Rajyasabha Elections: ಹರಿಯಾಣದಲ್ಲಿ ಹೈಡ್ರಾಮಾ! 8 ಗಂಟೆ ಮತ ಎಣಿಕೆ ವಿಳಂಬ, ಬಿಜೆಪಿ ಗೆಲುವು

Rajya Sabha Polls: ರಾಜಸ್ಥಾನದಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ. ಆದರೆ ಹರಿಯಾಣದಲ್ಲಿ ಹಿನ್ನಡೆ ಅನುಭವಿಸಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೆಹಲಿ(ಜೂ.11): ರಾಜ್ಯಸಭಾ ಚುನಾವಣೆ 2022(Rajyasabha Election) 16 ರಾಜ್ಯಸಭಾ ಸ್ಥಾನಗಳಿಗೆ 4 ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ (BJP) ಗೆಲುವಿನ ನಗೆ ಬೀರಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ (Congress) ಮೂರು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಸಕ್ಸಸ್ ಆಗಿದ್ದು, ಆದರೆ ಹರಿಯಾಣದಲ್ಲಿ ಹಿನ್ನಡೆ ಅನುಭವಿಸಿದೆ. ಮಹಾರಾಷ್ಟ್ರದಲ್ಲಿ (Maharastra) ಆಡಳಿತಾರೂಢ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಕರ್ನಾಟಕವೇ (Karnataka) ತವರು ನೆಲೆಯಾಗಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಜನತಾದಳ (ಜಾತ್ಯತೀತ) ರಾಜ್ಯದಿಂದ ರಾಜ್ಯಸಭೆ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆದ್ದಿಲ್ಲ. ನಾಲ್ಕು ಸ್ಥಾನಗಳ ಪೈಕಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಮತ್ತು ಲೆಹರ್ ಸಿಂಗ್ ಸಿರೋಯಾ ಮೂರು ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್‌ನ ಜೈರಾಮ್ ರಮೇಶ್ ಉಳಿದಿರುವ ಏಕೈಕ ಸ್ಥಾನವನ್ನು ಗೆದ್ದಿದ್ದಾರೆ.

ಹರಿಯಾಣದಲ್ಲಿ ಹೈಡ್ರಾಮಾ

ಹರಿಯಾಣದಲ್ಲಿ ಮಧ್ಯರಾತ್ರಿಯ ನಾಟಕ ನಡೆದಿದ್ದು ಅದು ಕಾಂಗ್ರೆಸ್​ಗೆ ದೊಡ್ಡ ಆಘಾತವನ್ನು ನೀಡುವಲ್ಲಿ ಕೊನೆಗೊಂಡಿತು. ಅಜಯ್ ಮಾಕನ್ ಗೆದ್ದಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ನಂತರ, ಮತಗಳ ಮರುಎಣಿಕೆ ಮಾಡುವಾಗ ಟ್ವೀಟ್ ಕೈ ಪಕ್ಷ ತಾನು ಮಾಡಿದ್ದ ಟ್ವೀಟ್ ಅನ್ನು ಅಳಿಸಬೇಕಾಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾರ್ತಿಕೇಯ ಶಮ್ರಾ ವಿಜೇತರಾಗಿ ಹೊರಹೊಮ್ಮಿದರು.

ರಾಜಸ್ಥಾನದಲ್ಲಿ ಕಾಂಗ್ರೆಸ್ ಹೈಲೈಟ್

ರಾಜಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮೂರರಲ್ಲಿ ಗೆದ್ದಿದೆ. ಒಂದು ಸ್ಥಾನ ಬಿಜೆಪಿ ಪಾಲಾಗಿದೆ. ಕ್ರಾಸ್-ವೋಟಿಂಗ್ ಮತ್ತು ಪಕ್ಷಾಂತರಗಳ ಚರ್ಚೆಯಿಂದ ಹೈಲೈಟ್ ಆದ ಈ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ 16 ಸ್ಥಾನಗಳಿಗೆ ಮತದಾನ ನಡೆದಿದೆ.

ರಾಷ್ಟ್ರಪತಿ ಚುನಾವಣೆ

ಕನಿಷ್ಠ 41 ಅಭ್ಯರ್ಥಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯ ದೃಷ್ಟಿಯಿಂದ ಮೇಲ್ಮನೆ ಚುನಾವಣೆಯು ಹೆಚ್ಚು ನಿರ್ಣಾಯಕವಾಗಿದೆ.

ಇದನ್ನೂ ಓದಿ: Marijuana Legalized: ಥೈಲ್ಯಾಂಡ್​ನಲ್ಲಿ ಗಾಂಜಾ ಕಾನೂನುಬದ್ಧ! ಈ ಹಿಂದೆ ಅರೆಸ್ಟ್ ಆದ 4 ಸಾವಿರ ಜನ ರಿಲೀಸ್

ಮಹಾರಾಷ್ಟ್​ರದಲ್ಲಿ ಒಟ್ಟು 6 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಇದರಲ್ಲಿ 3 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಆಧಿಸಿದರೆ ಕಾಂಗ್ರೆಸ್ 1 ಸ್ಥಾನ ಗೆದ್ದಿದೆ. ಎಸ್​ಎಸ್​ ಹಾಗೂ ಎನ್​ಸಿಪಿ 1 ಸ್ಥಾನ ಗೆದ್ದಿದೆ. ರಾಜಸ್ಥಾನದಲ್ಲಿ ಒಟ್ಟು 4 ಸ್ಥಾನಗಳಿಗೆ ಸ್ಪರ್ಧೆ ನಡೆದಿದ್ದು ಕಾಂಗ್ರೆಸ್ 3 ಸ್ಥಾನ ಗೆದ್ದಿದ್ದು ಬಿಜೆಪಿ 1 ಸ್ಥಾನ ಗೆದ್ದಿದೆ. ಕರ್ನಾಟಕದಲ್ಲಿ 4 ಸ್ಥಾನಗಳಲ್ಲಿ 3ರಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ 1 ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ. ಜೆಡಿಎಸ್ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಹರಿಯಾಣದಲ್ಲಿ 2 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಐಎನ್​ಡಿ ಒಂದೊಂದು ಸ್ಥಾನ ಗೆದ್ದಿದೆ.

ಮತ ಎಣಿಕೆ ವಿಳಂಬ

ನಾಲ್ಕು ರಾಜ್ಯಗಳ ರಾಜ್ಯಸಭಾ ಚುನಾವಣೆಗೆ ಸಂಜೆ 5 ಗಂಟೆಗೆ ಪ್ರಾರಂಭವಾಗಬೇಕಿದ್ದ ಮತ ಎಣಿಕೆ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ವಿಳಂಬವಾಗಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್‌ನ ನಿಯೋಗಗಳು ದೆಹಲಿಯಲ್ಲಿ ಚುನಾವಣಾ ಆಯೋಗವನ್ನು (ಇಸಿ) ಭೇಟಿಯಾಗಿವೆ. ರಾಜ್ಯಗಳಲ್ಲಿ ಪ್ರೋಟೋಕಾಲ್‌ನ ಆಪಾದಿತ ಉಲ್ಲಂಘನೆಯಾಗಿದೆ.

ಗೆದ್ದು ಸೋತ ಕಾಂಗ್ರೆಸ್ ಅಭ್ಯರ್ಥಿ

ಶುಕ್ರವಾರ ನಡೆದ ಚುನಾವಣೆಯಲ್ಲಿ ಹರಿಯಾಣದಲ್ಲಿ ಸ್ಪರ್ಧಿಸಿದ್ದ ಎರಡು ಸ್ಥಾನಗಳಲ್ಲಿ ಒಂದನ್ನು ಬಿಜೆಪಿ ಗೆದ್ದುಕೊಂಡಿದ್ದರೆ, ಇನ್ನೊಂದರಲ್ಲಿ ಮಾಧ್ಯಮ ಉದ್ಯಮಿ ಮತ್ತು ಸ್ವತಂತ್ರ ಅಭ್ಯರ್ಥಿ ಕಾರ್ತಿಕೇಯ ಶರ್ಮಾ ಗೆದ್ದಿದ್ದಾರೆ. ಆರಂಭದಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗಿದ್ದ ಕಾಂಗ್ರೆಸ್‌ನ ಅಜಯ್ ಮಾಕನ್ ಸೋತರು. ಈ ಸಂದರ್ಭ ಕಾಂಗ್ರೆಸ್ ಟ್ವೀಟ್ ಡಿಲೀಟ್ ಮಾಡಿತು.

ಇದನ್ನೂ ಓದಿ: Delhi: ದೆಹಲಿ ಸರ್ಕಾರದಿಂದ ಭರ್ಜರಿ ಗುಡ್​ ನ್ಯೂಸ್, ಹೆಣ್ಣು ಮಗುವಿನ ಹೆಸರಲ್ಲಿ ಬ್ಯಾಂಕ್ ಅಕೌಂಟ್!

ಕನ್ನಡಿಗರಿಗೆ ಥ್ಯಾಂಕ್ಸ್ ಎಂದ ನಿರ್ಮಲಾ ಸೀತಾರಾಮನ್

ಕರ್ನಾಟಕದ ಜನರು ನನಗೆ ಸೇವೆ ಮಾಡಲು 2ನೇ ಅವಕಾಶ ನೀಡಿದ್ದಾರೆ'.
ಬಿಎಸ್ ಯಡಿಯೂರಪ್ಪ (ಮಾಜಿ ಸಿಎಂ) ಯಾವಾಗಲೂ ನನಗೆ ನೀಡಿದ ಆಶೀರ್ವಾದಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ನಾನು ಪ್ರತಿಯೊಬ್ಬ ಶಾಸಕರಿಗೆ ಮತ್ತು ಅವರ ಮೂಲಕ, ಸೇವೆ ಮಾಡುವ ಎರಡನೇ ಅವಕಾಶವನ್ನು ನೀಡಿದಕ್ಕಾಗಿ ಕರ್ನಾಟಕದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಬಿಜೆಪಿ ಕರ್ನಾಟಕ ಘಟಕ ಮತ್ತು ಪ್ರತಿಯೊಬ್ಬ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Published by:Divya D
First published: