ಸಾಮಾಜಿಕ ಜಾಲತಾಣದಲ್ಲಿ ಹೊಸ ಆಂದೋಲನ ಆರಂಭಿಸಿದ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ದನ್ ಸಿಂಗ್

ವಿಡಿಯೋದಲ್ಲಿ ರಾಜ್ಯವರ್ದನ್  ಎರಡೂ ಕೈನಲ್ಲಿ ಟೇಬಲ್​ ಟೆನಿಸ್​ ಆಡುವ ದೃಶ್ಯವಿದೆ. ಈ ವೇಳೆ ಅವರು ಬಾಲ್ಯದ ನೆನಪನ್ನು ಮರುಕಳಿಸುವಂಥ ಮಾತನ್ನು ಹೇಳಿದ್ದಾರೆ.

Rajesh Duggumane | news18
Updated:January 9, 2019, 2:20 PM IST
ಸಾಮಾಜಿಕ ಜಾಲತಾಣದಲ್ಲಿ ಹೊಸ ಆಂದೋಲನ ಆರಂಭಿಸಿದ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ದನ್ ಸಿಂಗ್
ರಾಜ್ಯವರ್ದನ್​
Rajesh Duggumane | news18
Updated: January 9, 2019, 2:20 PM IST
 ಮುಂಬೈ(ಜ.9): 'ಖೇಲೋ ಇಂಡಿಯಾ' ಆಂದೋಲನಕ್ಕಾಗಿ ಕೇಂದ್ರ ಕ್ರೀಡಾ ಖಾತೆ ಸಚಿವ ರಾಜವರ್ದನ್ ರಾಥೋಡ್ ಅವರು ಆನ್​ಲೈನ್​ನಲ್ಲಿ #5ಮಿನಿಟ್​ಔರ್ ಚಾಲೆಂಜ್ ಆರಂಭಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತದಲ್ಲಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಲು ಹಾಗೂ ಕ್ರೀಡಾ ಜಗತ್ತಿನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸುವ ಉದ್ದೇಶದಿಂದ 'ಖೇಲೋ ಇಂಡಿಯಾ' ಕಾರ್ಯಕ್ರಮವನ್ನು ಪರಿಚಯಿಸಲಾಗಿತ್ತು. ಈಗ ಅದರ ಭಾಗವಾಗಿ #5ಮಿನಿಟ್​ಔರ್ ಚಾಲೆಂಜ್ ಆರಂಭಿಸಿದ್ದಾರೆ.

ವಿಡಿಯೋದಲ್ಲಿ ರಾಜ್ಯವರ್ದನ್ ಎರಡೂ ಕೈನಲ್ಲಿ ಟೇಬಲ್​ ಟೆನಿಸ್​ ಆಡುವ ದೃಶ್ಯವಿದೆ. ಈ ವೇಳೆ ಅವರು ಬಾಲ್ಯದ ನೆನಪನ್ನು ಮರುಕಳಿಸುವಂಥ ಮಾತನ್ನು ಹೇಳಿದ್ದಾರೆ. "ನಾವು ಚಿಕ್ಕವರಿದ್ದಾಗ ಆಟದ ಮೈದಾದನಕ್ಕೆ ತೆರಳುತ್ತಿದ್ದೆವು. ಹೋಮ್​ವರ್ಕ್​ ಮಾಡುವಂತೆ ಪಾಲಕರು ಕರೆದಾಗ ನಾವು ಇನ್ನೊಂದು ಐದು ನಿಮಿಷ ಆಟವಾಡುತ್ತೇವೆ ಎಂದು ಹೇಳುತ್ತಿದ್ದೆವು. ಆದರೆ ನಮಗೆ ಅಂದು ಇನ್ನೂ ಆಟವಾಡಿ ಎಂದು ಹೇಳುವವರು ಯಾರೂ ಇರಲಿಲ್ಲ. ಆದರೆ, ಈಗ ನಮ್ಮ ಧ್ವನಿ ದೊಡ್ಡದಾಗಿದೆ. ಹಾಗಾಗಿ ನೀವು ಮಕ್ಕಳ ಧ್ವನಿಯಾಗಿ. ಮತ್ತೂ ಐದು ನಿಮಿಷ ಆಟವಾಡಿ. ಇದನ್ನು ವಿಡಿಯೋ ಮಾಡಿ, #5MinuteAur #KheloIndia  ಹ್ಯಾಶ್​ ಟ್ಯಾಗ್​ ಬಳಸಿ ಟ್ವೀಟ್​ ಮಾಡುವಂತೆ ಕೋರಿದ್ದಾರೆ.ಬುಧವರಾದಿಂದ ಮಹಾರಾಷ್ಟ್ರದ ಪುಣೆಯಲ್ಲಿ ಖೇಲೋ ಇಂಡಿಯಾ ಯೂತ್ ಗೇಮ್​ ಆರಂಭವಾಗಿದೆ. 12 ದಿನಗಳ ಕಾಲ ಈ ಆಟ ನಡೆಯಲಿದ್ದು, 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿಂದ 10,000ಕ್ಕೂ ಹೆಚ್ಚು ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಪ್ರಮೋಷನ್​ಗಾಗಿ ರಾಥೋಡ್​ ಈ ಅಭಿಯಾನ ಆರಂಭಿಸಿದ್ದಾರೆ. ವಿರಾಟ್​ ಕೊಹ್ಲಿ, ಸೈನಾ ನೆಹ್ವಾಲ್​, ದೀಪಿಕಾ ಪಡುಕೋಣೆ ಹಾಗೂ ಸಲ್ಮಾನ್​ ಖಾನ್​ಗೆ ವಿಡಿಯೋದಲ್ಲಿ ಚಾಲೆಂಜ್​ ಹಾಕಿದ್ದಾರೆ.
First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ