ಪ್ರವಾಹ ತಡೆಗಟ್ಟಲು ವಿಶೇಷ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಕೆ.ಸಿ. ರಾಮಮೂರ್ತಿ ಒತ್ತಾಯ

ಒಟ್ಟಾರೆ ನಷ್ಟವನ್ನು 9,442  ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ವಿವರಿಸಿದರು.

news18-kannada
Updated:September 23, 2020, 12:14 PM IST
ಪ್ರವಾಹ ತಡೆಗಟ್ಟಲು ವಿಶೇಷ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಕೆ.ಸಿ. ರಾಮಮೂರ್ತಿ ಒತ್ತಾಯ
ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ
  • Share this:
ನವದೆಹಲಿ(ಸೆ.23): ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ನಿರಂತರ ಪ್ರವಾಹ ಕಂಡುಬರುತ್ತಿದ್ದು, ಪ್ರವಾಹವನ್ನು ತಡೆಗಟ್ಟುವ  ನಿಟ್ಟಿನಲ್ಲಿ ವಿಶೇಷ ಸಮಿತಿ ರಚಿಸುವಂತೆ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಬುಧವಾರ ವಿಷಯ ಪ್ರಸ್ತಾಪಿಸಿದ ಕೆ.ಸಿ. ರಾಮಮೂರ್ತಿ, ರಾಜ್ಯದಲ್ಲಿ ಪ್ರತಿವರ್ಷವೂ ಪ್ರವಾಹ ಉಂಟಾಗುತ್ತಿರುವುದರಿಂದ ಜೀವ ಹಾನಿ ಹಾಗೂ ಅಪಾರ ಪ್ರಮಾಣದ ಆಸ್ತಿ ಹಾಗೂ ಬೆಳೆ ನಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಪ್ರವಾಹವನ್ನು ತಡೆಗಟ್ಟುವ  ನಿಟ್ಟಿನಲ್ಲಿ ವಿಶೇಷ ಸಮಿತಿ ರಚಿಸಬೇಕೆಂದು ಒತ್ತಾಯಿಸಿದರು. ಈ ರೀತಿ ಪ್ರವಾಹ ತಡೆಗಟ್ಟವ ನಿಟ್ಟಿನಲ್ಲಿ ವಿಶೇಷ ಸಮಿತಿ ರಚಿಸಿದರೆ ಅದು ಪ್ರವಾಹ ಪರಿಸ್ಥಿತಿಯ ಬಗ್ಗೆ ಎಚ್ಚರಿಕೆ ನೀಡಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮುನ್ನೆಚ್ಚರಿಕಾ ಕ್ರಮಗಳನ್ನು ‌ಕೈಗೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿ ಸಮತಿ ರಚಿಸುವ ಪ್ರಾಮುಖ್ಯತೆಯನ್ನು ವಿವರಿಸಿದರು.

ಹಸಿರಿನಿಂದ ಕಂಗೊಳಿಸುತ್ತಿದೆ ಸಸ್ಯ ಕಾಶಿ ಕಪ್ಪತಗುಡ್ಡ; ಬರದ ನಾಡಿನಲ್ಲಿ ಮಲೆನಾಡಿನ ವೈಭವ

ಅಲ್ಲದೆ ನಿರಂತರವಾಗಿ ಉಂಟಾಗುತ್ತಿರುವ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ರಾಜ್ಯ ಸರ್ಕಾರ ಹಲವು ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಆದರೆ ಅಪಾರ ಪ್ರಮಾಣದ ಆಸ್ತಿ ಹಾಗೂ ಬೆಳೆ ನಷ್ಟವಾಗಿರುವುದರಿಂದ ಇನ್ನೂ ಹೆಚ್ಚಿನ ಪರಿಹಾರ ಕಾರ್ಯ ಕೈಗೊಳ್ಳಲು ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಸಹಾಯವನ್ನು ಮಾಡಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷವೂ ಕರ್ನಾಟಕದಲ್ಲಿ ಪ್ರವಾಹ ಉಂಟಾಗುತ್ತಿದೆ. ಇದರಿಂದ ಜೀವ ಹಾನಿಯಾಗುತ್ತಿದೆ.

ಜೊತೆಗೆ ದೊಡ್ಡ ಪ್ರಮಾಣದಲ್ಲಿ ಬೆಳೆ ಮತ್ತು ಆಸ್ತಿ ನಷ್ಟವಾಗುತ್ತಿದೆ.‌ ಈ ವರ್ಷ ಪ್ರವಾಹದಿಂದ 61 ಜನ ಪ್ರಾಣ ಕಳೆದುಕೊಂಡಿದ್ದಾರೆ. 11,000 ಮನೆಗಳು  ಹಾನಿಗೆ ಒಳಗಾಗಿವೆ.‌ ಸುಮಾರು ನಾಲ್ಕು ಲಕ್ಷ‌ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆಗಳು ನಾಶವಾಗಿವೆ. ಒಟ್ಟಾರೆ ನಷ್ಟವನ್ನು 9,442  ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದೆ ರಾಜ್ಯಸಭಾ ಸದಸ್ಯ ಕೆ.ಸಿ. ರಾಮಮೂರ್ತಿ ಅವರು ವಿವರಿಸಿದರು.

ಈ ವರ್ಷ ರಾಜ್ಯದಲ್ಲಿ ಯಾವ ರೀತಿ ಮಳೆಯಾಗಿದೆ ಎಂಬ ವಿವರಗಳನ್ನು ಸದನದ ಮುಂದಿಟ್ಟರು.‌ ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ವಾಡಿಕೆಗಿಂದ ಶೇಖಡ 500ರಷ್ಟು ಹೆಚ್ಚು ಮಳೆಯಾಗಿದೆ. ಇದರಿಂದ ಕೆಲವು ಕಡೆ ಭೂ ಕುಸಿತವಾಗಿದೆ ಎಂದು ತಿಳಿಸಿದರು.
Published by: Latha CG
First published: September 23, 2020, 12:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading