ಜೈಲಿನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ರಾಜೀವ್ ಗಾಂಧಿ ಹತ್ಯೆ ಅಪರಾಧಿ ನಳಿನಿ

ಕಳೆದ 29 ವರ್ಷಗಳ ಸೆರೆವಾಸದಲ್ಲಿ ನಳಿನಿ ಯಾವಾಗೂ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿಲ್ಲ. ಆದರೆ, ಈಗ ಅವರು ಪ್ರಾಣ ತೆಗೆದುಕೊಳ್ಳಲು ಮುಂದಾಗಿರುವುದು ಆತಂಕ ಮೂಡಿಸಿದೆ ಎಂದು ಪುಗಳೇಂದಿ ತಿಳಿಸಿದ್ದಾರೆ.

ನಳಿನಿ

ನಳಿನಿ

 • Share this:
  ಬೆಂಗಳೂರು (ಜು.21): ಮಾಜಿ ಪ್ರಧಾನಿ ದಿವಂಗತ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್​ ಅವರು ಜೈಲಿನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕಳೆದ 29 ವರ್ಷಗಳಿಂದ ಅವರು ಸೆರೆವಾಸ ಅನುಭವಿಸುತ್ತಿದ್ದು, ಇದೇ ಮೊದಲ ಬಾರಿಗೆ ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ.

  ವೆಲ್ಲೂರಿನ ಜೈಲಿನಲ್ಲಿ ನಳಿನಿಯನ್ನು ಕೂಡಿಡಲಾಗಿದೆ. ಮಾನಸಿಕವಾಗಿ ಕುಗ್ಗಿರುವ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ನಳಿನಿ ಪರ ವಕೀಲ ಪುಗಳೇಂದಿ ತಿಳಿಸಿದ್ದಾರೆ.

  ಕಳೆದ 29 ವರ್ಷಗಳ ಸೆರೆವಾಸದಲ್ಲಿ ನಳಿನಿ ಯಾವಾಗೂ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿಲ್ಲ. ಆದರೆ, ಈಗ ಅವರು ಪ್ರಾಣ ತೆಗೆದುಕೊಳ್ಳಲು ಮುಂದಾಗಿರುವುದು ಆತಂಕ ಮೂಡಿಸಿದೆ ಎಂದು ಪುಗಳೇಂದಿ ತಿಳಿಸಿದ್ದಾರೆ.

  ನಳಿನಿ ಹಾಗೂ ಜೈಲಿನಲ್ಲಿದ್ದ ಮತ್ತೋರ್ವ ಕೈದಿಗೆ ಜಗಳ ಉಂಟಾಗಿತ್ತು. ಈಜಗಳ ತಾರಕಕ್ಕೇರಿತ್ತು. ಜಗಳ ಮಾಡಿದ ಅಪರಾಧಿ ಮಹಿಳೆ ಈ ಬಗ್ಗೆ ಜೈಲಿನ ಮೇಲಧಿಕಾರಿ ಬಳಿ ದೂರು ದಾಖಲಿಸಿದ್ದರು. ಈ ವೇಳೆ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

  ಇನ್ನು ನಳಿನಿ ಗಂಡ ಹಾಗೂ ರಾಜೀವ್​ ಗಾಂಧಿ ಕೊಲೆ ಅಪರಾಧಿ ಮುರ್ಗನ್​ ವಕೀಲರ ಜೊತೆ ಮಾತುಕತೆ ನಡೆಸಿದ್ದು, ನಳಿನಿಯನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಕೋರಿದ್ದಾರೆ.

  1991 ಮೇ 21ರಂದು  ಶ್ರೀಪೆರುಂಬುದೂರ್​ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಜೀವ್ ಗಾಂಧಿ ಪಾಲ್ಗೊಂಡಿದ್ದರು. ಈ ವೇಳೆ ಆತ್ಮಾಹುತಿ ದಾಳಿ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ನಳಿನಿ ಹಾಗೂ ಆಕೆಯ ಗಂಡ ಸೇರಿ 7 ಜನರನ್ನು ಬಂಧಿಸಲಾಗಿತ್ತು. ಮೊದಲು ಇವರಿಗೆ ಕೋರ್ಟ್​ ಮರಣ ದಂಡನೆ ನೀಡಿತ್ತು. ನಂತರ ಅದನ್ನು ಜೀವಾವಧಿ ಶಿಕ್ಷೆಯನ್ನಾಗಿ ಬದಲಾಯಿಸಲಾಗಿತ್ತು.
  Published by:Rajesh Duggumane
  First published: