ಕ್ಷೇತ್ರ ಬದಲಿಸುವ ಪ್ರಶ್ನೆ ಇಲ್ಲ; ವಾರಣಾಸಿಯಿಂದ ಮೋದಿ, ಲಕ್ನೋದಿಂದ ನನ್ನ ಸ್ಪರ್ಧೆ; ರಾಜನಾಥ್​ ಸಿಂಗ್​ ಸ್ಪಷ್ಟನೆ

ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಎಸ್​ಪಿ ಹಾಗೂ ಎಸ್​ಪಿ ಮೈತ್ರಿ ಮಾಡಿಕೊಂಡಿರುವುದು ಕೂಡ ಬಿಜೆಪಿಗೆ ಸಂಕಷ್ಟ ತಂದೊಡ್ಡಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತೊಂದು ಐತಿಹಾಸಿಕ ಕ್ಷೇತ್ರದತ್ತ ಮುಖ ಮಾಡಿದ್ದಾರೆ ಎನ್ನಲಾಗಿತ್ತು.

Seema.R | news18
Updated:March 16, 2019, 4:07 PM IST
ಕ್ಷೇತ್ರ ಬದಲಿಸುವ ಪ್ರಶ್ನೆ ಇಲ್ಲ; ವಾರಣಾಸಿಯಿಂದ ಮೋದಿ, ಲಕ್ನೋದಿಂದ ನನ್ನ ಸ್ಪರ್ಧೆ; ರಾಜನಾಥ್​ ಸಿಂಗ್​ ಸ್ಪಷ್ಟನೆ
ಪ್ರಧಾನಿ ಮೋದಿ ಮತ್ತು ರಾಜನಾಥ್​​ ಸಿಂಗ್​
Seema.R | news18
Updated: March 16, 2019, 4:07 PM IST
ನವದೆಹಲಿ (ಮಾ.16): ಈ ಬಾರಿ ಕೂಡ ವಾರಣಾಸಿ ಕ್ಷೇತ್ರದಿಂದಲೇ ಪ್ರಧಾನಿ ಮೋದಿ ಮತ್ತೊಮ್ಮೆ ಲೋಕಸಭಾ ಚುನಾವಣೆಗೆ  ಸ್ಪರ್ಧೆ ಬಯಸಿದ್ದು , ನಾನು ಲಕ್ನೋ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದೇನೆ ಎಂದು ಗೃಹ ಸಚಿವ ರಾಜನಾಥ್​ ಸಿಂಗ್​ ಸ್ಪಷ್ಟಪಡಿಸಿದ್ದಾರೆ.

ನೆಟ್​ವರ್ಕ್​​ 18 ಸಮೂಹ ಸಂಪಾದಕರಾದ ರಾಹುಲ್​ ಜೋಷಿಯವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಲಕ್ನೋ ಜನರು ನನ್ನ ಮೇಲೆ ಅಪಾರ ಪ್ರೀತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಲಕ್ನೋ ಕ್ಷೇತ್ರದಿಂದಲೇ ಚುನಾವಣೆ ಎದುರಿಸಲಿದ್ದೇನೆ. ಇನ್ನು ಮೋದಿಯವರಿಗೆ ಕಳೆದ ಬಾರಿಯೂ ವಾರಣಾಸಿ ಜನರು ಆರಿಸಿಕಳುಹಿಸಿದ್ದು, ಅವರು ಕೂಡ ಅಲ್ಲಿಂದಲೇ ಸ್ಪರ್ಧಿಸಲು ಉತ್ಸಕರಾಗಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಕಣದಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷೇತ್ರ ಬದಲಾವಣೆ ಬಯಸಿದ್ದಾರೆ. ಅವರು ವಾರಣಾಸಿ ಬಿಟ್ಟು ಬೇರೆ ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎಂಬ ಅನೇಕ ಊಹಾಪೋಹಾಗಳು ಹರಿದಾಡುತ್ತಿದ್ದವು. ಈ ಗಾಳಿ ಸುದ್ದಿಗೆ ರಾಜನಾಥ್​ ಸಿಂಗ್​ ತೆರೆ ಎಳೆದಿದ್ದಾರೆ.

2014ರ ಲೋಕಸಭಾ ಚನಾವಣೆಯಲ್ಲಿ ಉತ್ತರ ಪ್ರದೇಶದ ವಾರಣಾಸಿಯಿಂದ ಮೋದಿ ಸ್ಪರ್ಧಿಸುವ ಮೂಲಕ ಬಿಜೆಪಿ 80ರಲ್ಲಿ 71 ಕ್ಷೇತ್ರ ಗೆಲ್ಲಲು ಸಾಧ್ಯವಾಗಿತ್ತು. ಆದರೆ, ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಹಿನ್ನೆಡೆ ಅನುಭವಿಸಿತ್ತು. ಅಲ್ಲದೇ ಉತ್ತರ ಪ್ರದೇಶದಲ್ಲಿ ಈ ಬಾರಿ ಬಿಎಸ್​ಪಿ ಹಾಗೂ ಎಸ್​ಪಿ ಮೈತ್ರಿ ಮಾಡಿಕೊಂಡಿರುವುದು ಕೂಡ ಬಿಜೆಪಿಗೆ ಸಂಕಷ್ಟ ತಂದೊಡ್ಡಿತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತೊಂದು ಐತಿಹಾಸಿಕ ಕ್ಷೇತ್ರದತ್ತ ಮುಖ ಮಾಡಿದ್ದಾರೆ ಎನ್ನಲಾಗಿತ್ತು.

ಒಡಿಶಾ ಹಾಗೂ ಬೆಂಗಾಲದಲ್ಲಿ ಬಿಜೆಪಿ ದರ್ಬಲವಾಗಿರುವುದರಿಂದ ಅಲ್ಲಿ ಪಕ್ಷವನ್ನು ಬಲಗೊಳಿಸಲು ಮೋದಿ ಕ್ಷೇತ್ರ ಬದಲಾವಣೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪುಣ್ಯಕ್ಷೇತ್ರವಾದ ವಾರಣಾಸಿ ಬಳಿಕ ಪ್ರಧಾನಿ ಒರಿಸ್ಸಾದ ಪುರಿ ಕ್ಷೇತ್ರದ ಬಗ್ಗೆ ಒಲವು ತೋರಿಸಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ಇದನ್ನು ಓದಿ: ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಸೇರಿ ರಾಜ್ಯ ಕಾಂಗ್ರೆಸ್ ನಾಯಕರ ಒತ್ತಡಈ ಹೇಳಿಕೆ ತಳ್ಳಿಹಾಕಿರುವ ರಾಜನಾಥ್​ ಸಿಂಗ್​ ಮೋದಿ ನೋಯ್ಡಾದಲ್ಲಿಯೂ ಸ್ಪರ್ಧಿಸುತ್ತಾರೆ ಎಂದು ಕೂಡ ಹೇಳುತ್ತಾರೆ. ಆದರೆ, ಇದೆಲ್ಲ ಸುಳ್ಳು ಅವರು ಕ್ಷೇತ್ರ ಬದಲಿಸುವ ಪ್ರಶ್ನೆಯೇ ಇಲ್ಲ. ಅವರು ವಾರಣಾಸಿಯಿಂದಲೇ ಸ್ಪರ್ಧಿಸುತ್ತಾರೆ ಎಂದರು.

ಲಕ್ನೋನಲ್ಲಿ ಐದು ಬಾರಿ ಚುನಾವಣೆ ಎದುರಿಸಿದ್ದ ಮಾಜಿ ಪ್ರಧಾನಿ ಅವರ ದಾಖಲೆಯನ್ನು ರಾಜನಾಥ್​ ಸಿಂಗ್ ಕೂಡ ಮುಂದುವರೆಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಕಳೆದವಾರವಷ್ಟೇ ಲಕ್ನೋಗೆ ಭೇಟಿ ನೀಡಿದ ಅವರು 1.25 ಲಕ್ಷ ಕೋಟಿ ಯೋಜನೆಗೆ ಚಾಲನೆ ನೀಡಿದರು.

First published:March 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ