ಅಶಿಸ್ತಿನ ವರ್ತನೆ ತೋರಿದ್ದ 12 Rajya Sabha Members Suspended; ನಾಳೆ ಕ್ಷಮೆಯಾಚನೆ ಸಾಧ್ಯತೆ

ಅಮಾನತುಗೊಂಡ ರಾಜ್ಯಸಭೆ ಸಂಸದರು ನಾಳೆ (ಮಂಗಳವಾರ) ಸದನದ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಕ್ಷಮೆಯಾಚಿಸುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಾಜ್ಯಸಭೆ

ರಾಜ್ಯಸಭೆ

 • Share this:
  ಕಳೆದ ಸಂಸತ್ ಅಧಿವೇಶನದಲ್ಲಿ (ಆ.11ರಂದು) ಅನುಚಿತ ಹಾಗೂ ಅಶಿಸ್ತಿನ ವರ್ತನೆಗಾಗಿ (misconduct and unruly behaviour) ರಾಜ್ಯಸಭೆಯು ಚಳಿಗಾಲದ ಅಧಿವೇಶನದ (Winter session) ಉಳಿದ ಭಾಗಕ್ಕೆ 12 ಸದಸ್ಯರನ್ನು ಅಮಾನತುಗೊಳಿಸಿದೆ(Suspended).  ಅಖಿಲೇಶ್ ಪ್ರಸಾದ್ ಸಿಂಗ್, ಫುಲೋ ದೇವಿ ನೇತಮ್, ಸೈಯದ್ ನಾಸೀರ್ ಹುಸೇನ್, ಛಾಯಾ ವರ್ಮಾ, ರಾಜಮಣಿ ಪಟೇಲ್ ಮತ್ತು ಕಾಂಗ್ರೆಸ್‌ನ ರಿಪುನ್ ಬೋರಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ, ಸಿಪಿಐ-ಎಂನ ಎಲಮರಮ್ ಕರೀಂ, ಸಿಪಿಐನ ಬಿನೋಯ್ ವಿಶ್ವಂ ಮತ್ತು ತೃಣಮೂಲ ಕಾಂಗ್ರೆಸ್‌ನ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ ಅವರನ್ನು ಅಮಾನತುಗೊಳಿಸಲಾಗಿದೆ. ಆಗಸ್ಟ್​​ 11ರಂದು ಮುಂಗಾರು ಅಧಿವೇಶನದಲ್ಲಿ ಮೂರು ಕೃಷಿ ಮಸೂದೆಗಳ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾಗ ರಾಜ್ಯಸಭೆಯು ಅಸಭ್ಯ ವರ್ತನೆಗೆ ಸಾಕ್ಷಿಯಾಗಿತ್ತು. ಈ ಸಂಬಂಧ ಈಗ ಚಳಿಗಾಲದ ಅಧಿವೇಶನದಲ್ಲಿ ಕ್ರಮ ಕೈಗೊಳ್ಳಲಾಗಿದೆ.

  ಅಂದು ಸದನದಲ್ಲಿ ಏನಾಗಿತ್ತು?

  ವಿವಾದಾತ್ಮಕ ಕೃಷಿ ಕಾನೂನುಗಳ ರದ್ದತಿ ಮಸೂದೆ 2021ರ ಮೇಲೆ ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ ನಡೆಸಿದ್ದರು. ಪ್ರತಿಪಕ್ಷಗಳ ಸಂಸದರ ಗದ್ದಲದಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಎರಡು ಬಾರಿ ಮುಂದೂಡಲ್ಪಟ್ಟ ಕಾರಣ ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಬಿರುಸಿನ ಆರಂಭವನ್ನು ಪಡೆಯಿತು. ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು 12 ಸಂಸದರ ಅಮಾನತು ನಿರ್ಣಯವನ್ನು ಅಂಗೀಕರಿಸುವಂತೆ ಕೋರಿ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

  ಕ್ಷಮೆಯಾಚಿಸುವ ಸಾಧ್ಯತೆ

  ಅಮಾನತುಗೊಂಡ ರಾಜ್ಯಸಭೆ ಸಂಸದರು ನಾಳೆ (ಮಂಗಳವಾರ) ಸದನದ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಕ್ಷಮೆಯಾಚಿಸುವ ಸಾಧ್ಯತೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 12 ರಾಜ್ಯಸಭಾ ಸಂಸದರ ಅಮಾನತು ವಿಚಾರದಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಸಭೆಯ ಪ್ರತಿಪಕ್ಷದ ನಾಯಕರು ಈ ನಿರ್ಧಾರವನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿದರು. ಸರ್ಕಾರವು ನಿರಂಕುಶ ಪ್ರಭುತ್ವ ಎಂದು ಆರೋಪಿಸಿದರು. ಇದು ಪ್ರಜಾಪ್ರಭುತ್ವ ವಿರೋಧಿ ಹೆಜ್ಜೆ. ಸಂಸದರಲ್ಲಿ ಭಯ ಹುಟ್ಟಿಸಲು ಈ ರೀತಿ ಮಾಡಿದೆ. 12 ಸಂಸದರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಂಡಿರುವುದು ಸಂಪೂರ್ಣವಾಗಿ ಕಾನೂನುಬಾಹಿರ, ತಪ್ಪು ಮತ್ತು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಖರ್ಗೆ ಕಿಡಿಕಾರಿದರು.

  ಇದನ್ನೂ ಓದಿ: Farm Laws: ವಿಪಕ್ಷಗಳ ಗದ್ದಲದ ನಡುವೆಯೂ ರಾಜ್ಯಸಭೆಯಲ್ಲಿಯೂ ಕೃಷಿ ಕಾನೂನು ರದ್ದು ಮಸೂದೆ ಪಾಸ್

  ಅಧಿವೇಶನದ ಮೊದಲು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಾಂಪ್ರದಾಯಿಕ ಭಾಷಣದಲ್ಲಿ, ಸಂಸತ್ತಿನಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಭರವಸೆ ನೀಡಿದರು. "ಇದು ಸಂಸತ್ತಿನ ಮಹತ್ವದ ಅಧಿವೇಶನವಾಗಿದೆ. ದೇಶದ ನಾಗರಿಕರು ಉತ್ಪಾದಕ ಅಧಿವೇಶನವನ್ನು ಬಯಸುತ್ತಾರೆ. ಅವರು ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜವಾಬ್ದಾರಿಗಳನ್ನು ಪೂರೈಸುತ್ತಿದ್ದಾರೆ" ಎಂದು ಪ್ರಧಾನಿ ಮೋದಿ ಹೇಳಿದರು.

  ಇನ್ನು ಇಂದು ಸದನದಲ್ಲಿ  ಕೇಂದ್ರ ಸರ್ಕಾರ ಮಂಡಿಸಿದ್ದ ವಿವಾದಿತ ಮೂರು ಕೃಷಿ ಕಾನೂನು ರದ್ದತಿ ಮಸೂದೆ 2021  (Farm Laws Repeal Bill 2021) ಇಂದು ಲೋಕಸಭೆಯಲ್ಲಿ ಅಂಗೀಕರವಾಯಿತು. ಧ್ವನಿ ಮತದ ಮೂಲಕ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ( ಅವರು ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಈ ಮಸೂದೆಯನ್ನು ಮಂಡಿಸಿದರು. ಆದರೆ, ಪ್ರತಿಪಕ್ಷಗಳು ಮಾತ್ರ ಯಾವುದೇ ಚರ್ಚೆಯಾಗದೇ ಮಸೂದೆ ಮಂಡಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಗದ್ದಲ ನಿರ್ಮಿಸಿದವು. ಆದರೆ, ಕೇಂದ್ರ ಸರ್ಕಾರ ಈ ಮಸೂದೆ ಕುರಿತು ಯಾವುದೇ ಚರ್ಚೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
  Published by:Kavya V
  First published: