ಯೋಗಿ ಅವರ 80 vs 20 ಹೇಳಿಕೆಯನ್ನು ಹಿಂದೂ-ಮುಸ್ಲಿಂ ಅರ್ಥದಲ್ಲಿ ನೋಡಬೇಡಿ: Rajnath Singh

UP Election 2022: ವಿರೋಧ ಪಕ್ಷಗಳಿಗೆ ಪ್ರತಿಯಾಗಿ ಮೋದಿ ಜನಪ್ರಿಯತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆ ರೀತಿ ಮಾತನಾಡಿರಬಹುದು. ನಾವು ಅದಕ್ಕೆ ಹಿಂದೂ, ಮುಸ್ಲಿಂ ದೃಷ್ಠಿಕೋನವನ್ನು ನೀಡಬಾರದು ಎಂದು ರಾಜನಾಥ್ ಸಿಂಗ್ ಚರ್ಚೆಗೆ ಬೇರೆಯದ್ದೇ ಆಯಾಮವನ್ನು ನೀಡಿದ್ದಾರೆ.

 ರಕ್ಷಣಾ ಸಚಿವ ರಾಜನಾಥ್ ಸಿಂಗ್

ರಕ್ಷಣಾ ಸಚಿವ ರಾಜನಾಥ್ ಸಿಂಗ್

  • Share this:
ಲಕ್ನೋ, ಫೆ. 20: ದೇಶಾದ್ಯಂತ ಭಾರೀ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ (Uttar Pradesh Assembly Elections) ಇಂದು ಮೂರನೇ ಹಂತದ ಮತದಾನವಾಗಿದೆ. ಮೂರು ಹಂತಗಳು ಮುಗಿದಿರುವ ಈ‌ ಹೊತ್ತಿನಲ್ಲಿ ಚುನಾವಣಾ ಕಣದಲ್ಲಿ ಭಾರೀ ಬಿರುಸು ಕೂಡ ಕಂಡುಬರುತ್ತಿದೆ. ನ್ಯೂಸ್ 18 ಗೆ ಜೊತೆ ಮಾತನಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Sing) ಇತ್ತೀಚೆಗೆ ಚರ್ಚೆ ಆಗುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ '80% ವರ್ಸಸ್ 20%' ಹೇಳಿಕೆಯನ್ನು 'ಹಿಂದೂ-ಮುಸ್ಲಿಂ' ಲೆನ್ಸ್‌ನಿಂದ ನೋಡಬಾರದು ಎಂದು ಹೇಳಿದ್ದಾರೆ. ರಾಜನಾಥ್ ಸಿಂಗ್ ಸಂದರ್ಶನದ ಆಯ್ದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

80% ವರ್ಸಸ್ 20% ಎಂದರೆ ಬೇರೆ ಏನೋ ಇರಬೇಕು.
80% ವರ್ಸಸ್ 20% ಎಂದರೆ 80% ಹಿಂದುಗಳು ವರ್ಸಸ್ 20% ಮುಸ್ಲಿಮರು ಎಂಬ ಅರ್ಥದಲ್ಲಿ ಯೋಗಿ ಆದಿತ್ಯನಾಥ್ ಮಾತನಾಡಿದ್ದರು.‌ ಆದರೆ ರಾಜನಾಥ್ ಸಿಂಗ್ ಅವರು ಯೋಗಿ ಆದಿತ್ಯನಾಥ್ '80% ವರ್ಸಸ್ 20%' ಹೇಳಿಕೆಯನ್ನು ಏಕೆ ಮಾಡಿದ್ದಾರೆಂದು ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ ಇದನ್ನು ಹಿಂದೂ-ಮುಸ್ಲಿಂ ಸಮಸ್ಯೆ ಎಂದು ವ್ಯಾಖ್ಯಾನಿಸುವುದು ತಪ್ಪು. ಬಹುಶಃ ಅವರು ವಿರೋಧ ಪಕ್ಷಗಳಿಗೆ ಪ್ರತಿಯಾಗಿ ಮೋದಿ ಜನಪ್ರಿಯತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆ ರೀತಿ ಮಾತನಾಡಿರಬಹುದು. ನಾವು ಅದಕ್ಕೆ ಹಿಂದೂ-ಮುಸ್ಲಿಂ ದೃಷ್ಠಿಕೋನವನ್ನು ನೀಡಬಾರದು ಎಂದು ಚರ್ಚೆಗೆ ಬೇರೆಯದೇ ಆಯಾಮವನ್ನು ನೀಡಿದ್ದಾರೆ.

ಇದನ್ನೂ ಓದಿ: PM Narendra Modi: ಗುಜರಾತ್​ನಿಂದ ಶುರುವಾಯ್ತು ಮೋದಿ ಅಭಿವೃದ್ಧಿ ಮಂತ್ರ, ಭಯೋತ್ಪಾದನೆ ಮಟ್ಟ ಹಾಕಲು ಮೋದಿ ಕಾರ್ಯತಂತ್ರ

ಬಿಜೆಪಿ ಗೆಲುವು ಗ್ಯಾರಂಟಿ
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಗೆಲುವು ಸಾಧಿಸುವ ಬಗ್ಗೆ ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾದ ಇದೆ ಮತ್ತು ಅದು ತುಂಬಾ ಪ್ರಬಲವಾಗಿದೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನವಿಲ್ಲ. ರಾಜ್ಯದಲ್ಲಿ ಯೋಗಿ ಅವರ ಜನಪ್ರಿಯತೆ ಹೆಚ್ಚಿದ್ದು ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ. ನಾವು (ಬಿಜೆಪಿ) ಕೇವಲ ಹಿಂದೂಗಳನ್ನು ರಕ್ಷಿಸುವುದಿಲ್ಲ. ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಆಡಳಿತ ವಿರೋಧಿ ಅಲೆ ಇಲ್ಲ
ರಾಜ್ಯದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಇದೆ ಎನ್ನುವುದನ್ನು ರಾಜನಾಥ್ ಸಿಂಗ್ ತಳ್ಳಿಹಾಕಿದರು. 2014ರಲ್ಲಿ  ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಮತ್ತೆ 2019ರಲ್ಲಿ  ಚುನಾಯಿತರಾಗಿಲ್ಲವೇ ಅದೇ ರೀತಿ ಉತ್ತರ ಪ್ರದೇಶದಲ್ಲೂ ಆಡಳಿತ ವಿರೋಧಿ ಅಲೆ ಇಲ್ಲ. ಅಲೆ ಇರುವುದು ಕೇವಲ ಅಧಿಕಾರದ ಪರವಾಗಿದೆ ಮತ್ತು ಯುಪಿಯಲ್ಲೂ ಅದೇ ಸಂಭವಿಸುತ್ತದೆ ಎಂದರು.

ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಂಡ‌ ಸಿಂಗ್
ಮೂರು ರೈತ ವಿರೋಧಿ ಕೃಷಿ ಕಾನೂನುಗಳ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್ ಅವರು, ರೈತ ಮುಖಂಡರು ಮೂರು ಕೃಷಿ ಕಾನೂನುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಅವರಿಗೆ ಸಕಾರಣ ತಿಳಿಸಿ ಮನವೊಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗಿದೆ. ಈ‌ ವಿಚಾರದಲ್ಲಿ ಪ್ರಧಾನಿ ಮೋದಿ ತೋರಿದ ಸಂವೇದನಾಶೀಲತೆಯನ್ನು ಮೆಚ್ಚಲೇಬೇಕು. ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರು ವರ್ಚಸ್ವಿ ಕೆಲಸ ಮಾಡಿದರು ಎಂದು ಹೇಳಿದರು.

ಇದನ್ನೂ ಓದಿ: Punjab Election 2022: ಬಿಜೆಪಿ, ಅಕಾಲಿದಳ ಗೆಲುವಿಗಾಗಿ ಡೇರಾ ಸಚ್ಚಾ ಸೌದಾ ಮೊರೆ ಹೋಗಿವೆ: ಚನ್ನಿ ವಾಗ್ದಾಳಿ

ಗೆಲುವು ನಮ್ಮದೇ ಎಂದ ಅಖಿಲೇಶ್ ಯಾದವ್
ಇನ್ನೊಂದೆಡೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು, ಹಿಂದೆ ಮೊದಲೆರಡು ಹಂತಗಳಲ್ಲಿ ಮತದಾನ ನಡೆದಿದ್ದ ಕ್ಷೇತ್ರಗಳ ಪೈಕಿ ಸಮಾಜವಾದಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷ ಶತಕ ಬಾರಿಸಿದೆ ಎಂದು ಹೇಳಿದ್ದರು‌. ಇಂದು 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದಲ್ಲೂ ಸಮಾಜವಾದಿ ಪಕ್ಷ ಮುನ್ನಡೆ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತದಾನವಾದ ಹತ್ರಾಸ್, ಇಟಾವಾ, ಮೈನಪುರಿ, ಕನೌಜ್, ಕಾನ್ಪುರ್, ಫಿರೋಜಾಬಾದ್, ಝಾನ್ಸಿ, ಲಲಿತ್ ಪುರ್, ಕಾಸಾಗಂಜ್ ಮತ್ತಿತರ ಜಿಲ್ಲೆಗಳು ಸಮಾಜವಾದಿ ಪಕ್ಷದ ಬಾಹುಳ್ಯವುಳ್ಳವು ಎಂಬ ಕಾರಣಕ್ಕೆ ಅಖಿಲೇಶ್ ಯಾದವ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ
ಬಿಜೆಪಿ ನಾಯಕರು ಉತ್ತರ ಪ್ರದೇಶದ ಚುನಾವಣಾ ಕಣದಲ್ಲಿ ಮಾತೆತ್ತಿದರೆ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಖಿಲೇಶ್ ಯಾದವ್ ಅವರು 'ರಾಜ್ಯದಲ್ಲಿ 'ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆಗ್ರಾದಲ್ಲಿ ಉದ್ಯಮಿಯೊಬ್ಬರ ಮಗನನ್ನು ಅಪಹರಿಸಿ ನಂತರ ಕೊಲ್ಲಲಾಯಿತು. ಆಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ನಿದ್ದೆ ಮಾಡುತ್ತಿದ್ದಾರಾ? ಅವರು ಜವಾಬ್ದಾರಿಯನ್ನು ನಿಭಾಯಿಸಲು ಮತ್ತು ಅಪರಾಧಿಯನ್ನು ಶಿಕ್ಷಿಸಲು ಸಾಧ್ಯವಾಯಿತೇ? ಅವರು ಗೋರಖ್‌ಪುರದ ಎಕ್ಸ್‌ಪ್ರೆಸ್‌ವೇಗೆ ಸೇರಲು ಸಹ ಸಾಧ್ಯವಾಗಲಿಲ್ಲ' ಎಂದು ಹೇಳಿದ್ದಾರೆ.
Published by:Kavya V
First published: