HOME » NEWS » National-international » RAM IS LOVE RAHUL GANDHI TWEETS ON AYODHYA GROUNDBREAKING CEREMONY MAK

Ram Mandir: ’ಶ್ರೀರಾಮ ಎಂದರೆ ಪ್ರೀತಿ-ಸಹಾನುಭೂತಿ’; ಅಯೋಧ್ಯೆ ಭೂಮಿ ಪೂಜೆಯನ್ನು ಕೊಂಡಾಡಿದ ರಾಹುಲ್ ಗಾಂಧಿ

ಪುರುಷೋತ್ತಮ ಭಗವಾನ್ ರಾಮನು ಅತ್ಯುತ್ತಮ ಮಾನವ ಗುಣಗಳ ಅಭಿವ್ಯಕ್ತಿ. ಅವನು ನಮ್ಮ ಮನಸ್ಸಿನ ಆಳದಲ್ಲಿ ಇರುವ ಮಾನವೀಯತೆಯನ್ನು ಪ್ರೀತಿಯನ್ನು ಪ್ರತಿನಿಧಿಸುತ್ತಾನೆ. ಅವನು ಎಂದಿಗೂ ದ್ವೇಷದಲ್ಲಿ ವ್ಯಕ್ತವಾಗುವುದಿಲ್ಲ. ಸಹಾನುಭೂತಿಯಾದ ರಾಮ ಎಂದಿಗೂ ಕ್ರೌರ್ಯದಲ್ಲಿ ಪ್ರಕಟವಾಗುವುದಿಲ್ಲ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ.

MAshok Kumar | news18-kannada
Updated:August 5, 2020, 6:42 PM IST
Ram Mandir: ’ಶ್ರೀರಾಮ ಎಂದರೆ ಪ್ರೀತಿ-ಸಹಾನುಭೂತಿ’; ಅಯೋಧ್ಯೆ ಭೂಮಿ ಪೂಜೆಯನ್ನು ಕೊಂಡಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ
  • Share this:
ನವ ದೆಹಲಿ (ಆಗಸ್ಟ್ 05); ಅಯೋಧ್ಯೆಯಲ್ಲಿ ಇಂದು ನಡೆದ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಬೆನ್ನಿಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, “ರಾಮ ಎಂದರೆ ಪ್ರೀತಿ, ಸಹಾನುಭೂತಿ ಮತ್ತು ನ್ಯಾಯದ ಸಾಕಾರ ರೂಪ. ಆತನೋರ್ವ ಪುರುಷೋತ್ತಮ” ಎಂದು ಶ್ಲಾಘಿಸಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಕಾಂಗ್ರೆಸ್ ನಿಲುವೇನು? ಎಂಬ ಪ್ರಶ್ನೆ ಇತ್ತೀಚೆಗೆ ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಮಹತ್ವ ಪಡೆದಿತ್ತು. ಆದರೆ, ಈವರೆಗೆ ಕಾರ್ಯಕ್ರಮದ ಕುರಿತು ಮೌನ ಸಾಧಿಸಿದ್ದ ಕಾಂಗ್ರೆಸ್‌ ನಿನ್ನೆ ಮೌನ ಮುರಿದಿತ್ತು.

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕುರಿತು ನಿನ್ನೆಯೇ ಟ್ವೀಟ್ ಮಾಡಿದ್ದ ಪ್ರಿಯಾಂಕ ಗಾಂಧಿ, “ಅಯೋಧ್ಯೆಯ ಭೂಮಿ ಪೂಜೆ ಸಮಾರಂಭವು ರಾಷ್ಟ್ರೀಯ ಏಕತೆ, ಭ್ರಾತೃತ್ವ ಮತ್ತು ಸಾಂಸ್ಕೃತಿಕ ಸಭೆಯ ಸಂದರ್ಭವಾಗಲಿದೆ” ಎಂದು ಮೆಚ್ಚುಗೆ ಸೂಚಿಸಿದ್ದರು. ಆದರೆ, ಅವರು ಮೆಚ್ಚುಗೆ ಸೂಚಿಸಿದ ಮರು ದಿನವೇ ರಾಹುಲ್ ಗಾಂಧಿಯೂ ಅಯೋಧ್ಯೆ ಕಾರ್ಯಕ್ರಮವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.ಬಿಜೆಪಿ ಪಕ್ಷವನ್ನು ಎಲ್ಲೂ ಉಲ್ಲೇಖಿಸದೆ ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಪುರುಷೋತ್ತಮ ಭಗವಾನ್ ರಾಮನು ಅತ್ಯುತ್ತಮ ಮಾನವ ಗುಣಗಳ ಅಭಿವ್ಯಕ್ತಿ. ಅವನು ನಮ್ಮ ಮನಸ್ಸಿನ ಆಳದಲ್ಲಿ ಇರುವ ಮಾನವೀಯತೆಯನ್ನು ಪ್ರೀತಿಯನ್ನು ಪ್ರತಿನಿಧಿಸುತ್ತಾನೆ. ಅವನು ಎಂದಿಗೂ ದ್ವೇಷದಲ್ಲಿ ವ್ಯಕ್ತವಾಗುವುದಿಲ್ಲ. ಸಹಾನುಭೂತಿಯಾದ ರಾಮ ಎಂದಿಗೂ ಕ್ರೌರ್ಯದಲ್ಲಿ ಪ್ರಕಟವಾಗುವುದಿಲ್ಲ. ರಾಮ ಎಂದರೆ ನ್ಯಾಯ, ಆತ ಎಂದಿಗೂ ಅನ್ಯಾಯದ ಮೂಲಕ ಪ್ರಕಟವಾಗುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಎಂಬುದು ರಾಷ್ಟ್ರೀಯ ಕಾರ್ಯಕ್ರಮ. ಶಿಷ್ಠಾಚಾರದಂತೆ ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳನ್ನೂ ಆಹ್ವಾನಿಸುವುದು ವಾಡಿಕೆ. ಆದರೆ, ಈ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ನಾವುದೇ ನಾಯಕರನ್ನು ಆಹ್ವಾನಿಸಿಲ್ಲ. ಅಲ್ಲದೆ, ರಾಮ ಮಂದಿರದ ಸಾಕ್ಷಾತ್ಕಾರಕ್ಕಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಡಿದ್ದ ಸ್ವತಃ ಬಿಜೆಪಿ ನಾಯಕರಾದ ಲಾಲ್‌ಕೃಷ್ಣ ಅಡ್ವಾನಿ, ಮುರಳಿ ಮನೋಹರ್‌ ಜೋಶಿ ಹಾಗೂ ಉಮಾ ಭಾರತಿಗೂ ಆಹ್ವಾನ ನೀಡಿಲ್ಲ.

ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಕೇತಿಕವಾಗಿ 40 ಕೆಜಿ ತೂಕದ ಮೊದಲ ಬೆಳ್ಳಿ ಇಟ್ಟಿಗೆಯನ್ನು ಹಾಕುವ ಮೂಲಕ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ದೃಶ್ಯಕ್ಕೆ ಇಡೀ ಭಾರತ ಇಂದು ಸಾಕ್ಷಿ ನುಡಿದಿದೆ.

ಈ ಸಂದರ್ಭದಲ್ಲಿ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉತ್ತರಪ್ರದೇಶ ರಾಜ್ಯಪಾಲ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಜನ ಗಣ್ಯರು ಉಪಸ್ಥಿತರಿದ್ದರು.
Published by: MAshok Kumar
First published: August 5, 2020, 6:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories