ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಸಿದ್ಧತೆ; ಮುಂದಿನ 2 ವಾರಗಳ ಕಾಲ 4 ರಾಜ್ಯಗಳಲ್ಲಿ ಮೆಗಾ ರ‍್ಯಾಲಿ

ಪ್ರಧಾನಿ ಮೋದಿ ನೇತೃತ್ವದಲ್ಲಿ ಮುಂದಿನ 2 ವಾರಗಳ ಕಾಲ 4 ರಾಜ್ಯಗಳಲ್ಲಿ ವಿವಿಧೆಡೆ ಚುನಾವಣಾ ಪ್ರಚಾರ, ಬೃಹತ್​ ರ‍್ಯಾಲಿ ಮತ್ತು ಮಲ್ಟಿ ಮೀಡಿಯಾ ಅಭಿಯಾನವನ್ನು ನಡೆಸಲು ಬಿಜೆಪಿ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ.

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ನವ ದೆಹಲಿ (ಫೆಬ್ರವರಿ 19); ಮುಂದಿನ ಕೆಲ ತಿಂಗಳಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಪ್ರಮುಖ 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದು, ಮುಂದಿನ 2 ವಾರಗಳ ಕಾಲ 4 ರಾಜ್ಯಗಳಲ್ಲಿ ವಿವಿಧೆಡೆ ಚುನಾವಣಾ ಪ್ರಚಾರ, ಬೃಹತ್​ ರ‍್ಯಾಲಿ ಮತ್ತು ಮಲ್ಟಿ ಮೀಡಿಯಾ ಅಭಿಯಾನವನ್ನು ನಡೆಸಲು ಬಿಜೆಪಿ ಪಕ್ಷ ಈಗಾಗಲೇ ಸಿದ್ಧತೆ ನಡೆಸಿದೆ. ಈ ಅಭಿಯಾನದಲ್ಲಿ ಪ್ರಧಾನಿ ಮೋದಿಯ ಟ್ರೇಡ್​ಮಾರ್ಕ್​ ಭಾಷಣಗಳು, ಬಹು ಮಾಧ್ಯಮ ಅಭಿಯಾನಗಳು ಇರಲಿವೆ. ಈ ಮೂಲಕ ಬಿಜೆಪಿ ಪಕ್ಷಕ್ಕೆ ಮತಗಳನ್ನು ಸೆಳೆಯಲು ಮೋದಿ ಮುಂದಾಗಲಿದ್ದಾರೆ. ಅಲ್ಲದೆ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಹಿಡಿಯಲು ಮುಂದಾಗಿರುವ ಕಾರಣ ಈ ರಾಜ್ಯದಲ್ಲಿ ಮೋದಿ ಹೆಚ್ಚು ರ‍್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.

  ಕೇರಳದಲ್ಲಿ ಈ ವರೆಗೆ ಬಿಜೆಪಿ ಕೇವಲ ಓರ್ವ ಶಾಸಕನನ್ನು ಮಾತ್ರ ಹೊಂದಿದೆ. ಇದೇ ಕಾರಣಕ್ಕೆ ಕೇರಳದಲ್ಲಿ ಪಕ್ಷವನ್ನು ಮತ್ತಷ್ಟು ಬಲಿಷ್ಠಗೊಳಿಸುವುದಕ್ಕಾಗಿ ಮೆಟ್ರೋಮ್ಯಾನ್​ ಖ್ಯಾತಿಯ ಇ. ಶ್ರೀಧರನ್​ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲಾಗಿದೆ. ಅಲ್ಲದೆ, ಪ್ರಧಾನಿ ಮೋದಿ ತನ್ನ ಚುನಾವಣಾ ಅಭಿಯಾನವನ್ನು ಕೇರಳದಿಂದಲೇ ಆರಂಭಿಸಲಿದ್ದು, ಕೇರಳದಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನೂ ಉದ್ಘಾಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಈ ನಡುವೆ 88 ವರ್ಷದ ಇ. ಶ್ರೀಧರನ್​ ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದನಾಗಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಬಿಜೆಪಿ 75 ವರ್ಷಕ್ಕೆ ಮೇಲ್ಪಟ್ಟವರಿಗೆ ಚುನಾವಣೆ ಟಿಕೆಟ್​ ಇಲ್ಲ ಎಂಬ ತನ್ನ ಪಕ್ಷದ ನಿಯಮವನ್ನು ಮೀರಿ ಇ. ಶ್ರೀಧರನ್​ ಅವರಿಗೆ ಟಿಕೆಟ್​ ನೀಡುತ್ತದೆಯೇ? ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತದೆಯೇ? ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.

  ಕೇರಳದ ನಂತರ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಮಾರ್ಚ್​ 07 ರಂದು ಕೋಲ್ಕತ್ತಾದ ಅಪ್ರತಿಮ ಬ್ರಿಗೇಡ್ ಮೈದಾನದಲ್ಲಿ ಮೆಗಾ ರ‍್ಯಾಲಿಯನ್ನು ನಡೆಸಲು ಉದ್ದೇಶಿಸಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿನ ಟಿಎಂಸಿ ಸರ್ಕಾರವನ್ನು ಸೋಲಿಸಿ ಅಧಿಕಾರ ಹಿಡಿಯಲೇಬೇಕು ಎಂದು ಪಣ ತೊಟ್ಟಂತೆ ಕೆಲಸ ಮಾಡುತ್ತಿರುವ ಬಿಜೆಪಿ ಕೇಂದ್ರದ ನಾಯಕರು ಈಗಾಗಲೇ ಬಂಗಾಳದಲ್ಲಿ ಸಾಕಷ್ಟು ರ‍್ಯಾಲಿಗಳನ್ನು ನಡೆಸಿದ್ದಾರೆ. ಅಮಿತ್​ ಶಾ, ಜೆಪಿ ನಡ್ಡಾ ಸಾಕಷ್ಟು ಬಾರಿ ಬಂಗಾಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲದೆ, ಅನೇಕ ಟಿಎಂಸಿ ನಾಯಕರನ್ನು ಬಿಜೆಪಿಗೆ ಸೆಳೆಯುವಲ್ಲಿ ಸಫಲರಾಗಿದ್ದಾರೆ.

  ಬಂಗಾಳದ ನಂತರ ಪ್ರಧಾನಿ ನರೇಂದ್ರ ಮೋದಿ ಮಾರ್ಚ್​ ಎರಡನೇ ವಾರದಲ್ಲಿ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನರೇಂದ್ರ ಮೋದಿ ಅವರು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷಣಗಳಲ್ಲಿ ಪ್ರಸಿದ್ಧ ತಮಿಳು ಕವಿಗಳನ್ನು ನಿಯಮಿತವಾಗಿ ಉಲ್ಲೇಖಿಸುತ್ತಿರುವುದು ಗಮನಾರ್ಹ. ರಾಜ್ಯದ ಮತದಾರರನ್ನು ಸ್ಥಳಾಂತರಿಸುವ ಅವರ ಪ್ರಯತ್ನದ ಭಾಗವಾಗಿ ಇದನ್ನು ನೋಡಲಾಗುತ್ತಿದೆ.

  ಇದನ್ನೂ ಓದಿ: ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಗೆ ಈ ಹಿಂದಿನ ಸರ್ಕಾರಗಳೇ ಕಾರಣ; ಪ್ರಧಾನಿ ನರೇಂದ್ರ ಮೋದಿ ಹೇಳಿಕೆ

  ಅಲ್ಲದೆ, ಬಿಜೆಪಿ ಈ ಭಾರಿ ತಮಿಳುನಾಡಿನಲ್ಲಿ ಆಡಳಿತರೂಢ ಎಐಎಡಿಎಂಕೆ ಜೊತೆ ಚುನಾವಣಾ ಪೂರ್ವ ಮೈತ್ರಿ ಸಾಧಿಸಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದೆ. ತಮಿಳುನಾಡಿನಲ್ಲಿ ಮೋದಿ ಉಪಸ್ಥಿತಿಯು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಮತದಾರರನ್ನು ಪ್ರಚೋದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಪ್ರಧಾನಿ ಮೋದಿ ಅಸ್ಸಾಂಗೆ ಈಗಾಗಲೇ ಎರಡು ಬಾರಿ ಭೇಟಿ ನೀಡಿದ್ದಾರೆ. ಆದರೆ, ಚುನಾವಣೆ ಭಾಗವಾಗಿ ಅವರು ಮತ್ತೊಮ್ಮೆ ಅಸ್ಸಾಂಗೆ ಭೇಟಿ ನೀಡಲಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ಅವರು, ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗುವುದು ಮತ್ತು ರ್ಯಾಲಿಗಳನ್ನು ನಡೆಸುವುದರ ಜೊತೆಗೆ, ಅಲ್ಲಿ ವಿವಿಧ ಯೋಜನೆಗಳನ್ನು ಅನಾವರಣಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
  Published by:MAshok Kumar
  First published: