ರಾಖಿ ಹಬ್ಬಕ್ಕೆ ತವರು ಮನೆಗೆ ಹೋಗಲು ಬಿಡದ ಗಂಡನಿಗೆ ಸಾರ್ವಜನಿಕವಾಗಿ ಥಳಿಸಿದ ಹೆಂಡತಿ!: ವಿಡಿಯೋ ವೈರಲ್​


Updated:August 24, 2018, 1:14 PM IST
ರಾಖಿ ಹಬ್ಬಕ್ಕೆ ತವರು ಮನೆಗೆ ಹೋಗಲು ಬಿಡದ ಗಂಡನಿಗೆ ಸಾರ್ವಜನಿಕವಾಗಿ ಥಳಿಸಿದ ಹೆಂಡತಿ!: ವಿಡಿಯೋ ವೈರಲ್​

Updated: August 24, 2018, 1:14 PM IST
ನ್ಯೂಸ್​ 18 ಕನ್ನಡ

ಈ ಬಾರಿ ರಕ್ಷಾ ಬಂಧನ(ರಾಖಿ) ಹಬ್ಬ ಆಗಸ್ಟ್​ 26 ರಂದು ನಡೆಯಲಿದೆ. ಇದಕ್ಕಾಗಿ ಈಗಾಗಲೇ ಜನರು ಶಾಪಿಂಗ್​ ಮಾಡಲಾರಂಭಿಸಿದ್ದಾರೆ. ಈ ಹಬ್ಬ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಇದು ಅಣ್ಣ- ತಂಗಿ ನಡುವಿನ ಆತ್ಮೀಯ ಪ್ರೀತಿಗೆ ಸಮರ್ಪಿತವಾಗಿದೆ. ಅಂದು ತಂಗಿ ತನ್ನ ಅಣ್ಣನ ಕೈಗೆ ರಾಖಿ ಕಟ್ಟಿದರೆ, ಅಣ್ಣ ತನ್ನ ತಂಗಿಯನ್ನು ರಕ್ಷಿಸುತ್ತೇನೆಂಬ ದೃಢ ಸಂಕಲ್ಪ ಮಾಡುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ಪರಂಪರೆ. ರಾಖಿ ಹಬ್ಬ ಸಮೀಪಿಸುತ್ತಿದ್ದು, ಸದ್ಯ ವಿಡಿಯೋ ಒಂದು ವೈರಲ್​ ಆಗಿದೆ. ಆದರೆ ಈ ಬಾರಿ ಅದನ್ನು ಯಾವ ರೀತಿಯ ಸಂದೇಶದೊಂದಿಗೆ ಶೇರ್​ ಮಾಡುತ್ತಿದ್ದಾರೆ ಎಂದು ಗಮನಿಸಿದರೆ ನಿಜಕ್ಕೂ ಹೊಟ್ಟೆ ಹುಣ್ಣಾಗುವಂತೆ ನಗುತ್ತೀರಿ.

ಈ ವಿಡಿಯೋ ಕೆಲ ವರ್ಷಗಳ ಹಿಂದಿನದ್ದಾಗಿದೆ. ಇದರಲ್ಲಿ ಯಾವ ರೀತಿ ಹೆಂಡತಿಯೊಬ್ಬಳು ತನ್ನ ಗಂಡನನ್ನು ಅಡ್ಡ ಹಾಕಿ ಸಾರ್ವಜನಿಕವಾಗಿಯೇ ಥಳಿಸುತ್ತಾಳೆಂದು ನೋಡಬಹುದಾಗಿದೆ. ಈ ವಿಡಿಯೋ ಹಳೆಯದಾಗಿದ್ದರೂ ರಕ್ಷಾ ಬಂಧನದ ಸಂದರ್ಭದಲ್ಲಿ "ಹೆಂಡತಿಯನ್ನು ರಾಖಿಯಂದು ತವರು ಮನೆಗೆ ಹೋಗದಂತೆ ತಡೆಯಬೇಡಿ. ಇದರ ಪರಿಣಾಮ ನಿಮ್ಮೆದುರಿಗಿದೆ" ಎಂಬ ಸಂದೇಶದೊಂದಿಗೆ ಶೇರ್​ ಮಾಡಲಾಗುತ್ತಿದೆ. ಈ ಕೆಳಗಿನ ವಿಡಿಯೋದಲ್ಲಿ ಹೆಂಡತಿಯು ತನ್ನ ಗಂಡನನ್ನು ಅಡ್ಡ ಹಾಕಿ ಥಳಿಸುತ್ತಿದ್ದಾಳೆ. ರಾಖಿ ಸಂದರ್ಭದಲ್ಲಿ ಈ ವಿಡಿಯೋ ಬಹಳಷ್ಟು ವೈರಲ್​ ಆಗುತ್ತಿದೆ.


ಹಿಂದೂ ಧರ್ಮದಲ್ಲಿ ರಕ್ಷಾ ಬಂಧನ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಪ್ರಾಚೀನ ಕಾಲದಿಂದಲೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಸಂವೇದನೆ ಹಾಗೂ ಭಾವನೆಗಳು ಹೆಚ್ಚು ತುಂಬಿಕೊಂಡಿರುವ ಹಬ್ಬ ಇದಾಗಿದ್ದು, ಇದು ಅಣ್ಣ- ತಂಗಿಯನ್ನು ಸ್ನೇಹದ ಬಂಧನದಲ್ಲಿ ಕಟ್ಟಿ ಹಾಕುತ್ತದೆ. ಅಣ್ಣ- ತಂಗಿಯ ಪ್ರತಿಯ ಸಂಕೇತವಾಗಿರುವ ಈ ಹಬ್ಬವನ್ನು ದೇಶದಾದ್ಯಂತ ವಿಭಿನ್ನವಾಗಿ ಆಚರಿಸಲಾಗುತ್ತದೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...