HOME » NEWS » National-international » RAM JANMABHOOMI RAM MANDIR SHIVALING AND SANDSTONE CARVINGS FOUND AMONG BABRI MASJID DEBRIS SNVS

Ram Janmabhoomi: ಅಯೋಧ್ಯೆ ರಾಮ ಮಂದಿರ ಸ್ಥಳದಲ್ಲಿ ಶಿವಲಿಂಗ, ಮರಳುಶಿಲೆ ಕೆತ್ತನೆ ಪತ್ತೆ

Ram Mandir: ಇದೇ ಮಾರ್ಚ್ ತಿಂಗಳಲ್ಲಿ ರಾಮ ದೇವರ ಮೂರ್ತಿಯನ್ನು ಅದೇ ಆವರಣದಲ್ಲಿರುವ ಮಾನಸ್ ಭವನ್​ ಬಳಿ ತಾತ್ಕಾಲಿಕವಾಗಿ ನಿರ್ಮಿಸಿರುವ ಕಟ್ಟಡವೊಂದರಲ್ಲಿ ಇಡಲಾಗಿದೆ.

news18-kannada
Updated:May 21, 2020, 3:15 PM IST
Ram Janmabhoomi: ಅಯೋಧ್ಯೆ ರಾಮ ಮಂದಿರ ಸ್ಥಳದಲ್ಲಿ ಶಿವಲಿಂಗ, ಮರಳುಶಿಲೆ ಕೆತ್ತನೆ ಪತ್ತೆ
ರಾಮನ ಜನ್ಮಸ್ಥಳವೆಂದು ಭಾವಿಸಲಾಗಿರುವ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಪತ್ತೆಯಾದ ಶಿವಲಿಂಗಗಳು
  • Share this:
ಅಯೋಧ್ಯೆ, ಉ.ಪ್ರ.(ಮೇ 21): ರಾಮನ ಜನ್ಮಸ್ಥಳವೆಂದು ಭಾವಿಸಲಾಗಿರುವ ಬಾಬರಿ ಮಸೀದಿ ಇದ್ದ ಜಾಗದಲ್ಲಿ ಶಿವಲಿಂಗಗಳು ಪತ್ತೆಯಾಗಿವೆ. ಹಾಗೆಯೇ, ಮರಳುಗಲ್ಲು(Sandstone) ಮೇಲೆ ಕೆತ್ತನೆಗಳಿರುವುದು ಕಂಡುಬಂದಿದೆ. ರಾಮಜನ್ಮಭೂಮಿ ಸ್ಥಳವನ್ನು ಮಟ್ಟ ಮಾಡುವ ಕಾರ್ಯದ ವೇಳೆ ಈ ವಸ್ತುಗಳು ಸಿಕ್ಕವು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಕಳೆದ 10 ದಿನಗಳಿಂದ ಅವಶೇಷಗಳನ್ನು ತೆಗೆದು ನೆಲವನ್ನು ಮಟ್ಟಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕಟ್ಟಡದ ಅವಶೇಷಗಳಲ್ಲಿ ಸ್ತಂಭಗಳು ಕಂಡವು. ಮರಳುಶಿಲೆಗಳಲ್ಲಿ ಶಿಲ್ಪಾಕೃತಿಗಳೂ ಸಿಕ್ಕವು. ಒಂದು ಶಿವಲಿಂಗವೂ ಇತ್ತು. ಕುಬೇರ್ ತೀಲಾದಲ್ಲೂ ಒಂದು ಶಿವಲಿಂಗ ಸಿಕ್ಕಿತು” ಎಂದು ಚಂಪತ್ ರಾಯ್ ತಿಳಿಸಿದ್ದಾರೆ.

ಇದನ್ನೂ ಓದಿ: Rajiv Gandhi Death Anniversary – ರಾಜೀವ್ ಗಾಂಧಿ ಹತ್ಯೆ ದೃಶ್ಯ ಕಂಡ ಪತ್ರಕರ್ತರೊಬ್ಬರ ಅನುಭವ

ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣದಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ವಿವಾದಿತ ಜಾಗವನ್ನು ಹಿಂದೂಗಳಿಗೆ ಒಪ್ಪಿಸಿದೆ. ಅಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದೆ. ಅದರಂತೆ ಅಲ್ಲಿ ಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತದ ಅನುಮತಿ ಪಡೆದು ಸ್ಥಳವನ್ನು ಮಟ್ಟಗೊಳಿಸಲಾಗುತ್ತಿದೆ.

ಇದೇ ಮಾರ್ಚ್ ತಿಂಗಳಲ್ಲಿ ರಾಮ ದೇವರ ಮೂರ್ತಿಯನ್ನು ಅದೇ ಆವರಣದಲ್ಲಿರುವ ಮಾನಸ್ ಭವನ್​ ಬಳಿ ತಾತ್ಕಾಲಿಕವಾಗಿ ನಿರ್ಮಿಸಿರುವ ಕಟ್ಟಡವೊಂದರಲ್ಲಿ ಇಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮಂದಿರ ನಿರ್ಮಾಣ ಆಗುವವರೆಗೂ ರಾಮ ಲಲ್ಲಾ ವಿಗ್ರಹವನ್ನು ಅಲ್ಲಿಯೇ ಇಡಲಾಗುತ್ತದೆ.
First published: May 21, 2020, 1:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories