ರಾಮಭಕ್ತ ಮುಸ್ಲಿಮ; ಅಯೋಧ್ಯೆ ರಾಮ ಮಂದಿರದ ಭೂಮಿಪೂಜೆಗೆ 800 ಕಿಮೀ ಪ್ರಯಾಣಿಸುತ್ತಿರುವ ಛತ್ತೀಸ್ಗಡ ವ್ಯಕ್ತಿ
ಮುಸ್ಲಿಮ್ ಧರ್ಮೀಯನಾದರೂ ತಾನೊಬ್ಬ ರಾಮಭಕ್ತ. ತಮ್ಮೆಲ್ಲರ ಆದಿ ಪೂರ್ವಜ ಶ್ರೀರಾಮಚಂದ್ರನೇ ಎಂದು ಮೊಹಮ್ಮದ್ ಫೇಜ್ ಖಾನ್ ಹೇಳುತ್ತಾರೆ.
news18-kannada Updated:July 27, 2020, 12:14 PM IST

ಶ್ರೀರಾಮ
- News18 Kannada
- Last Updated: July 27, 2020, 12:14 PM IST
ರಾಯಪುರ್(ಜುಲೈ 27): ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಲಿದೆ. ದೇಶಾದ್ಯಂತ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಛತ್ತೀಸ್ಗಡದ ಮುಸ್ಲಿಮ್ ವ್ಯಕ್ತಿಯೊಬ್ಬರು ಈ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಳ್ಳಲು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಛತ್ತೀಸ್ಗಡದ ಚಾಂದ್ಖುರಿ ಗ್ರಾಮದ ಮೊಹಮ್ಮದ್ ಫೇಜ್ ಖಾನ್ ಅನೇಕ ವಿರೋಧಗಳು ಎದುರಾದರೂ ಲೆಕ್ಕಿಸದೆ ಅಯೋಧ್ಯೆಗೆ ಹೋಗುತ್ತಿದ್ದಾರೆ.
ತನ್ನನ್ನು ತಾನು ರಾಮಭಕ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೊಹಮ್ಮದ್ ಫೇಜ್ ಖಾನ್ ಈಗಾಗಲೇ ಮಧ್ಯಪ್ರದೇಶವನ್ನು ಪ್ರವೇಶಿಸಿದ್ದು, ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ತಲುಪಲು ಕಾತರರಾಗಿದ್ದಾರೆ. ಫೇಜ್ ಖಾನ್ ಅವರಿರುವ ಊರು ರಾಮನ ತಾಯಿ ಕೌಶಲ್ಯಳ ಜನ್ಮಸ್ಥಳವೆನ್ನಲಾಗಿದೆ. ಶ್ರೀರಾಮಚಂದ್ರ ತಮ್ಮ ಪೂರ್ವಜರು ಎಂದವರು ಹೇಳುತ್ತಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದು ಅವಮಾನಕಾರಿ ಕ್ರಮ: ಒಮರ್ ಅಬ್ದುಲ್ಲಾ
“ಧರ್ಮದಲ್ಲಿ ನಾನು ಮುಸ್ಲಿಮ್. ಆದರೆ, ಶ್ರೀರಾಮನ ಭಕ್ತ ನಾನು. ನಮ್ಮ ಪೂರ್ವಜರು ಯಾರೆಂದು ನೋಡುವುದಾದರೆ ಅವರು ಹಿಂದೂಗಳೇ ಎಂಬುದು ಗೊತ್ತಾಗುತ್ತದೆ. ಅವರ ಹೆಸರು ರಾಮಲಾಲ್ ಎಂದೋ, ಶ್ಯಾಮಲಾಲ್ ಎಂದೋ ಇದ್ದಿರುತ್ತದೆ. ನಾವು ಚರ್ಚ್ಗೆ ಹೋಗಲಿ, ಮಸೀದಿಗೆ ಹೋಗಲಿ ನಾವು ಹಿಂದೂ ಮೂಲದವರೇ ಆಗಿದ್ದೇವೆ” ಎಂದು ಮೊಹಮ್ಮದ್ ಫೇಜ್ ಖಾನ್ ಹೇಳಿದರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಫೇಜ್ ಖಾನ್ ಅವರು ತಮ್ಮ ಈ ರಾಮಭಕ್ತಿಗೆ ಅವರ ಧರ್ಮದ ಕೆಲವರಿಂದ ಅತೀವ ವಿರೋಧ ಎದುರಿಸಿದ್ದುಂಟು. ಪಾಕಿಸ್ತಾನದ ಕೆಲ ಜನರು ಹಿಂದೂ ಮತ್ತು ಮುಸ್ಲಿಮ್ ಹೆಸರಲ್ಲಿ ನಕಲಿ ಐಡಿಗಳನ್ನ ರಚಿಸಿ ಬೇಕಂತಲೇ ಸೋಷಿಯಲ್ ಮೀಡಿಯಾದಲ್ಲಿ ಧ್ವೇಷಪೂರಿತ ಹೇಳಿಕೆಗಳನ್ನ ಕೊಡುತ್ತಿದ್ಧಾರೆ. ಭಾರತದಲ್ಲಿ ಎಲ್ಲಾ ಸಮುದಾಯಗಳು ಕಚ್ಚಾಡುತ್ತಿವೆ ಎಂದು ತೋರಿಸಲು ಈ ಕುತಂತ್ರ ಮಾಡುತ್ತಿದ್ಧಾರೆ ಎಂದು ಫೇಜ್ ಬೇಸರಪಡುತ್ತಾರೆ.
ಭಾರತೀಯ ಮುಸ್ಲಿಮರು ತಮ್ಮ ಪೂರ್ವಜರು ಹಿಂದೂಗಳೆಂದು ಹೇಳುತ್ತಿರುವುದು ಇದೇ ಮೊದಲಲ್ಲ. ಹಲವರು ಈ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪಾಕಿಸ್ತಾನದ ಕವಿ ಅಲ್ಲಾಮ ಇಕ್ಬಾಲ್ ಕೂಡ ಇಂಥದ್ದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರಿಯಾದ ದೃಷ್ಟಿಕೋನ ಇರುವ ವ್ಯಕ್ತಿಗೆ ಕಣ್ಣಿಗೆ ಶ್ರೀರಾಮನು ಭಾರತದ ದೇವರು ಎಂಬುದು ಅರಿವಾಗುತ್ತದೆ ಎಂದು ಪಾಕ್ ಕವಿ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ಧಾರೆ.ಇದನ್ನೂ ಓದಿ: SBI Recruitment 2020: 3850 ಸರ್ಕಲ್ ಆಫೀಸರ್ ಹುದ್ದೆಗೆ ಆಹ್ವಾನ ನೀಡಿದ SBI; ವಿದ್ಯಾರ್ಹತೆ, ವಯಸ್ಸಿನ ಮಿತಿ ಬಗ್ಗೆ ಇಲ್ಲಿದೆ ಮಾಹಿತಿ
ಇದೇ ವೇಳೆ, ರಾಮ ಜನ್ಮಭೂಮಿ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲು ಸಿದ್ಧತೆ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಆಗಸ್ಟ್ 3ರಿಂದ ಮೂರು ದಿನಗಳ ಕಾಲ ವೈದಿಕ ಪೂಜೆ ವಿಧಿವಿಧಾನಗಳು ನಡೆಯಲಿವೆ. ಆಗಸ್ಟ್ 4ರಂದು ರಾಮಾಚಾರ್ಯ ಪೂಜೆಯಾದರೆ, ಆಗಸ್ಟ್ 5ರಂದು ಮಧ್ಯಾಹ್ನ 12:15ಕ್ಕೆ ಭೂಮಿ ನಡೆಯುತ್ತದೆ. ಈ ಭೂಮಿಪೂಜೆ ಕಾರ್ಯಕ್ರಮದ ವೇಳೆ ಗರ್ಭಗುಡಿಯಲ್ಲಿ ಐದು ಬೆಳ್ಳಿ ಇಟ್ಟಿಗೆಗಳನ್ನ ಇಡಲಾಗುತ್ತದೆ. ಪುರಾಣಗಳ ಪ್ರಕಾರ ಈ ಐದು ಇಟ್ಟಿಗೆಗಳು ಐದು ಗ್ರಹಗಳನ್ನ ಸಂಕೇತಿಸುತ್ತದೆ. ಪ್ರಧಾನಿ ಮೋದಿ ಅವರು ಮೊದಲ ಇಟ್ಟಿಗೆಯನ್ನ ಗರ್ಭಗುಡಿಗೆ ಇಡಲಿದ್ಧಾರೆ.
ವಿಶ್ವ ಹಿಂದೂ ಪರಿಷತ್ ಸಂಘಟನೆಯು ಶ್ರೀರಾಮ ಮಂದಿರದ ರೂಪುರೇಷೆ, ವಿನ್ಯಾಸವನ್ನು ಮಾಡಿದೆ. ಬಾಬರ್ ಕಟ್ಟಿದ್ದ ಬಾಬ್ರಿ ಮಸೀದಿಯ ಸ್ಥಳವು ರಾಮನ ಜನ್ಮಸ್ಥಳವಾಗಿದ್ದು, ಅಲ್ಲಿ ಮುಂಚಿತವಾಗಿ ಮಂದಿರ ಇತ್ತು. ಬಾಬರ್ ಇದನ್ನು ಕೆಡವಿ ಮಸೀದಿ ಕೆಡವಿದ್ದ ಎಂಬುದು ಹಿಂದೂಗಳ ವಾದ. ನ್ಯಾಯಾಲಯ ಈ ವಿವಾದದ ವಿಚಾರಣೆ ನಡೆಸಿ ಹಿಂದೂಗಳ ಸುಪರ್ದಿಗೆ ಈ ಸ್ಥಳವನ್ನು ವಹಿಸಿ ತೀರ್ಪು ನೀಡಿದೆ. ಹೀಗಾಗಿ, ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುವ ನಿರೀಕ್ಷೆ ಇದೆ.
ತನ್ನನ್ನು ತಾನು ರಾಮಭಕ್ತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೊಹಮ್ಮದ್ ಫೇಜ್ ಖಾನ್ ಈಗಾಗಲೇ ಮಧ್ಯಪ್ರದೇಶವನ್ನು ಪ್ರವೇಶಿಸಿದ್ದು, ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ತಲುಪಲು ಕಾತರರಾಗಿದ್ದಾರೆ.