ಗಡಿ ಭದ್ರತಾ ಪಡೆ ಮಹಾನಿರ್ದೇಶಕರಾಗಿ ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ನೇಮಕ

ರಾಕೇಶ್‌ ಅಸ್ತಾನ

ರಾಕೇಶ್‌ ಅಸ್ತಾನ

1997ರಲ್ಲಿ ದೇಶದಾದ್ಯಂತ ದೊಡ್ಡ ಸದ್ದು ಮಾಡಿದ್ದ ಮೇವು ಹಗರಣದಲ್ಲಿ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ರಾಕೇಶ್‌ ಅಸ್ತಾನ ಬಂಧಿಸಿದ್ದರು. 

  • Share this:

ದೆಹಲಿ (ಆಗಸ್ಟ್‌ 17); ಗಡಿ ಭದ್ರತಾ ಪಡೆ (ಬಿಎಸ್ಎಫ್) ನ ಮಹಾನಿರ್ದೇಶಕರಾಗಿ (ಡಿಜಿ) ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಿಕ ಮಾಡಿ ಆದೇಶಿಸಿದೆ.


1984ರ ಬ್ಯಾಚ್ನ ಗುಜರಾತ್ ಕೇಡರ್ ಅಧಿಕಾರಿಯಾಗಿದ್ದ ರಾಜೇಶ್ ಅಸ್ತಾನಾ 2002 ರಲ್ಲಿ ಗೋಧ್ರಾದಲ್ಲಿ ನಡೆದ ಸಬರಮತಿ ಎಕ್ಸ್ಪ್ರೆಸ್ ಬೆಂಕಿ ಘಟನೆಯಂತಹ ಕೆಲವು ಉನ್ನತ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಿದ್ದಾರೆ. 1997ರಲ್ಲಿ ದೇಶದಾದ್ಯಂತ ದೊಡ್ಡ ಸದ್ದು ಮಾಡಿದ್ದ ಮೇವು ಹಗರಣದಲ್ಲಿ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಬಂಧಿಸಿದ್ದರು.


ಕೆಲ ವರ್ಷಗಳ ಹಿಂದೆ ರಾಕೇಶ್ ಅಸ್ತಾನಾ ವಿರುದ್ಧ ಲಂಚ ಮತ್ತು ಸುಲಿಗೆ ಪ್ರಕರಣ ದಾಖಲಾದ ನಂತರ ಅವರನ್ನು ಸಿಬಿಐನಿಂದ ತೆಗೆದುಹಾಕಲಾಗಿತ್ತು. 4 ಅಕ್ಟೋಬರ್ 2018 ರಂದು, ಮೊಯಿನ್ ಖುರೇಷಿ ಭ್ರಷ್ಟಾಚಾರ ಪ್ರಕರಣದ ಶಂಕಿತರಲ್ಲಿ ಒಬ್ಬನಾಗಿದ್ದ ಹೈದರಾಬಾದ್ ಮೂಲದ ಉದ್ಯಮಿ ಸನಾ ಸತೀಶ್, ಮಧ್ಯವರ್ತಿಗಳಾದ ಸೋಮೇಶ್ ಮತ್ತು ಮನೋಜ್ ಮೂಲಕ ಅಸ್ತಾನ ಅವರಿಗೆ 2.95 ಕೋಟಿ ರೂ. ನೀಡಲಾಗಿದೆ ಎಂಬ ಆರೋಪ ಇವರ ಮೇಲಿತ್ತು.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು