HOME » NEWS » National-international » RAJYA SABHA MEMBER SUSHIL KUMAR MODI PUSHES FOR LAW TO MAKE GOOGLE AND FB SHARE REVENUE WITH PUBLISHERS RHHSN

ಫೇಸ್​ಬುಕ್, ಗೂಗಲ್ ಷೇರು ಆದಾಯವನ್ನು ಸುದ್ದಿಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಕಾನೂನು ರೂಪಿಸಲು ಬಿಜೆಪಿ ಸಂಸದ ಸುಶೀಲ್ ಮೋದಿ ಒತ್ತಾಯ

ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಗಳು ಸುದ್ದಿ ಸಂಸ್ಥೆಗಳಿಗೆ ತಮ್ಮ ಜಾಹೀರಾತು ಆದಾಯದ ನ್ಯಾಯಯುತ ಪಾಲನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಈಗ ಮುಂದಾಗಬೇಕು ಎಂದು ರಾಜ್ಯಸಭಾ ಬಿಜೆಪಿ ಸದಸ್ಯರಾದ ಸುಶೀಲ್ ಮೋದಿ ಅವರು ಹೇಳಿದ್ದಾರೆ.

news18-kannada
Updated:March 17, 2021, 5:53 PM IST
ಫೇಸ್​ಬುಕ್, ಗೂಗಲ್ ಷೇರು ಆದಾಯವನ್ನು ಸುದ್ದಿಸಂಸ್ಥೆಗಳೊಂದಿಗೆ ಹಂಚಿಕೊಳ್ಳಲು ಕಾನೂನು ರೂಪಿಸಲು ಬಿಜೆಪಿ ಸಂಸದ ಸುಶೀಲ್ ಮೋದಿ ಒತ್ತಾಯ
ಬಿಜೆಪಿ ರಾಜ್ಯ ಸಭಾ ಸದಸ್ಯ ಸುಶೀಲ್ ಮೋದಿ
  • Share this:
ಟೆಕ್ ದೈತ್ಯ ಕಂಪೆನಿಗಳಾದ ಗೂಗಲ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ಜಾಹೀರಾತು ಆದಾಯವನ್ನು ಮಾಧ್ಯಮ ಸಂಸ್ಥೆಗಳಿಗೆ ನೀಡುವಂತೆ ಆಸ್ಟ್ರೇಲಿಯಾ ರೂಪಿಸಿರುವ ಕಾನೂನು ಸಂಹಿತೆಯನ್ನು ಭಾರತದಲ್ಲೂ ರೂಪಿಸಬೇಕು ಎಂಧು ಬಿಜೆಪಿ ರಾಜ್ಯ ಸಭಾ ಸದಸ್ಯ ಸುಶೀಲ್ ಮೋದಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಇತಿಹಾಸದಲ್ಲಿ ತಲುಪದ ಕೆಟ್ಟ ಸ್ಥಿತಿಯನ್ನು ತಲುಪಿವೆ ಎಂದು ಅವರು ಹೇಳಿದ್ದಾರೆ. "ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ತೀವ್ರವಾದ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿವೆ. ಈ ಮೊದಲು ಅದು ಸಾಂಕ್ರಾಮಿಕ ರೋಗದಿಂದ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದ್ದರೆ, ಈಗ ಅದು ಯೂಟ್ಯೂಬ್, ಫೇಸ್‌ಬುಕ್ ಮತ್ತು ಗೂಗಲ್‌ನಂತಹ ದೈತ್ಯ ಕಂಪನಿಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ," ಎಂದು ಸುಶೀಲ್ ಮೋದಿ ಅವರು ಹೇಳಿದರು.

ಸಾಂಪ್ರದಾಯಿಕ ಮಾಧ್ಯಮ ಕಂಪನಿಗಳು ಆಂಕರ್‌ಗಳು, ಪತ್ರಕರ್ತರು, ವರದಿಗಾರರನ್ನು ನೇಮಿಸುವಲ್ಲಿ ಭಾರಿ ವೆಚ್ಚವನ್ನು ಮಾಡುತ್ತವೆ ಮತ್ತು ಸುದ್ದಿ ಮಾಧ್ಯಮಕ್ಕೆ ಜಾಹೀರಾತು ಮುಖ್ಯ ಆದಾಯದ ಮೂಲವಾಗಿದೆ ಎಂದು ಮೋದಿ ಹೇಳಿದ್ದಾರೆ. "ಕಳೆದ ಕೆಲವು ವರ್ಷಗಳಲ್ಲಿ ಗೂಗಲ್, ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಂತಹ ಟೆಕ್ ದೈತ್ಯ ಕಂಪನಿಗಳ ಆಗಮನದಿಂದ ಜಾಹೀರಾತಿನ ಹೆಚ್ಚಿನ ಪಾಲನ್ನು ಈ ಟೆಕ್ ದೈತ್ಯ ಕಂಪನಿಗಳೇ ತೆಗೆದುಕೊಳ್ಳುತ್ತಿವೆ. ಇದರಿಂದ ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳಿಗೆ ಭಾರೀ ಆರ್ಥಿಕ ಪೆಟ್ಟು ನೀಡಿದೆ," ಎಂದು ಅವರು ಹೇಳಿದರು.

ಈ ವಿಷಯದಲ್ಲಿ ಭಾರತ ಸರ್ಕಾರವು ಆಸ್ಟ್ರೇಲಿಯ ಮಾದರಿಯನ್ನು ಅನುಸರಿಸಬೇಕಿದೆ. ಜಾಹೀರಾತು ಹಂಚಿಕೆಯಲ್ಲಿ ಆಸ್ಟ್ರೇಲಿಯಾ ಕಾನೂನು ಸಂಹಿತೆ ಜಾರಿಗೊಳಿಸಿದಂತೆ ನಮ್ಮಲ್ಲೂ ಇಂತಹ ಕಾನೂನು ರಚಿಸಬೇಕಿದೆ. ಕಳೆದ ವಾರ ಆಸ್ಟ್ರೇಲಿಯ ಸಂಸತ್ತು, ಜಾಹೀರಾತು ಆದಾಯವನ್ನು ಸುದ್ದಿಮಾಧ್ಯಮಗಳೊಂದಿಗೆ ಗೂಗಲ್​ ಹಂಚಿಕೊಳ್ಳುವಂತೆ ನಿಯಮ ಜಾರಿ ಮಾಡಿತ್ತು. ಈಗ ಫ್ರಾನ್ಸ್ ಮತ್ತು ಇತರೆ ದೇಶಗಳು ಜಾಹೀರಾತು ಆದಾಯವನ್ನು ಹಂಚಿಕೊಳ್ಳುವಂತೆ ಕಾನೂನು ತರಲು ಮುಂದಾಗಿವೆ. ಅದರಂತೆ ನಮ್ಮಲ್ಲೂ ಸಹ ಈ ದೈತ್ಯ ಕಂಪನಿಗಳು ಜಾಹೀರಾತಿನಿಂದ ಪಡೆದುಕೊಳ್ಳುವ ಆದಾಯದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಸುಶೀಲ್ ಮೋದಿ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನು ಓದಿ: TamilNadu Assembly Election 2021: ಮೋದಿ ಕುರಿತು ಹಾಡೊಂದನ್ನು ಬಿಡುಗಡೆ ಮಾಡಿ ಟ್ರೋಲಿಗೆ ಸಿಲುಕಿದ ತಮಿಳುನಾಡು ಬಿಜೆಪಿ; ಕಮಲಕ್ಕೆ ಮರ್ಮಾಘಾತ

ಗೂಗಲ್ ಮತ್ತು ಫೇಸ್‌ಬುಕ್ ಸಂಸ್ಥೆಗಳು ಸುದ್ದಿ ಸಂಸ್ಥೆಗಳಿಗೆ ತಮ್ಮ ಜಾಹೀರಾತು ಆದಾಯದ ನ್ಯಾಯಯುತ ಪಾಲನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಈಗ ಮುಂದಾಗಬೇಕು ಎಂದು ರಾಜ್ಯಸಭಾ ಬಿಜೆಪಿ ಸದಸ್ಯರಾದ ಸುಶೀಲ್ ಮೋದಿ ಅವರು ಹೇಳಿದ್ದಾರೆ.
Youtube Video
"ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ನಿಯಂತ್ರಿಸಲು ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ 2021 ಅನ್ನು ಅವರು ತಿಳಿಸಿದ ರೀತಿಯಲ್ಲಿಯೇ ಅವರು ಆಸ್ಟ್ರೇಲಿಯಾದ ಮಾದರಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದು ನಾನು ಒತ್ತಾಯಿಸುತ್ತೇನೆ. ಸಾಂಪ್ರದಾಯಿಕ ಮಾಧ್ಯಮಗಳೊಂದಿಗೆ ಆದಾಯವನ್ನು ಹಂಚಿಕೊಳ್ಳಿ. ಅಂತರ್ಜಾಲದಲ್ಲಿ ದೇಶೀಯವಾಗಿ ಉತ್ಪತ್ತಿಯಾಗುವ ಸುದ್ದಿ ವಿಷಯದಿಂದ ಗೂಗಲ್ ಮತ್ತು ಫೇಸ್‌ಬುಕ್‌ಗಳು ಗಳಿಸುವ ನ್ಯಾಯಯುತ ಪಾಲನ್ನು ಪಾವತಿಸಲು ಮುಂದಾಗಬೇಕು." ಎಂದು ಅವರು ತಿಳಿಸಿದ್ದಾರೆ.
Published by: HR Ramesh
First published: March 17, 2021, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories