Rajya Sabha Election: ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ; ಕರ್ನಾಟಕದಿಂದ ಜೈರಾಮ್ ರಮೇಶ್​ಗೆ ಟಿಕೆಟ್

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೂ ಕಾಂಗ್ರೆಸ್​ನಿಂದ ರಾಜ್ಯಸಭೆ ಟಿಕೆಟ್ ದೊರೆತಿದೆ. ಕಾಂಗ್ರೆಸ್ ಟಿಕೆಟ್ ಲಿಸ್ಟ್ ಇಲ್ಲಿದೆ.

ಜೈರಾಮ್​ ರಮೇಶ್​

ಜೈರಾಮ್​ ರಮೇಶ್​

  • Share this:
    ದೆಹಲಿ: ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆ ಚುನಾವಣೆಗೆ‌ (Rajya Sabha Election 2022) ಅಭ್ಯರ್ಥಿ ಪ್ರಕಟವಾಗಿದೆ. ಕರ್ನಾಟಕದಿಂದ ಜೈರಾಮ್ ರಮೇಶ್ (Jairam Ramesh) ಅವರಿಗೆ ಟಿಕೆಟ್ ನೀಡಲಾಗಿದೆ.  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ  (Randeep Surjewala) ಅವರಿಗೂ ಕಾಂಗ್ರೆಸ್​ನಿಂದ ರಾಜ್ಯಸಭೆ ಟಿಕೆಟ್ ದೊರೆತಿದೆ. ಜೂನ್ 10 ರಂದು 15 ರಾಜ್ಯಗಳ 57 ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ 10 ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಪ್ರಮುಖ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ, ಮುಕುಲ್ ವಾಸ್ನಿಕ್, ಅಜಯ್ ಮಾಕನ್ ಮತ್ತು ರಾಜೀವ್ ಶುಕ್ಲಾ ಇದ್ದಾರೆ.


    ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಪ್ರಕಟ ಹಿನ್ನೆಲೆಯಲ್ಲಿ ಹೆಸರು ಘೋಷಣೆ ಆಗುತ್ತಿದ್ದಂತೆ ಕೈ ಅಭ್ಯರ್ಥಿ ಜೈರಾಮ್ ರಮೇಶ್ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ನಾಳೆ ಬೆಳಿಗ್ಗೆ 10ಕ್ಕೆ ಜೈರಾಮ್ ರಮೇಶ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚುನಾವಣೆ ಯಾವಾಗ?
    57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10 ರಂದು ಚುನಾವಣೆ ನಡೆಯಲಿದೆ. ಈ ಸ್ಥಾನಗಳು ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

    ಬಿಜೆಪಿ ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆ
    ಇಂದು ಮುಂಜಾನೆ, ಬಿಜೆಪಿ ರಾಜ್ಯಸಭಾ ಚುನಾವಣೆಗೆ 16 ಅಭ್ಯರ್ಥಿಗಳ ಪಟ್ಟಿಯನ್ನು (BJP Rajya Sabha Candidates) ಬಿಡುಗಡೆ ಮಾಡಿದ್ದು, ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಕೇಂsದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಿದೆ. 

    ಇದನ್ನೂ ಓದಿ: Mukhyamantri Chandru: ಕಾಂಗ್ರೆಸ್ ತೊರೆದಿದ್ಯಾಕೆ ಮುಖ್ಯಮಂತ್ರಿ‌ ಚಂದ್ರು?

    ಜಗ್ಗೇಶ್​ ಅವರಿಗೆ ಬಿಜೆಪಿ ಟಿಕೆಟ್
    ರಾಜ್ಯಸಭೆಗೆ ಬಿಜೆಪಿ (BJP) ಟಿಕೆಟ್ ಘೋಷಿಸಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ (Nirmala Sitharaman) ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಜೊತೆಗೆ ಬಿಜೆಪಿ ನಾಯಕ ಜಗ್ಗೇಶ್ (Jaggesh) ಅವರಿಗೂ ಬಿಜೆಪಿ ರಾಜ್ಯಸಭೆಗೆ ಟಿಕೆಟ್(BJP Rajya Sabha Ticket) ಘೋಷಿಸಿದೆ.

    ಬಿಜೆಪಿಯಿಂದ ಕಾದು ನೋಡುವ ತಂತ್ರ
    ಜೆಡಿಎಸ್ ನಿಲುವು ನೋಡಿಕೊಂಡು ನಾಳೆ ಮತ್ತೊಂದು ಸೀಟಿನ ಬಗ್ಗೆ ನಿರ್ಧಾರ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗಿದೆ. ಒಕ್ಕಲಿಗ ಸಮುದಾಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜಗ್ಗೇಶ್ ಅವರ ಹೆಸರನ್ನು ಪರಿಗಣನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: Karnataka High Court: ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ಬೇಗ ಬೇಗ ತನಿಖೆ ನಡೆಸಿ: ಹೈಕೋರ್ಟ್ ಖಡಕ್ ಸೂಚನೆ

    ಬಿ.ಎಲ್. ಸಂತೋಷ್ (BL Santhosh) ಬೆಂಬಲದ ನಡುವೆಯೂ ನಿರ್ಮಲ ಕುಮಾರ್ ಸುರಾನಾಗೂ ಟಿಕೆಟ್ ನೀಡಿಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬೆಂಬಲಿಗ ಲೆಹರ್ ಸಿಂಗ್​ ಅವರಿಗೂ ಬಿಜೆಪಿ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಬಂದಿದ್ದ ಕೆ.ಸಿ. ರಾಮಮೂರ್ತಿ ಅವರಿಗೂ ಟಿಕೆಟ್ ಸಿಕ್ಕಿಲ್ಲ. ಯಡಿಯೂರಪ್ಪ ಬೆಂಬಲಿಗ ಲೆಹರ್ ಸಿಂಗ್ ಅವರಿಗೂ ಟಿಕೆಟ್ ದೊರೆತಿಲ್ಲ. ಹೀಗಾಗಿ ಮುಂದಿನ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿದೆ.
    Published by:guruganesh bhat
    First published: