HOME » NEWS » National-international » RAJYA SABHA ELECTION 2020 FOR 18 RAJYA SABHA SEATS WILL BE HELD ON JUNE 19 SCT

Rajya Sabha Election: ಭಾರತದ 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ

Rajya Sabha Election Date: ಮಾರ್ಚ್​ 26ಕ್ಕೆ ಈ 18 ಸ್ಥಾನಗಳ ರಾಜ್ಯಸಭಾ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಆ ವೇಳೆಗೆ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.

Sushma Chakre | news18-kannada
Updated:June 1, 2020, 7:01 PM IST
Rajya Sabha Election: ಭಾರತದ 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ
ಸಂಸತ್​ ಚಿತ್ರಣ
  • Share this:
ನವದೆಹಲಿ (ಜೂ. 1): ಕೊರೋನಾ ವೈರಸ್​​ ಬಿಕ್ಕಟ್ಟಿನಿಂದಾಗಿ ಬಾಕಿ ಉಳಿದಿದ್ದ ಭಾರತದ 7 ರಾಜ್ಯಗಳ 18 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಹೊಸ ದಿನಾಂಕವನ್ನು ಘೋಷಿಸಿದ್ದು, ಅದೇ ದಿನ ಮತಎಣಿಕೆಯೂ ನಡೆಯಲಿದೆ.

ಆಂಧ್ರಪ್ರದೇಶದ 4, ಗುಜರಾತ್​- 4, ಜಾರ್ಖಂಡ್​ನ 2, ಮಧ್ರಪ್ರದೇಶದ 3, ರಾಜಸ್ಥಾನದ 3, ಮಣಿಪುರದ 1, ಮೇಘಾಲಯದ 1 ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆಗಳ ಮೇಲ್ವಿಚಾರಣೆಗೆ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಹಿರಿಯ ಅಧಿಕಾರಿಗಳನ್ನು ನೇಮಕ ಮಾಡಲಿದ್ದಾರೆ ಎಂದು ಕೂಡ ಚುನಾವಣಾ ಆಯೋಗ ಘೋಷಿಸಿದೆ. ಆ ಅಧಿಕಾರಿಗಳು ಕೊರೋನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ಎಲ್ಲ ಸಿದ್ಧತೆಗಳನ್ನು ಮಾಡಿಸಿ, ಚುನಾವಣೆ ನಡೆಸಬೇಕಾಗುತ್ತದೆ.

ಇದನ್ನೂ ಓದಿ: ರಾಜ್ಯಸಭೆ ಟಿಕೆಟ್ ಪೈಪೋಟಿ; ಪ್ರಭಾಕರ್ ಕೋರೆ ಪರ ಬ್ಯಾಟ್ ಬೀಸಿದ ಡಿಸಿಎಂ ಲಕ್ಷ್ಮಣ ಸವದಿ

ಮಾರ್ಚ್​ 26ಕ್ಕೆ ಈ 18 ಸ್ಥಾನಗಳ ರಾಜ್ಯಸಭಾ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಆ ವೇಳೆಗೆ ಲಾಕ್​ಡೌನ್ ಘೋಷಣೆಯಾಗಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಚುನಾವಣಾ ಆಯೋಗ ಹೊಸ ಚುನಾವಣಾ ದಿನಾಂಕವನ್ನು ನಿಗದಿ ಮಾಡಿದ್ದು, ಜೂನ್ 19ಕ್ಕೆ ರಾಜ್ಯಸಭಾ ಚುನಾವಣೆ ನಡೆಯಲಿದೆ.
First published: June 1, 2020, 7:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories