Ayodhya Case: ಅಯೋದ್ಯ ಇಂದಿಗೆ ಅಂತ್ಯವಾಗಲಿದೆ 'ಅಯೋಧ್ಯೆ' ಸುಪ್ರೀಂ ವಿಚಾರಣೆ; ನವೆಂಬರ್ 17ಕ್ಕೆ ಐತಿಹಾಸಿಕ ತೀರ್ಪು; ಸಿಜೆಐ ರಂಜನ್​ ಗೊಗೋಯ್

Supreme Court on Ayodhya Case Latest News: ಅಯೋಧ್ಯೆ ಭೂ ವಿವಾದಕ್ಕೆ 134 ವರ್ಷಗಳ ಕಾನೂನು ಹೋರಾಟದ ಇತಿಹಾಸವಿದೆ. ಆದರೆ, ರಾಮಜನ್ಮ ಭೂಮಿಗೆ ಒತ್ತಾಯಿಸಿ 1992 ಡಿಸೆಂಬರ್ 6 ರಂದು ರಾಮ ಕರಸೇವಕರು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರು. ಪರಿಣಾಮ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಕೋಮುಗಲಭೆಗೆ ಇದು ಕಾರಣವಾಗಿತ್ತು. ಹೀಗಾಗಿ ದೀರ್ಘ ಕಾಲ ಈ ಕುರಿತು ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

  • Share this:
ನವ ದೆಹಲಿ (ಅಕ್ಟೋಬರ್ 16); ಕಳೆದ 40 ದಿನಗಳಿಂದ ನಿರಂತರ ವಿಚಾರಣೆಗೆ ಒಳಗಾಗುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಯೋಧ್ಯೆ ಭೂ ವಿವಾದ ಕೊನೆಗೂ ಮುಕ್ತಾಯದ ಹಂತ ತಲುಪಿದ್ದು, ಸುಪ್ರೀಂ ಕೋರ್ಟ್ ಇಂದು ಸಂಜೆ.5 ಗಂಟೆಯ ವೇಳೆಗೆ ತನ್ನ ವಿಚಾರಣೆಯನ್ನು ಮುಗಿಸಲಿದೆ. ಅಲ್ಲದೆ, ನವೆಂಬರ್​ 17ಕ್ಕೆ ಈ ಕುರಿತು ಅಂತಿಮ ತೀರ್ಪು ನೀಡಲಿದೆ.

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠದ ಎದುರು ಇಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಯುತ್ತಿದೆ. ಈ ವೇಳೆ ರಾಮ್ ಲಲ್ಲಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಸರನ್ ಅಯೋಧ್ಯೆ ವಿಚಾರಣೆಯನ್ನು ಇನ್ನುಷ್ಟು ಕಾಲ ನಡೆಸಬೇಕು ಎಂದು ಮನವಿ ಮಾಡಿಕೊಂಡರು.

ಈ ವೇಳೆ ನ್ಯಾಯವಾದಿಯ ಕೋರಿಕೆಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, “ಈ ವರೆಗೆ ನಡೆದಿರುವ ವಿಚಾರಣೆಗಳೇ ಸಾಕಷ್ಟು ಆಗೋಗಿದೆ. ಅಯೋಧ್ಯೆ ಮಧ್ಯಸ್ಥಿತಿಕೆ ತಂಡವೂ ತನ್ನ ಸಮಗ್ರ ವರದಿಯನ್ನು ನೀಡಿದೆ. ಹೀಗಾಗಿ ಇಂದು ಸಂಜೆ 5 ಗಂಟೆಯ ಒಳಗಾಗಿ ಪ್ರಕರಣದ ಕೊನೆಯ ಹಂತದ ವಿಚಾರಣೆಯನ್ನು ಮುಗಿಸಲಾಗುವುದು. ಅಲ್ಲದೆ, ನವೆಂಬರ್ 17 ರಂದು ಸುಪ್ರೀಂ ಕೋರ್ಟ್ ಈ ಕುರಿತ ಅಂತಿಮ ತೀರ್ಪು ನೀಡಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.

ನಂತರ ವಿಚಾರಣೆ ಆರಂಭವಾದಾಗಲೂ ಸತತ ತನ್ನ ವಾದ ಮಂಡಿಸಿರುವ ಹಿರಿಯ ವಕೀಲ ಕೆ. ಪರಸರನ್, “ಅಯೋಧ್ಯೆ ಸುತ್ತಲೂ ಸಾಕಷ್ಟು ಮಸೀದಿಗಳಿವೆ. ಇಸ್ಲಾಂ ಧರ್ಮದವರು ಎಲ್ಲಿಬೇಕಾದರೂ ಪ್ರಾರ್ಥನೆ ಸಲ್ಲಿಸಬಹುದು. ಆದರೆ, ಹಿಂದೂಗಳು ರಾಮ ಹುಟ್ಟಿದ ಸ್ಥಳದಲ್ಲೇ ಪ್ರಾರ್ಥನೆ ಸಲ್ಲಿಸಬೇಕು. ಇದೇ ಕಾರಣಕ್ಕೆ ಶತಮಾನಗಳಿಂದ ಈ ವ್ಯಾಜ್ಯ ಹಾಗೆ ಉಳಿದುಕೊಂಡಿದೆ” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಡಲು ಪ್ರಯತ್ನಿಸಿದರು.

ಅಯೋಧ್ಯೆ ಭೂ ವಿವಾದಕ್ಕೆ 134 ವರ್ಷಗಳ ಕಾನೂನು ಹೋರಾಟದ ಇತಿಹಾಸವಿದೆ. ಆದರೆ, ರಾಮಜನ್ಮ ಭೂಮಿಗೆ ಒತ್ತಾಯಿಸಿ 1992 ಡಿಸೆಂಬರ್ 6 ರಂದು ರಾಮ ಕರಸೇವಕರು ಅಯೋಧ್ಯೆಯಲ್ಲಿದ್ದ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರು. ಪರಿಣಾಮ ರಾಷ್ಟ್ರದಾದ್ಯಂತ ದೊಡ್ಡ ಮಟ್ಟದ ಕೋಮುಗಲಭೆಗೆ ಇದು ಕಾರಣವಾಗಿತ್ತು. ಹೀಗಾಗಿ ದೀರ್ಘ ಕಾಲ ಈ ಕುರಿತು ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.

ಈ ತೀರ್ಪಿನಲ್ಲಿ ಅಲಹಾಬಾದ್ ಹೈಕೋರ್ಟ್ ವಿವಾದಿತ 2.77 ಎಕರೆ ಅಯೋಧ್ಯೆ ಭೂಮಿಯನ್ನು ರಾಮ್ ಲಲ್ಲಾ, ನಿರ್ಮೋಹಿ ಅಖಾರ ಮತ್ತು ಸುನ್ನಿ ವಕ್ಫ್ ಮಂಡಲಿಗೆ ಸಮನಾಗಿ ಹಂಚಿಕೆ ಮಾಡಿ ಕೈತೊಳೆದುಕೊಂಡಿತ್ತು. ಆದರೆ, ಮೂರೂ ಕಕ್ಷೀಧಾರರಿಗೆ ಈ ತೀರ್ಪು ತೃಪ್ತಿ ನೀಡದ ಕಾರಣ ಎಲ್ಲರೂ ಸುಪ್ರೀಂ ಕೋರ್ಟ್​ನಲ್ಲಿ  ಮೇಲ್ಮನವಿ ಸಲ್ಲಿಸಿದ್ದರು.

ಇದೀಗ ಸತತ 9 ವರ್ಷ ಪ್ರಕರಣದ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ಈ ವ್ಯಾಜ್ಯಕ್ಕೆ ಕೊನೆಗೂ ತಾರ್ಕಿಕ ಅಂತ್ಯ ನೀಡಲು ಮುಂದಾಗಿದ್ದು, ನವೆಂಬರ್​ 17ಕ್ಕೆ ಅಂತಿಮ ತೀರ್ಪು ನೀಡುವುದಾಗಿ ತಿಳಿಸಿದೆ. ಹೀಗಾಗಿ ಈ ತೀರ್ಪು ಭಾರತದಾದ್ಯಂತ ಸಾಕಷ್ಟು ಕುತೂಹಲ ಮೂಡಿಸಿರುವುದಂತೂ ಸುಳ್ಳಲ್ಲ.

ಇದನ್ನೂ ಓದಿ : ಇಂದಿನಿಂದ ಸುಪ್ರೀಂಕೋರ್ಟ್​​ನಲ್ಲಿ ಅಯೋಧ್ಯೆ ವಿವಾದದ ವಿಚಾರಣೆ ಮತ್ತೆ ಆರಂಭ; ನಿಷೇಧಾಜ್ಞೆ ಜಾರಿ

First published: