ನಮ್ಮ ಷರತ್ತಿಗೆ ಒಪ್ಪಿದರೆ ಪಾಕ್​ ಜೊತೆ ಮಾತುಕತೆಗೆ ಭಾರತ ಸಿದ್ಧ; ಗೃಹ ಸಚಿವ ರಾಜನಾಥ್​ ಸಿಂಗ್ ಸ್ಪಷ್ಟನೆ

ಭಯೋತ್ಪಾದನೆ ಮತ್ತು ಸಂಧಾನವೆರಡೂ ಒಟ್ಟಿಗೇ ಇರಲು ಸಾಧ್ಯವಿಲ್ಲದ ಕಾರಣ ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ನಾವು ಮುಂದಾಗಿಲ್ಲ. ಪಾಕ್​ ನೆಲದಲ್ಲಿರುವ ಭಯೋತ್ಪಾದಕರ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸುವ ಬಗ್ಗೆ ಪಾಕಿಸ್ತಾನ ಸರ್ಕಾರ ಮುಂದಾಳತ್ವ ವಹಿಸಿದರೆ ನಾವು ಸಿದ್ಧರಿದ್ದೇವೆ ಎಂದು ರಾಜನಾಥ್​ ಸಿಂಗ್​ ಹೇಳಿದ್ದಾರೆ.

sushma chakre | news18
Updated:March 16, 2019, 2:02 PM IST
ನಮ್ಮ ಷರತ್ತಿಗೆ ಒಪ್ಪಿದರೆ ಪಾಕ್​ ಜೊತೆ ಮಾತುಕತೆಗೆ ಭಾರತ ಸಿದ್ಧ; ಗೃಹ ಸಚಿವ ರಾಜನಾಥ್​ ಸಿಂಗ್ ಸ್ಪಷ್ಟನೆ
ರಾಜನಾಥ್​ ಸಿಂಗ್​
sushma chakre | news18
Updated: March 16, 2019, 2:02 PM IST
ನವದೆಹಲಿ (ಮಾ. 16): ಪಾಕ್​ ಉಗ್ರರು ನಡೆಸಿದ ಪುಲ್ವಾಮಾ ದಾಳಿಗೆ ನಮ್ಮ ಸೇನೆ ನಡೆಸಿದ ವೈಮಾನಿಕ ದಾಳಿ ದಿಟ್ಟ ಉತ್ತರವಾಗಿದೆ. ಆದರೆ, ಇದನ್ನು ರಾಜಕೀಯ ಪ್ರಚಾರಕ್ಕಾಗಿ ಯಾರೂ ಬಳಸಿಕೊಳ್ಳಬಾರದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​​ ಹೇಳಿದ್ದಾರೆ.

ನ್ಯೂಸ್​18 ಸಮೂಹ ಸಂಪಾದಕ ರಾಹುಲ್ ಜೋಷಿ ನಡೆಸಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಜನಾಥ್​ ಸಿಂಗ್, ಭಾರತೀಯ ಸೇನೆ ಬಾಲಕೋಟ್​ ಮೇಲೆ ದಾಳಿ ನಡೆಸಿ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಬಹುದೆಂದು ಪಾಕ್​ ಊಹಿಸಿರಲಿಲ್ಲ. ಹೀಗಾಗಿ, ನಮ್ಮ ಸೇನೆಯ ನಡೆಯಿಂದ ಪಾಕಿಸ್ತಾನಕ್ಕೆ ಆಘಾತವಾಗಿದೆ. ಹಾಗಾಗಿಯೇ ಈ ದಾಳಿ ನಡೆದಿದ್ದೇ ಸುಳ್ಳು, ಅದಕ್ಕೆ ಸಾಕ್ಷಿಗಳಿವೆಯಾ? ಎಂದು ಪ್ರಶ್ನಿಸುತ್ತಿದೆ ಎಂದಿದ್ದಾರೆ.

ಭಾರತದ ಜೊತೆಗೆ ಜಗಳಕ್ಕಿಳಿದು ಭಾರೀ ಬೆಲೆ ತೆತ್ತ ಪಾಕಿಸ್ತಾನ; ಗಗನಕ್ಕೇರಿದ ದಿನ ಬಳಕೆ ವಸ್ತುಗಳ ದರ!

ಬಾಲಕೋಟ್​ ಮೇಲೆ ನಡೆಸಿದ ದಾಳಿ ನಮ್ಮ ದೇಶದ ಭದ್ರತೆಗಾಗಿ ಕೈಗೊಂಡ ನಿರ್ಧಾರವಾಗಿತ್ತು. ಇದನ್ನು ರಾಜಕೀಯವಾಗಿ ಯಾರೂ ಬಳಸಿಕೊಳ್ಳಬಾರದು. ಸೈನಿಕರು ನಮ್ಮ ದೇಶದ ಗಡಿಭಾಗ, ಭದ್ರತೆ, ರಾಜಕೀಯ ವ್ಯವಸ್ಥೆಯನ್ನು ಕಾಯುವವರು. ಅವರ ಧೈರ್ಯಕ್ಕೆ, ದೇಶಪ್ರೇಮಕ್ಕೆ ನಾವು ಗೌರವ ನೀಡಬೇಕು ಎಂದು ಹೇಳಿದ್ದಾರೆ.

ಪಾಕ್​ ಜೊತೆ ಸಂಧಾನಕ್ಕೆ ಸಿದ್ಧರಿದ್ದೇವೆ:

ಭಾರತದೊಂದಿಗೆ ಮಾತುಕತೆ ನಡೆಸಿ ಸಂಧಾನ ಮಾಡಿಕೊಳ್ಳುವುದಾಗಿ ಹೇಳಿದ್ದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್​ ಖಾನ್​ ಪ್ರಸ್ತಾವನೆಯ ಬಗ್ಗೆಯೂ ಮಾತನಾಡಿರುವ ಸಚಿವ ರಾಜನಾಥ್​ ಸಿಂಗ್, ಭಾರತ ಕೂಡ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಲು ಇಷ್ಟಪಡುತ್ತದೆ. ಆದರೆ, ನಾವು ಸ್ನೇಹಹಸ್ತ ಚಾಚಬೇಕೆಂದರೆ ಪಾಕಿಸ್ತಾನ ತನ್ನ ದೇಶದಲ್ಲಿರುವ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಭಯೋತ್ಪಾದಕರನ್ನು ಸಲಹುವುದನ್ನೇ ಮುಂದುವರೆಸುತ್ತೇವೆಂದರೆ ಪಾಕ್​ ಜೊತೆಗೆ ನಮ್ಮ ಸಂಧಾನ ಅಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ.
Loading...

'ಶಾಂತಿಯ ಸಂಕೇತವಾಗಿ ವಿಂಗ್​ ಕಮಾಂಡರ್​ ಅಭಿನಂದನ್​ ಇಂದು ಬಿಡುಗಡೆ'; ಪಾಕ್​ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್​ ಖಾನ್​ ಹೇಳಿಕೆ

ಪಾಕಿಸ್ತಾನದೊಂದಿಗೆ ನಾವು ಕೂಡ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಆದರೆ, ಭಯೋತ್ಪಾದನೆ ಮತ್ತು ಸಂಧಾನವೆರಡೂ ಒಟ್ಟಿಗೇ ಇರಲು ಸಾಧ್ಯವಿಲ್ಲದ ಕಾರಣ ನಾವು ಹಿಂದೆ ಸರಿದಿದ್ದೇವೆ. ಪಾಕ್​ ನೆಲದಲ್ಲಿರುವ ಭಯೋತ್ಪಾದಕರ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸುವ ಬಗ್ಗೆ ಪಾಕಿಸ್ತಾನ ಸರ್ಕಾರ ಮುಂದಾಳತ್ವ ವಹಿಸಬೇಕು. ಅವರು ಉಗ್ರರಿಗೆ ಯಾವುದೇ ರೀತಿಯ ಪ್ರೋತ್ಸಾಹ ನೀಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಉಗ್ರರಿಗೆ ಅವರ ನೆಲದಲ್ಲಿ ಯಾವುದೇ ಜಾಗವಿಲ್ಲ ಎಂಬುದನ್ನು ಘೋಷಿಸಬೇಕು. ಹಾಗೇನಾದರೂ ಮಾಡಿದರೆ ಮಾತ್ರ ಪಾಕ್​ ಜೊತೆಗೆ ಮಾತುಕತೆ ನಡೆಸಿ ಸಂಧಾನ ಮಾಡಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ರಾಜನಾಥ್​ ಸಿಂಗ್​ ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​, ಪಾಕಿಸ್ತಾನ ಈಗಾಗಲೇ ಭಾರತದೊಂದಿಗೆ ಶಾಂತಿ-ಸೌಹಾರ್ದತೆಯ ಸಂಬಂಧ ಬೆಸೆಯಲು ಮೊದಲ ಹೆಜ್ಜೆ ಇಟ್ಟಿದೆ. ಭಾರತದ ಚುನಾವಣೆಯ ನಂತರ ಹೊಸ ಸರ್ಕಾರದೊಂದಿಗೆ ಈ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಪಾಕಿಸ್ತಾನ ತನ್ನ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ ಎಂದಿದ್ದರು.

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...