Ram Gopal Varma Tweet: ರಾಷ್ಟ್ರಪತಿ ದ್ರೌಪದಿಯಾದರೆ ಪಾಂಡವರು ಯಾರು? ಕೌರವರು ಯಾರು?

ದ್ರೌಪದಿ ಮುರ್ಮು ಕುರಿತು ರಾಮ್‌ಗೋಪಾಲ್ ವರ್ಮಾ ಟ್ವೀಟ್

ದ್ರೌಪದಿ ಮುರ್ಮು ಕುರಿತು ರಾಮ್‌ಗೋಪಾಲ್ ವರ್ಮಾ ಟ್ವೀಟ್

‘ವಿವಾದ ಅಂದ್ರೆ ರಾಮ್ ಗೋಪಾಲ್ ವರ್ಮಾ, ರಾಮ್ ಗೋಪಾಲ್ ವರ್ಮಾ ಅಂದ್ರೆ ವಿವಾದ’ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ಧ ಅವಹೇಳನದ ಟ್ವೀಟ್ ಮಾಡಿ ಆರ್‌ಜಿವಿ ಭಾರೀ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

  • Share this:

‘ವಿವಾದಗಳ ಕಿಂಗ್’ (Controversy King) ಎಂದೇ ಅಪಖ್ಯಾತಿ ಪಡೆದ ಬಾಲಿವುಡ್‌ನ ಖ್ಯಾತ ನಿರ್ದೇಶಕ (Bollywood Famous Director) ರಾಮ್ ಗೋಪಾಲ್ ವರ್ಮಾ (Ram Gopal Varma) ಮತ್ತೆ ವಿವಾದದ ಮೂಲಕ ಸುದ್ದಿ ಮಾಡಿದ್ದಾರೆ. ಅಂದಹಾಗೆ ‘ವಿವಾದ ಅಂದ್ರೆ ರಾಮ್ ಗೋಪಾಲ್ ವರ್ಮಾ, ರಾಮ್ ಗೋಪಾಲ್ ವರ್ಮಾ ಅಂದ್ರೆ ವಿವಾದ’ ಎನ್ನುವುದು ಎಲ್ಲರಿಗೂ ಗೊತ್ತಿರುವಂತದ್ದೇ. ಇದೀಗ ಎನ್‌ಡಿಎ (NDA) ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ (NDA Presidential candidate) ದ್ರೌಪದಿ ಮುರ್ಮು (Draupadi Murmur) ವಿರುದ್ಧ ಅವಹೇಳನದ ಟ್ವೀಟ್ (Tweet) ಮಾಡಿ ಆರ್‌ಜಿವಿ (RGV) ಭಾರೀ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. “ದ್ರೌಪದಿ ರಾಷ್ಟ್ರಪತಿ ಆದರೆ, ಪಾಂಡವರು (Pandavas) ಯಾರು? ಮುಖ್ಯವಾಗಿ ಕೌರವರು (Kauravas) ಯಾರು?” ಅಂತ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್‌ಗೆ ಸಾರ್ವಜನಿಕ ವಲಯ ಹಾಗೂ ಬಿಜೆಪಿ (BJP) ಪಾಳೆಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಹೈದರಾಬಾದ್‌ನಲ್ಲಿ (Hyderabad) ಬಿಜೆಪಿ ನಾಯಕರೋರ್ವರು ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು (Complaint) ಕೂಡ ದಾಖಲಿಸಿದ್ದಾರೆ.


ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಟ್ವೀಟ್


ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ಧ ಆಕ್ಷೇಪಾರ್ಯ ಟ್ವೀಟ್ ಮಾಡಿದ್ದಾರೆ. “'ದ್ರೌಪತಿ ರಾಷ್ಟ್ರಪತಿಯಾದರೆ ಪಾಂಡವರು ಯಾರು? ಅದಕ್ಕೂ ಮುಖ್ಯವಾಗಿ ಕೌರವರು ಯಾರು??' ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ


ಆರ್‌ಜಿವಿ ಟ್ವೀಟ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದು ಉದ್ಧಟತನದ ಮಾತು ಅಂತ ಬಹುತೇಕರು ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆ ನೀಡುವ ರಾಮ್ ಗೋಪಾಲ್ ವರ್ಮಾ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತ ಅನೇಕರು ಕಿಡಿಕಾರಿದ್ದಾರೆ.


ಇದನ್ನೂ ಓದಿ: Draupadi Murma: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ


ಆರ್‌ಜಿವಿ ವಿರುದ್ಧ ಬಿಜೆಪಿಯಿಂದ ದೂರು


ಇನ್ನು ರಾಮ್ ಗೋಪಾಲ್ ವರ್ಮಾ ಆಕ್ಷೇಪಾರ್ಯ ಟ್ವೀಟ್‌ಗೆ ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತರಪಡಿಸಿದ್ದಾರೆ. ತೆಲಂಗಾಣದ ಬಿಜೆಪಿ ನಾಯಕ ಜಿ ನಾರಾಯಣ ರೆಡ್ಡಿ ಎಂಬುವರು ಆರ್‌ಜಿವಿ ವಿರುದ್ಧ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ನಾವು ದೂರು ಸ್ವೀಕರಿಸಿ ಅದನ್ನು ಲೀಗಲ್ ತಂಡಕ್ಕೆ ಕಳುಹಿಸಲಾಗಿದೆ. ಲೀಗಲ್‌ ತಂಡದಿಂದ ಪ್ರತಿಕ್ರಿಯೆ ಬಂದ ನಂತರವೇ ನಾವು ಮುಂದುವರೆಯಲು ಸಾಧ್ಯವಾಗುತ್ತದೆ. ಆನಂತರ ಎಸ್‌ಸಿ ಮತ್ತು ಎಸ್‌ಟಿ ಆ್ಯಕ್ಟ್ ಅಡಿಯಲ್ಲಿ ರಾಮ್ ಗೋಪಾಲ್ ವರ್ಮಾ ವಿರುದ್ಧ ದೂರು ದಾಖಲಿಸಬಹುದು' ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನು ಓದಿ: Ram Gopal Varma ಅವರ ನಿಜವಾದ ಹೆಸರು ಇದಂತೆ, ಅಯ್ಯೋ, ಗೊತ್ತಾದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ!


ವಿವಾದವಾಗುತ್ತಿದ್ದಂತೆ ಉಲ್ಟಾ ಹೋಡೆದ ನಿರ್ದೇಶಕ

top videos


    ಇನ್ನು ಟ್ವೀಟ್ ವೈರಲ್ ಆಗಿ, ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆ ರಾಮ್ ಗೋಪಾಲ್ ವರ್ಮಾ ಉಲ್ಟಾ ಹೊಡೆದಿದ್ದಾರೆ. ಇದನ್ನು ಕೇವಲ ವ್ಯಂಗ್ಯವಾಗಿ ಹೇಳಲಾಗಿದೆ ಮತ್ತು ಬೇರೆ ಯಾವುದೇ ರೀತಿಯ ಉದ್ದೇಶದಿಂದ ಅಲ್ಲ ಅಂತ ಸಮಜಾಯಿಷಿ ಕೊಟ್ಟಿದ್ದಾರೆ. ಮಹಾಭಾರತದಲ್ಲಿ ದ್ರೌಪದಿ ನನ್ನ ನೆಚ್ಚಿನ ಪಾತ್ರ. ಅಲ್ಲದೆ ದ್ರೌಪದಿ ಎಂದು ಹೆಸರು ಇಟ್ಟುಕೊಳ್ಳುವವರ ಸಂಖ್ಯೆ ಬಹಳ ಕಡಿಮೆ. ಈಗ ದ್ರೌಪದಿ ಅಂತ ಹೆಸರು ಕೇಳಿದ ತಕ್ಷಣ ನಾನು ಮಹಾಭಾರತದ ಪಾತ್ರವನ್ನು ನೆನಪಿಸಿಕೊಂಡೆ. ಇದರಲ್ಲಿ ಬೇರೆ ಯಾವ ಉದ್ದೇಶವೂ ಇಲ್ಲ ಯಾರ ಭಾವನೆಗಳಿಗೂ ಧಕ್ಕೆ ತರಲು ನಾನು ಈ ರೀತಿ ಹೇಳಿಕೆ ಟ್ವೀಟ್ ಮಾಡಿಲ್ಲ' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

    First published: