಂದ ಸಾರ್ವಜನಿಕ ವ್ಯವಸ್ಥೆಗೆ ಅಪಾಯ: ಸುಪ್ರೀಂಗೆ ತಿಳಿಸಿದ ಜಮ್ಮು-ಕಾಶ್ಮೀರ ಸರ್ಕಾರ

ಇನ್ನು, ಅಯೋಧ್ಯೆಯಲ್ಲಿ ಮೂರು ದಿನಗಳ ರಾಮಾಯಣ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಮತ್ತು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್, “ರಾಮ ದೇವರ ವಿಗ್ರಹವನ್ನು ಹೊಸ ತಾತ್ಕಾಲಿಕ ಸ್ಥಳಕ್ಕೆ ವರ್ಗಾಯಿಸಿದ ಬಳಿಕ ದೇವರ ದರ್ಶನಕ್ಕೆ ಭಕ್ತರು ಹೆಚ್ಚು ನಡೆಯುವ ಅಗತ್ಯ ಇರುವುದಿಲ್ಲ. ದೇವರ ಮೂರ್ತಿ ಮತ್ತು ಭಕ್ತರ ನಡುವಿನ ಅಂತರ ಕಡಿಮೆಯಾಗುತ್ತದೆ” ಎಂದು ತಿಳಿಸಿದರು.

ರಾಮ ಮಂದಿರ ನಿರ್ಮಾಣದ ಕೆಲಸಗಳು ನಡೆಯುತ್ತಿವೆ. ಮೂಲಗಳ ಪ್ರಕಾರ ಭೂಮಿ ಪೂಜೆ ಮಾಡಲು ನೀರನ್ನು ಪವಿತ್ರ ನದಿಗಳ ನೀರನ್ನು ಬಳಸ ಬೇಕಾ ಬೇಡವಾ ಎಂಬುದರ ಚರ್ಚೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಸಮಯದಲ್ಲಿ ರಾಮ ಕೀರ್ತನೆಗಳನ್ನು ಹಾಕಿರುತ್ತಾರೆ. ಇನ್ನು ರಾಮ ಮಂದಿರಕ್ಕೆ ಬೇಕಾದ ಕೆಂಪು ಕಲ್ಲನ್ನು ರಾಜಸ್ಥಾನದಿಂದ ಅಮದು ಮಾಡಿಕೊಳ್ಳಲಾಗುವುದು.

ರಾಮ ಮಂದಿರ ನಿರ್ಮಾಣದ ನೀಲಿ ನಕ್ಷೆಯನ್ನು ತಯಾರು ಮಾಡುವ ಮೊದಲು ರಾಮ ಮಂದಿರ ನಿಮಾರ್ಣ ಕಮಿಟಿಯ ಅಧ್ಯಕ್ಷ  ನೃಪೆಂದ್ರ ಮಿಶ್ರಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದರು. ಅಲ್ಲದೇ ಮಿಶ್ರಾ ಅವರ ರಾಮ ಮಂದಿರವನ್ನು ನಿರ್ಮಿಸಲಿರುವ ಲಾರ್ಸೆನ್ ಮತ್ತು ಟರ್ಬೊ ಕಂಪನಿಯ ಇಂಜಿನಿಯರ್​ಗಳನ್ನು ಭೇಟಿ ಮಾಡಿದ್ದರು. ಆದರೂ ಅಂತಿಮ ನಿರ್ಧಾರವನ್ನು ಟ್ರಸ್ಟ್​ನ ಸಭೆಯಲ್ಲಿಯೇ ತೆಗೆದುಕೊಳ್ಳಲಾಗುವುದು.ಇದರ ನಡುವೆ ತಾತ್ಕಾಲಿಕ ಸ್ಥಳದಲ್ಲಿ ರಾಮಲಲ್ಲ ಮೂರ್ತಿಗೆ ಸುರಕ್ಷತೆಯ ಬಗ್ಗೆ ಮಿಶ್ರಾ ಅವರಿಗೆ ಜಿಲ್ಲಾಡಳಿತ ಮಾಹಿತಿಯನ್ನು ನೀಡಿತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: March 3, 2020, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories