Rajya Sabha Seat: ರಾಜ್ಯಸಭಾ ಸ್ಥಾನ, ರಾಜ್ಯಪಾಲರ ಹುದ್ದೆಗೆ ಬರೀ 100 ಕೋಟಿ! ವಂಚನೆ ಜಾಲವನ್ನು ಬಂಧಿಸಿದ ಸಿಬಿಐ

ಸಿಬಿಐ ಕಳೆದ ಕೆಲವು ವಾರಗಳಿಂದ ಫೋನ್ ಇಂಟರ್‌ಸೆಪ್ಟ್ ಮೂಲಕ ಕರೆಗಳನ್ನು ಆಲಿಸುತ್ತಿತ್ತು ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೆಹಲಿ: ರಾಜ್ಯಸಭಾ ಸ್ಥಾನ (Rajya Sabha Seat) ರಾಜ್ಯಪಾಲರ ಹುದ್ದೆ ಬೇಕೆಂದರೆ 100 ಕೋಟಿ ಹಣ ಕೊಡಬೇಕು ಎಂದು ನಂಬಿಸಿ ವಂಚನೆ ಎಸಗುತ್ತಿದ್ದ ಮಹಾನ್ ಮೋಸದ ಜಾಲವೊಂದನ್ನು ಸಿಬಿಐ ಬಯಲಿಗೆಳೆದಿದೆ. ಈ ಜಾಲದಲ್ಲಿ ಹಣ ವಿನಿಮಯವಾಗುವ ಮುನ್ನವೇ ಕೇಂದ್ರ ತನಿಖಾ ಸಂಸ್ಥೆ ಆರೋಪಿಯನ್ನು ಹಿಡಿದಿದೆ ಎಂದಿರುವ ಸಿಬಿಐ ಆರೋಪಿಗಳು ₹ 100 ಕೋಟಿಗೆ ರಾಜ್ಯಪಾಲರ ಹುದ್ದೆಯನ್ನೂ (Governor) ನೀಡಿದ್ದರು. ಈ ಜಾಲದ ಸುಳಿವು ಸಿಕ್ಕಿ ಪ್ರಕರಣದ ಬೆನ್ನುಬಿದ್ದ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಥವಾ ಸಿಬಿಐ, ಕಳೆದ ಕೆಲವು ವಾರಗಳಿಂದ ಫೋನ್ ಇಂಟರ್‌ಸೆಪ್ಟ್ ಮೂಲಕ ಕರೆಗಳನ್ನು ಆಲಿಸುತ್ತಿತ್ತು ಎನ್ನಲಾಗಿದೆ. ಈ ಪ್ರಕರಣದಲ್ಲಿ ಸಿಬಿಐ (Central Bureau of Investigation) ನಾಲ್ವರು ಆರೋಪಿಗಳನ್ನು ಬಂಧಿಸಿದೆ ಎಂದು ಆಂಗ್ಲ ಜಾಲತಾಣಗಳು ವರದಿ ಮಾಡಿವೆ.

  ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಮಹಾರಾಷ್ಟ್ರದ ಲಾತೂರ್‌ನ ಕಮಲಾಕರ್ ಪ್ರೇಮಕುಮಾರ್ ಬಂಡಗರ್, ಕರ್ನಾಟಕದ ಬೆಳಗಾವಿಯ ರವೀಂದ್ರ ವಿಠಲ್ ನಾಯಕ್ ಮತ್ತು ದೆಹಲಿ-ಎನ್‌ಸಿಆರ್ ಮೂಲದ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಮತ್ತು ಮೊಹಮ್ಮದ್ ಐಜಾಜ್ ಖಾನ್ ಅವರನ್ನು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ವಿವಿಧ ಸರ್ಕಾರಿ ಸಂಸ್ಥೆಗಳಲ್ಲೂ ಹುದ್ದೆಯ ಭರವಸೆ
  ಆರೋಪಿಗಳು ರಾಜ್ಯಸಭೆಯಲ್ಲಿ ಸ್ಥಾನಗಳ ವ್ಯವಸ್ಥೆ, ರಾಜ್ಯಪಾಲರ ನೇಮಕ, ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳ ಅಡಿಯಲ್ಲಿರುವ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ನೇಮಕ ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದರು ಎಂದು ಸಿಬಿಐ ಎಫ್​ಐಆರ್​ನಲ್ಲಿ ಉಲ್ಲೇಖಿಸಿದೆ.

  ಸಾರ್ವಜನಿಕರನ್ನು ರಾಜ್ಯಸಭೆ ಸೀಟ್ ಮತ್ತು ರಾಜ್ಯಪಾಲರ ಹುದ್ದೆ  ಕೊಡಿಸುವುದಾಗಿ ನಂಬಿಸಿ ವಂಚಿಸುವ ಏಕೈಕ ಉದ್ದೇಶದಿಂದ ಅವರು ಸಂಚು ರೂಪಿಸಿದ್ದಾರೆ. ಎಫ್‌ಐಆರ್‌ ಆರೋಪಿಸಿದೆ.

  ರಾಜ್ಯಸಭೆಗೆ ಉಮೇದುವಾರಿಕೆ ನೀಡುತ್ತಿದ್ದರಂತೆ
  ಆರೋಪಿಗಳು ರಾಜ್ಯಸಭೆಗೆ ಉಮೇದುವಾರಿಕೆ ನೀಡುವ ಭರವಸೆಯ ಹೆಸರಿನಲ್ಲಿ 100 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಡೆದು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಫ್ಐಆರ್ ಆರೋಪಿಸಿದೆ.

  ಕಾಂಗ್ರೆಸ್​ ಸಂಸದರ ಅಮಾನತು
  ಇನ್ನು ಬೆಲೆ ಏರಿಕೆ ವಿರೋಧಿಸಿ ಸದನದೊಳಗೆ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ ಕಾರಣಕ್ಕಾಗಿ ನಾಲ್ವರು ಕಾಂಗ್ರೆಸ್ ಸಂಸದರನ್ನು ಆಗಸ್ಟ್ 12ಕ್ಕೆ ಕೊನೆಗೊಳ್ಳುವ ಸಂಪೂರ್ಣ ಮುಂಗಾರು ಅಧಿವೇಶನಕ್ಕೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಭಟನೆ ನಡೆಸಲು ಬಯಸಿದರೆ ಸದನದ ಹೊರಗೆ ಭಿತ್ತಿಪತ್ರ ಹಿಡಿದು ವರ್ತಿಸುವಂತೆ ಎಚ್ಚರಿಕೆ ನೀಡಿದ್ದರು. ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಟಿಎನ್ ಪ್ರತಾಪನ್.

  ಕಾಂಗ್ರೆಸ್ ಏನು ಹೇಳಿತ್ತು?
  ಸ್ಪೀಕರ್ ಕ್ರಮದ ನಂತರ ನಾಲ್ವರು ಸಂಸತ್ ಮೈದಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ತೆರಳಿ ಘೋಷಣೆಗಳನ್ನು ಕೂಗಿದರು. ಕೆಲವರನ್ನು ಅಮಾನತು ಮಾಡುವ ಮೂಲಕ ಸರ್ಕಾರ ತನ್ನ ಸಂಸದರನ್ನು ಬೆದರಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ. ನಮ್ಮ ಸಂಸದರು ಜನರಿಗೆ ಮುಖ್ಯವಾದ ಸಮಸ್ಯೆಗಳನ್ನು ಎತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

  ಇದನ್ನೂ ಓದಿ: Vladimir Putin: ಪುಟಿನ್ ರೀತಿಯೇ ಕಾಣುವ ಇನ್ನೋರ್ವ ವ್ಯಕ್ತಿ? ರಷ್ಯಾದಿಂದ ಹೊಸ ತಂತ್ರ?

  ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ, ಹಿಟ್ಟು, ಮಜ್ಜಿಗೆಯಂತಹ ವಸ್ತುಗಳ ಮೇಲೆ ಜಿಎಸ್‌ಟಿ ಹೇರಿಕೆ ವಿಷಯಗಳ ಕುರಿತು ಸಂಸದರು ಫಲಕಗಳನ್ನು ಹಿಡಿದಿದ್ದರು. ಈ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ನಾವು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದ್ದೇವೆ, ಆದರೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಹೇಳಿದರು.

  ಲೋಕಸಭಾ ಸ್ಪೀಕರ್ ಅವರು ಮಧ್ಯಾಹ್ನ 3 ಗಂಟೆಯ ನಂತರ ಚರ್ಚೆಗೆ ಸಿದ್ಧರಿದ್ದಾರೆ. ಆದರೆ ಸದನದೊಳಗೆ ಯಾವುದೇ ಪ್ಲಕಾರ್ಡ್ ಪ್ರತಿಭಟನೆಯನ್ನು ಸಹಿಸುವುದಿಲ್ಲ ಎಂದು ವಿರೋಧ ಪಕ್ಷದ ಸಂಸದರಿಗೆ ಎಚ್ಚರಿಕೆ ನೀಡಿದ್ದರು.

  ಇದನ್ನೂ ಓದಿ: Viral Love Story: ಭಾರತ-ಪಾಕ್ ಗಡಿಯನ್ನೂ ಮೀರಿಸಿದ ಹುಡುಗಿಯರ ಲವ್ ಸ್ಟೋರಿ!

  ನೀವು ಫಲಕಗಳನ್ನು ತೋರಿಸಲು ಬಯಸಿದರೆ, ಅದನ್ನು ಸದನದ ಹೊರಗೆ ಮಾಡಿ. ನಾನು ಚರ್ಚೆಗೆ ಸಿದ್ಧನಿದ್ದೇನೆ. ಆದರೆ ನನ್ನ ಸಹೃದಯತೆಯನ್ನು ದೌರ್ಬಲ್ಯ ಎಂದು ಭಾವಿಸಬೇಡಿ ಎಂದು ಸ್ಪೀಕರ್ ಹೇಳಿದರು. ಬಳಿಕ ಕಲಾಪವನ್ನು ನಾಳೆಗೆ ಮುಂದೂಡಿದರು.
  Published by:guruganesh bhat
  First published: