ಫ್ರಾನ್ಸ್​ಗೆ ರಾಜನಾಥ್ ಸಿಂಗ್ ಭೇಟಿ; ಭಾರತದ ಕೈಸೇರಿದ ಮೊದಲ ರಫೇಲ್ ಜೆಟ್; ಹೊಸ ಆಸ್ತ್ರಕ್ಕೆ ರಕ್ಷಣಾ ಸಚಿವರಿಂದ ಆಯುಧ ಪೂಜೆ

ಫ್ರಾನ್ಸ್​ನ ಬಾರ್ಡೀಕ್ಸ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

Vijayasarthy SN | news18
Updated:October 8, 2019, 7:03 PM IST
ಫ್ರಾನ್ಸ್​ಗೆ ರಾಜನಾಥ್ ಸಿಂಗ್ ಭೇಟಿ; ಭಾರತದ ಕೈಸೇರಿದ ಮೊದಲ ರಫೇಲ್ ಜೆಟ್; ಹೊಸ ಆಸ್ತ್ರಕ್ಕೆ ರಕ್ಷಣಾ ಸಚಿವರಿಂದ ಆಯುಧ ಪೂಜೆ
ರಫೇಲ್ ವಿಮಾನದ ಬಳಿ ರಾಜನಾಥ್ ಸಿಂಗ್
Vijayasarthy SN | news18
Updated: October 8, 2019, 7:03 PM IST
ನವದೆಹಲಿ(ಅ. 08): ಫ್ರಾನ್ಸ್​ನ ಡಸ್ಸೋ ಏವಿಯೇಶನ್ ಸಂಸ್ಥೆಯಿಂದ 36 ರಫೇಲ್ ಜೆಟ್​ಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿರುವ ಭಾರತಕ್ಕೆ ಇಂದು ಮೊದಲ ವಿಮಾನ ಅಧಿಕೃತವಾಗಿ ಹಸ್ತಾಂತರವಾಗಿದೆ. ಫ್ರಾನ್ಸ್​ನ ಬಾರ್ಡೀಕ್ಸ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಡಸ್ಸೋ ಏವಿಯೇಶನ್ ಸಂಸ್ಥೆ ತನ್ನ ರಫೇಲ್ ಯುದ್ಧವಿಮಾನವನ್ನು ಹಸ್ತಾಂತರಿಸಿತು. ಡಸ್ಸೋ ಏವಿಯೇಶನ್​ನ ಘಟಕದಲ್ಲಿ ಟೇಪು ಕತ್ತರಿಸುವ ಮೂಲಕ ಹಸ್ತಾಂತರ ಪ್ರಕ್ರಿಯೆಗೆ ರಾಜನಾಥ್ ಚಾಲನೆ ನೀಡಿದರು.

ರಾಜನಾಥ್ ಸಿಂಗ್ ಅವರು ರಫೇಲ್ ಜೆಟ್ ವಿಮಾನದ ಎದುರು ತೆಂಗಿನ ಕಾಯಿ ಒಡೆದು ದೀಪ ಬೆಳಗಿಸುವ ಮೂಲಕ ಶಾಸ್ತ್ರೋಕ್ತವಾಗಿ ಆಯುಧ ಪೂಜೆಯನ್ನೂ ನೆರವೇರಿಸಿದರು.

ಇದನ್ನೂ ಓದಿ: ಉತ್ತರಾಖಂಡ್​ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಬಿಜೆಪಿಯಿಂದ ನಾಲ್ವರ ಉಚ್ಛಾಟನೆ

ರಾಜನಾಥ್ ಸಿಂಗ್ ಅವರಿಗೆ ರಫೇಲ್ ಅನ್ನು ಹಸ್ತಾಂತರಿಸಲಾಗಿದ್ದರೂ ಭಾರತದಲ್ಲಿರುವ ವಾಯುಪಡೆಯ ನೆಲೆಗೆ ಇದು ಬರುವುದು ಮುಂದಿನ ವರ್ಷದ ಮೇ ತಿಂಗಳಲ್ಲಷ್ಟೇ. ಒಪ್ಪಂದದಲ್ಲಿರುವ 36 ರಫೇಲ್ ವಿಮಾನಗಳ ಪೈಕಿ ನಾಲ್ಕು ಯುದ್ಧವಿಮಾನಗಳು ಅಂದು ಭಾರತಕ್ಕೆ ಬಂದು ವಾಯುಪಡೆಗೆ ನಿಯೋಜನೆಗೊಳ್ಳಲಿವೆ. 2022ರ ಸೆಪ್ಟೆಂಬರ್​ನಷ್ಟರಲ್ಲಿ ಎಲ್ಲಾ 36 ರಫೇಲ್ ವಿಮಾನಗಳು ಭಾರತಕ್ಕೆ ಬಂದು ಸೇನಾ ಪಡೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.

ಫ್ರಾನ್ಸ್​ನ ಬಾರ್ಡೀಕ್ಸ್ ನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದರು.

ಇದನ್ನೂ ಓದಿ: ಮತ್ತೆ ಪಂಜಾಬ್​ ಗಡಿಯೊಳಗೆ ಕಾಣಿಸಿಕೊಂಡ ಪಾಕಿಸ್ತಾನದ ಡ್ರೋನ್; ಭಾರತೀಯ ಸೇನೆಯಲ್ಲಿ ಹೈ ಅಲರ್ಟ್

“ಭಾರತ ಮತ್ತು ಫ್ರಾನ್ಸ್ ದ್ವಿಪಕ್ಷೀಯ ಸಂಬಂಧಕ್ಕೆ ಇದೊಂದು ಮೈಲಿಗಲ್ಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ರಫೇಲ್ ಹಸ್ತಾಂತರವಾಗುತ್ತಿರುವುದು ನನಗೆ ಖುಷಿ ತಂದಿದೆ. ನಮ್ಮ ಸೇನಾ ಪಡೆಗೆ ರಫೇಲ್ ಹೊಸ ಶಕ್ತಿ ತರುತ್ತದೆ” ಎಂದು ಭಾರತದ ರಕ್ಷಣಾ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
Loading...

“ಫ್ರೆಂಚ್ ಭಾಷೆಯಲ್ಲಿ ರಫೇಲ್ ಎಂದರೆ ಗಾಳಿಯ ಶಕ್ತಿ ಎಂದಿದೆ. ಈ ಯುದ್ಧವಿಮಾನವು ತನ್ನ ಹೆಸರಿಗೆ ತಕ್ಕಂತೆ ಪ್ರಜ್ವಲಿಸುತ್ತದೆಂಬ ವಿಶ್ವಾಸವಿದೆ. ಭಾರತದಲ್ಲಿ ಶಾಂತಿ ಮತ್ತು ಭದ್ರತೆ ಕಾಯ್ದುಕೊಳ್ಳಲು ರಫೇಲ್ ಸಹಾಯಕವಾಗುವ ನಂಬಿಕೆ ಇದೆ” ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...