Happy Raksha Bandhan 2019: ರಕ್ಷಾ ಬಂಧನ ಕೇವಲ ರಾಖಿ ಹಬ್ಬವಲ್ಲ... ಅದು ಅಣ್ಣ-ತಂಗಿಯರ ಮಧುರ ಅನುಬಂಧ...!

Raksha Bandhan: ರಕ್ಷಾ ಬಂಧನ ಎಂದರೆ ಅದು ಪ್ರೀತಿಯ ಅನುಬಂಧ. ಅಣ್ಣ ತಂಗಿಯ ಪರಿಶುದ್ಧ ಬಾಂಧವ್ಯ. ಪರಸ್ಪರ ಇಬ್ಬರೂ ಬಿಟ್ಟುಕೊಡಲಾಗದ ಅಪರೂಪದ ಬಂಧನ.

Latha CG | news18
Updated:August 15, 2019, 2:11 PM IST
Happy Raksha Bandhan 2019: ರಕ್ಷಾ ಬಂಧನ ಕೇವಲ ರಾಖಿ ಹಬ್ಬವಲ್ಲ... ಅದು ಅಣ್ಣ-ತಂಗಿಯರ ಮಧುರ ಅನುಬಂಧ...!
ರಕ್ಷಾ ಬಂಧನ
  • News18
  • Last Updated: August 15, 2019, 2:11 PM IST
  • Share this:
ಇಂದು ಆಗಸ್ಟ್​​ 15. ಸ್ವಾತಂತ್ರ್ಯ ದಿನಾಚರಣೆ ಒಂದೆಡೆಯಾದರೆ, ರಕ್ಷಾ ಬಂಧನದ ಆಚರಣೆ ಇನ್ನೊಂದೆಡೆ. ರಕ್ಷಾ ಬಂಧನ ಕೇವಲ ಹಬ್ಬವಲ್ಲ, ಅದು ಅಣ್ಣ-ತಂಗಿಯರ ಅನುಬಂಧ ಹಾಗೂ ಪ್ರೀತಿಯನ್ನು ಪ್ರತಿಬಿಂಬಿಸುವ ಶ್ರೇಷ್ಠ ಆಚರಣೆ. ರಕ್ಷಾ ಬಂಧನ ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಕಂಡು ಬರುವ ಈ ಶ್ರೇಷ್ಠ ಹಬ್ಬವನ್ನು ದೇಶಾದ್ಯಂತ ಆಡಂಬರ ಹಾಗೂ ಉತ್ಸಾಹದಿಂದ ಆಚರಿಸಲಾಗುತ್ತದೆ.

ರಕ್ಷಾ ಬಂಧನ ಕೇವಲ ಒಂದು ಕೇಸರಿ ದಾರ ಕಟ್ಟಿ ಉಡುಗೊರೆ ನೀಡುವುದಲ್ಲ. ಬದಲಾಗಿ ಈ ಆಚರಣೆ ಅಣ್ಣ-ತಂಗಿಯರ ನಡುವಿನ ಪ್ರೀತಿ, ಅನುಬಂಧ, ತ್ಯಾಗ, ಮಮತೆ, ವಾತ್ಸಲ್ಯವನ್ನು ಪ್ರತಿಬಿಂಬಿಸುತ್ತದೆ. ಸದಾ ತನ್ನ ಅಣ್ಣನ ರಕ್ಷೆಯನ್ನು ಬಯಸುವ ತಂಗಿ, ರಾಖಿ ಕಟ್ಟಿ ಶ್ರೀರಕ್ಷೆಯಾಗಿರಲಿ ಎಂದು ಆಶಿಸುತ್ತಾಳೆ.ಅದೇ ರೀತಿ ಅಣ್ಣನಾದವನು ತಂಗಿಯ ಭಾವನೆಗಳಿಗೆ ಸ್ಪಂದಿಸುವ ಗೆಳೆಯನಾಗಿರುತ್ತಾನೆ. ತಂಗಿಗೆ ಶ್ರೀರಕ್ಷೆಯಾಗಿರುತ್ತಾನೆ. ತನ್ನ ತಂಗಿಯ ಜವಾಬ್ದಾರಿ ಹೊತ್ತ ವೀರನಾಗಿರುತ್ತಾನೆ. ಹೀಗಾಗಿ ರಕ್ಷಾ ಬಂಧನ ಎಂದರೆ ಅದು ಪ್ರೀತಿಯ ಅನುಬಂಧ. ಅಣ್ಣ ತಂಗಿಯ ಪರಿಶುದ್ಧ ಬಾಂಧವ್ಯ. ಪರಸ್ಪರ ಇಬ್ಬರೂ ಬಿಟ್ಟುಕೊಡಲಾಗದ ಅಪರೂಪದ ಬಂಧನ.ರಕ್ಷಾ ಬಂಧನದ ದಿನ ತಂಗಿ ಹೊಸ ಉಡುಗೆ ತೊಟ್ಟು ತನ್ನ ಪ್ರೀತಿಯ ಅಣ್ಣನ ಕೈಗೆ ರಾಖಿ ಕಟ್ಟಿ ದೇವರು ತನ್ನಣ್ಣನಿಗೆ ದೀರ್ಘಾಯುಷ್ಯ, ಸಮೃದ್ಧಿ ಮತ್ತು ಸಂತೋಷ ಕೊಡಲಿ ಎಂದು ಹಾರೈಸುತ್ತಾಳೆ. ಜೊತೆಗೆ ಆರತಿ ಮಾಡಿ ಅಣ್ಣನ ಆಶೀರ್ವಾದ ಪಡೆದು ಧನ್ಯೋಸ್ಮಿಯಾಗುತ್ತಾಳೆ.

ಅದೇ ಸಮಯದಲ್ಲಿ ಅಣ್ಣಂದಿರು ತಮ್ಮ ತಂಗಿಯರಿಗೆ ಬಟ್ಟೆ, ಆಭರಣ, ಹಣ ಅಥವಾ ಉಡುಗೊರೆಗಳನ್ನು ನೀಡಿ ರಕ್ಷಿಸುವ ಭರವಸೆ ನೀಡುತ್ತಾರೆ.

 
First published: August 14, 2019, 12:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading