Rafale Deal: ಸೆ.20ಕ್ಕೆ ಫ್ರಾನ್ಸ್​ನಿಂದ ಭಾರತಕ್ಕೆ ರಫೇಲ್​​​ ಯುದ್ದ ವಿಮಾನ ಹಸ್ತಾಂತರ

ಇದೇ ಸಮಾರಂಭದಲ್ಲಿ ಫ್ರಾನ್ಸ್​​ನ ಡಸ್ಸೌಲ್ಟ್ ಎಂಬುವರು, ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಉಪಸ್ಥಿತಿಯಲ್ಲಿ ಭಾರತಕ್ಕೆ ರಫೆಲ್ ಯುದ್ಧ ವಿಮಾನ ಹಸ್ತಾಂತರ ಮಾಡಲಿದ್ದಾರೆ.

Ganesh Nachikethu | news18
Updated:August 23, 2019, 1:48 PM IST
Rafale Deal: ಸೆ.20ಕ್ಕೆ ಫ್ರಾನ್ಸ್​ನಿಂದ ಭಾರತಕ್ಕೆ ರಫೇಲ್​​​ ಯುದ್ದ ವಿಮಾನ ಹಸ್ತಾಂತರ
ರಫೇಲ್​ ಯುದ್ದ ವಿಮಾನ
  • News18
  • Last Updated: August 23, 2019, 1:48 PM IST
  • Share this:
ನವದೆಹಲಿ(ಆಗಸ್ಟ್​​.23): ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಫ್ರಾನ್ಸ್​ ಮೂಲದ ರಫೇಲ್​​ ಯುದ್ಧ ವಿಮಾನ ಭಾರತಕ್ಕೆ ಆಗಮಿಸಲಿವೆ. ಮುಂದಿನ ತಿಂಗಳು ವಿದೇಶದಿಂದ ಆಗಮಿಸಲಿರುವ 36 ರಫೇಲ್​​ ಯುದ್ದ ವಿಮಾನಗಳನ್ನು ಭಾರತೀಯ ವಾಯುಪಡೆ ಸ್ವಾಗತಿಸಲಿದೆ. ಈ ಮುನ್ನವೇ ಫ್ರಾನ್ಸ್​ ಪ್ರಧಾನಿ ಜೊತೆಗೆ ಮಾತುಕತೆ ನಡೆಸುವ ಸಲುವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಏರ್ ಚೀಫ್ ಮಾರ್ಷಲ್ ಬಿ.ಎಸ್ ಧನೋವಾ ಪ್ಯಾರಿಸ್​​ಗೆ ತೆರಳಲಿದ್ದಾರೆ ಎನ್ನಲಾಗಿದೆ.

ಫ್ರಾನ್ಸ್​​ ಸರ್ಕಾರ ಮುಂದಿನ ತಿಂಗಳು ರಫೇಲ್​​ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರ ಮಾಡಲಿದೆ. ಇದಕ್ಕಾಗಿಯೇ ಸೆಪ್ಟೆಂಬರ್​​​​ 20ಕ್ಕೆ ವಿಮಾನ ಹಸ್ತಾಂತರ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದೇ ಸಮಾರಂಭದಲ್ಲಿ ಫ್ರಾನ್ಸ್​​ನ ಡಸ್ಸೌಲ್ಟ್ ಎಂಬುವರು, ಕೇಂದ್ರ ರಕ್ಷಣಾ ಸಚಿವ ರಾಜನಾಥ್​​ ಸಿಂಗ್ ಉಪಸ್ಥಿತಿಯಲ್ಲಿ ಭಾರತಕ್ಕೆ ರಫೆಲ್ ಯುದ್ಧ ವಿಮಾನ ಹಸ್ತಾಂತರ ಮಾಡಲಿದ್ದಾರೆ.

ಇನ್ನು ಈ ಸಂಬಂಧ ಭಾರತ ಮತ್ತು ಫ್ರಾನ್ಸ್​ ನಡುವಿನ​ ದ್ವಿಪಕ್ಷೀಯ ಮಾತುಕತೆಗೆ ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಗುರುವಾರ ಪ್ಯಾರಿಸ್​​ಗೆ ಭೇಟಿ ನೀಡಲಿದ್ದಾರೆ. ಅಲ್ಲಿನ  ಭಾರತೀಯ ವಾಯುಸೇನೆ ಅಧಿಕಾರಿಗಳ ಜೊತೆಗೆ ಹಸ್ತಾಂತರ ಪ್ರಕ್ರಿಯೆ ಬಗ್ಗೆ ಸಭೆ ನಡೆಸಲಿದ್ದಾರೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಐಎಂಎ ವಂಚನೆ ಪ್ರಕರಣ: ತನಿಖೆ ತೀವ್ರಗೊಳಿಸಿದ ಸಿಬಿಐ; ಮನ್ಸೂರ್​​ ಸ್ನೇಹಿತ ಅಬ್ಬಾಸ್​​ಗೆ ನೋಟಿಸ್​​​

ಏನಿದು ರಫೇಲ್​​ ಡೀಲ್​: ಫ್ರಾನ್ಸ್​ನೊಂದಿಗಿನ 36 ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡಿಕೊಂಡಿತ್ತು. ಈ ಬಗ್ಗೆ ಮೀಡಿಯಾ ಪಾರ್ಟ್​​ ವರದಿ ಮಾಡಿದ ಬೆನ್ನಲ್ಲೇ ಅಧಿಕೃತವಾಗಿ ಡಸ್ಸಾಲ್ಟ್​​ ಸಂಸ್ಥೆಯೂ ಕೂಡ ರಫೇಲ್​​ ಒಪ್ಪಂದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿತ್ತು. ಈ ಸಂಸ್ಥೆಯ ಡೆಪ್ಯೂಟಿ ಚೀಫ್​​ ಎಕ್ಸಿಕ್ಯೂಟಿವ್​​ ಅವರೇ ರಫೇಲ್​​ ಒಪ್ಪಂದಕ್ಕೆ ಅನಿಲ್​​ ಅಂಬಾನಿ ಅವರ ಒಡೆತನದ ರಿಲಾಯನ್ಸ್​​ ಸಂಸ್ಥೆಯನ್ನು ಸಹಭಾಗಿತ್ವ ಸಂಸ್ಥೆಯನ್ನಾಗಿಸಲು ನೇತೃತ್ವ ವಹಿಸಿದ್ದರು. ಇದು ನಮಗೆ ಉತ್ತಮ ಮತ್ತು ಅನಿವಾರ್ಯವಾಗಿತ್ತು. ಹೀಗಾಗಿ ರಿಲಾಯನ್ಸ್​​ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಂಡೆವು ಎಂದು ಡಸ್ಸಾಲ್ಟ್​​​ ಸಂಸ್ಥೆ ತನ್ನ ವೆಬ್​​​ಸೈಟಿನಲ್ಲಿ ಪ್ರಕಟಿಸಿತ್ತು.

ವಿಪಕ್ಷಗಳ ಆರೋಪವೇನು?: ಯಾವುದೇ ಪಾರದರ್ಶಕತೆಯಿಲ್ಲದೇ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಹೆಚ್​ಎಎಲ್ ಸಂಸ್ಥೆಯನ್ನು ಒಪ್ಪಂದದಿಂದ ಕೈಬಿಡಲಾಗಿದೆ. 136 ಫೈಟರ್ ಜೆಟ್​ಗಳ ಬದಲು ದುಬಾರಿ ಬೆಲೆ ತೆತ್ತು 36 ಜೆಟ್​ಗಳನ್ನ ಖರೀದಿಸಲಾಗಿದೆ. ಫ್ರಾನ್ಸ್​ನ ಡಸೋ(Dassault) ಸಂಸ್ಥೆ ಜೊತೆ ಹೆಚ್​ಎಎಲ್ ಬದಲು ಖಾಸಗಿ ಸಂಸ್ಥೆಯನ್ನು ಪಾಲುದಾರವನ್ನಾಗಿ ಮಾಡುವ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಕಾಂಗ್ರೆಸ್ ಪಕ್ಷ ಆಪಾದಿಸುತ್ತಾ ಬಂದಿದೆ. ಈ ಆರೋಪಕ್ಕೆ ಪುಷ್ಟಿ ಕೊಡುವಂತೆ ಫ್ರಾನ್ಸ್​ ದೇಶದ ಮಾಜಿ ಅಧ್ಯಕ್ಷರು, ಈ ಒಪ್ಪಂದದಲ್ಲಿ ಡಸೋ ಏವಿಯೇಷನ್​ಗೆ ಯಾರು ಪಾಲುದಾರನಾಗಬೇಕು ಎಂಬ ಆಯ್ಕೆ ಫ್ರಾನ್ಸ್​ಗೆ ಇರಲಿಲ್ಲ. ಭಾರತ ಸರಕಾರವೇ ಹೆಸರು ಸೂಚಿಸಿತ್ತು ಎಂದು ಹೇಳಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ-----------
First published:August 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading