HOME » NEWS » National-international » RAJIV GANDHI DEATH ANNIVERSARY A MEMORY OF EYE WITNESS TO THAT GORY INCIDENT SNVS

Rajiv Gandhi Death Anniversary – ರಾಜೀವ್ ಗಾಂಧಿ ಹತ್ಯೆ ದೃಶ್ಯ ಕಂಡ ಪತ್ರಕರ್ತರೊಬ್ಬರ ಅನುಭವ

ಈ ದುರಂತ ಸಂಭವಿಸಿದ ಸ್ಥಳದಲ್ಲಿದ್ದ ಅನೇಕ ಪ್ರತ್ಯಕ್ಷದರ್ಶಿಗಳಿಗೆ ಈಗಲೂ ಈ ಘಟನೆ ಸಿಂಹಸ್ವಪ್ನದಂತೆ ಕಾಡುತ್ತದೆಯಂತೆ. ಆ ಪ್ರತ್ಯಕ್ಷದರ್ಶಿಗಳಲ್ಲಿ ಪತ್ರಕರ್ತ ಆರ್. ಭಗವಾನ್ ಸಿಂಗ್ ಕೂಡ ಒಬ್ಬರು.

news18
Updated:May 21, 2020, 10:53 AM IST
Rajiv Gandhi Death Anniversary – ರಾಜೀವ್ ಗಾಂಧಿ ಹತ್ಯೆ ದೃಶ್ಯ ಕಂಡ ಪತ್ರಕರ್ತರೊಬ್ಬರ ಅನುಭವ
ರಾಜೀವ್ ಗಾಂಧಿ
  • News18
  • Last Updated: May 21, 2020, 10:53 AM IST
  • Share this:
ಬೆಂಗಳೂರು(ಮೇ 21): ಆಧುನಿಕ ಭಾರತದ ಮಹಾನ್ ಕನಸು ಹೊತ್ತಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ದುರಂತ ಸಾವನ್ನಪ್ಪಿ ಇವತ್ತಿಗೆ 29 ವರ್ಷ ಗತಿಸಿದೆ. 1991, ಮೇ 21ರಂದು ಚೆನ್ನೈ ಹೊರವಲಯದ ಶ್ರೀಪೆರಂಬುದರೂರ್ ಬಳಿ ಎಲ್​ಟಿಟಿಇ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿ ರಾಜೀವ್ ಗಾಂಧಿ ಅವರ ಹತ್ಯೆಗೈದಿದ್ದರು. ಆ ಸೂಸೈಡ್ ಬಾಂಬ್ ಸ್ಫೋಟದಲ್ಲಿ ರಾಜೀವ್ ಗಾಂಧಿ ಜೊತೆಗೆ ಇನ್ನೂ ಹಲವರು ಸಾವನ್ನಪ್ಪಪಿದ್ದರು.

ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಎಲ್​ಟಿಟಿಇ ಹಿಂಸಾತ್ಮಕ ಹೋರಾಟ ನಡೆಸುತ್ತಿದ್ದ ಕಾಲ ಅದು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಲಂಕಾ ಸರ್ಕಾರಕ್ಕೆ ಭಾರತ ಸಹಾಯ ಮಾಡಿತು ಎಂಬುದು ತಮಿಳು ವ್ಯಾಘ್ರ ಸಂಘಟನೆಯ ಆಕ್ರೋಶವಾಗಿತ್ತು. ಇದೇ ಕಾರಣಕ್ಕೆ ರಾಜೀವ್ ಗಾಂಧಿ ಸಂಹಾರ ಮಾಡಲಾಗಿತ್ತು.

ಸಾರ್ವತ್ರಿಕ ಚುನಾವಣೆಯ ಕಾಲ. ರಾಜೀವ್ ಗಾಂಧಿಗೆ ಹೋದಲೆಲ್ಲ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿತ್ತು. ಅವರು ಮತ್ತೊಮ್ಮೆ ಪ್ರಧಾನಿಯಾಗಿ ಆರಿಸಿಬರುವ ಎಲ್ಲಾ ಸಾಧ್ಯತೆಗಳೂ ಇದ್ದವು. ಅದೇ ಹೊತ್ತಲ್ಲೇ ಎಲ್​ಟಿಟಿಇ ಈ ಕೃತ್ಯ ಎಸಗಿತು. ಶ್ರೀಪೆರಂಬುದೂರಿನಲ್ಲಿ ಚುನಾವಣಾ ರ್ಯಾಲಿ ಮುಗಿಸಿ ಭಾಷಣ ಮಾಡಲು ವೇದಿಕೆ ಹತ್ತಿದ್ದರು ರಾಜೀವ್ ಗಾಂಧಿ. ಈ ವೇಳೆ ತೇನ್​​ಮೊಳಿ ರಾಜರತ್ನಂ ಅಲಿಯಾಸ್ ಧನು ಎಂಬ ಎಲ್​ಟಿಟಿಇ ಕಾರ್ಯಕರ್ತೆಯು ತನ್ನ ಬಟ್ಟೆಯೊಳಗೆ ಬಾಂಬ್ ಸಿಕ್ಕಿಸಿಕೊಂಡು ಬಂದಿದ್ದಳು. ಈಕೆ  ವೇದಿಕೆ ಹತ್ತಿ ರಾಜೀವ್ ಗಾಂಧಿ ಕೊರಳಿಗೆ ಹಾರ ಹಾಕುತ್ತಿರುವಂತೆಯೇ ತನ್ನ ಬಟ್ಟೆಯೊಳಗಿದ್ದ ಬಾಂಬನ್ನು ಸಿಡಿಸಿದಳು. ತತ್​ಪರಿಣಾಮ, ಭೀಕರ ಬಾಂಬ್ ಸ್ಫೋಟಗೊಂಡು ರಾಜೀವ್ ಗಾಂಧಿ ದೇಹ ಛಿದ್ರಛಿದ್ರಗೊಂಡಿತ್ತು. 14ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

ಇದನ್ನೂ ಓದಿ: Cyclone Amphan – ಕೊರೋನಾ ದಾಳಿಗಿಂತಲೂ ಮಾರಕ ಅಂಪನ್ ಚಂಡಮಾರುತ; ಬಂಗಾಳದಲ್ಲಿ 12 ಸಾವು

ಈ ದುರಂತ ಸಂಭವಿಸಿದ ಸ್ಥಳದಲ್ಲಿದ್ದ ಅನೇಕ ಪ್ರತ್ಯಕ್ಷದರ್ಶಿಗಳಿಗೆ ಈಗಲೂ ಈ ಘಟನೆ ಸಿಂಹಸ್ವಪ್ನದಂತೆ ಕಾಡುತ್ತದೆಯಂತೆ. ಆ ಪ್ರತ್ಯಕ್ಷದರ್ಶಿಗಳಲ್ಲಿ ಪತ್ರಕರ್ತ ಆರ್. ಭಗವಾನ್ ಸಿಂಗ್ ಕೂಡ ಒಬ್ಬರು. 9 ವರ್ಷಗಳ ಹಿಂದೆ ಭಗವಾನ್ ಅವರು ಈ ಘಟನೆಯ ಅನುಭವವನ್ನು ಸಿಎನ್​ಎನ್ ವರದಿಗಾರ ಡಿ.ಪಿ. ಸತೀಶ್ ಜೊತೆ ಹಂಚಿಕೊಂಡಿದ್ದರು. ಆ ಘಟನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ ಎಂದು ಅವರು ಹೇಳಿದ್ದರು.

1991, ಮೇ 21ರಂದು ರಾತ್ರಿ ಗಂಟೆಯ ಸಮಯದಲ್ಲಿ ಆರ್ ಭಗವಾನ್ ಸಿಂಗ್ ಅವರು ಲೋಕಸಭಾ ಚುನಾವಣೆಯ ವಿಚಾರವನ್ನು ತಮ್ಮ ಸಹಪತ್ರಕರ್ತರ ಜೊತೆ ಚರ್ಚೆ ಮಾಡುತ್ತಿದ್ದರು. ಆಗಲೇ ಅವರು ರಾಜೀವ್ ಗಾಂಧಿ ವೇದಿಕೆ ಏರುತ್ತಿರುವುದನ್ನು ಕಂಡರು. ಸಾವಿರಾರು ಬೆಂಬಲಿಗರು ತಮ್ಮ ನಾಯಕನನ್ನು ಕಾಣಲು ಒದ್ದಾಡುತ್ತಾ ನೂಕಾಡುತ್ತಿದ್ದರು. ಅವರ ಅಭಿಮಾನಿಗಳಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ರಾಜೀವ್ ಗಾಂಧಿ ಮತ್ತೊಮ್ಮೆ ಪ್ರಧಾನಿ ಪಟ್ಟ ಅಲಂಕರಿಸುವ ಸಾಧ್ಯತೆ ಸ್ಪಷ್ಟವಾಗಿತ್ತು ಎಂದು ಹೇಳುತ್ತಾರೆ ಭಗವಾನ್ ಸಿಂಗ್. ಹಾಗೆಯೇ, ವೇದಿಕೆ ಬಳಿ ಅಭಿಮಾನಿಗಳು ಪಟಾಕಿ ಹಚ್ಚಲು ಸಿದ್ಧವಾಗಿರುವುದು ತಿಳಿದು ಅವರಿಗೆ ಸೋಜಿಗವೆನಿಸಿತ್ತು.

“ವೇದಿಕೆ ಬಳಿಯೇ ಶಕ್ತಿಶಾಲಿ ಪಟಾಕಿ ಹಚ್ಚಲು ಸಿದ್ಧವಿರುವ ಈ ಕಾಂಗ್ರೆಸ್ಸಿಗರಿಗೆ ಬುದ್ಧಿ ಇಲ್ಲ ಎಂದು ನಾನು ನನ್ನ ಸ್ನೇಹಿತರಿಗೆ ಹೇಳುತ್ತಿದ್ದೆ. ಅದಾಗಿ ಕೆಲ ಹೊತ್ತಿನಲ್ಲೇ ಭೀಕರ ಸ್ಫೋಟವಾಯಿತು. ಹಲವರು ಕಿರುಚುತ್ತಾ ಓಡಿಹೋಗುತ್ತಿದ್ದ ದೃಶ್ಯ ಕಂಡಿತು. ಕೆಲವರು ಸುಟ್ಟು ಕರಕಲಾಗಿದ್ದರು. ನಾವು ಎದ್ದು ವೇದಿಕೆ ಬಳಿ ಓಡಿ ಹೋದೆವು. ಇಡೀ ವೇದಿಕೆಯೇ ಸ್ಫೋಟಗೊಂಡಿತ್ತು. ರಾಜೀವ್ ಗಾಂಧಿ ದೇಹದ ಸುಳಿವೇ ಸಿಗಲಿಲ್ಲ. ಶ್ರೀಲಂಕಾದಲ್ಲಿರುವ ತಮಿಳಿಗರ ಸಮಸ್ಯೆಗಳಿಗೆ ಒಂದು ಪರಿಹಾರ ಹುಡುಕಲು ಹೋಗಿದ್ದ ನಾಯಕನೊಬ್ಬ ಭೀಕರವಾಗಿ ಹತ್ಯೆಯಾಗಿಹೋಗಿದ್ದರು” ಎಂದು ಪತ್ರಕರ್ತ ಭಗವಾನ್ ಸಿಂಗ್ ಸ್ಮರಿಸಿಕೊಳ್ಳುತ್ತಾರೆ.ಇದನ್ನೂ ಓದಿ: ಕೇಂದ್ರ ಕಾರ್ಮಿಕ ಕಾಯ್ದೆಗೆ ವಿರೋಧ; ಸುಪ್ರೀಂ ಕೋರ್ಟ್‌‌ನಲ್ಲಿ ದಾಖಲಾಯ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ

ಈ ಘಟನೆ ಬಗ್ಗೆ ನ್ಯೂಸ್18 ಜೊತೆ ಅನುಭವ ಹಂಚಿಕೊಂಡ ಅವರು, ತನಗೆ ಈಗಲೂ ಬಹಳ ನೋವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

“ನೀವು 20 ವರ್ಷಗಳ ನಂತರ ಈ ಘಟನೆ ಬಗ್ಗೆ ಕೇಳುತ್ತಿದ್ದೀರಿ. ಈಗಲೂ ಕೂಡ ನಿನ್ನೆ ಈ ಘಟನೆ ನಡೆದಂತಿದೆ. ನಾನು ಮರೆತುಹೋಗಿರುತ್ತೇನೆ ಎಂದುಕೊಂಡಿದ್ದೀರಾ? ಮನಸಿಗೆ ಬಹಳ ಘಾಸಿಯಾಗಿದೆ” ಎಂದು ಅವರು ಸಿಎನ್​ಎನ್ ವರದಿಗಾರರಾಗಿದ್ದ ಡಿ.ಪಿ. ಸತೀಶ್ ಅವರಲ್ಲಿ ಹೇಳಿಕೊಂಡಿದ್ದರು.

ಇನ್ನು, ದುರಂತ ನಡೆದಾಗ ಸ್ಥಳದಲ್ಲಿದ್ದ ಕಮ್ಯೂನಿಸ್ಟ್ ನಾಯಕ ಡಿ ಪಾಂಡಿಯನ್ ಕೂಡ ಆಘಾತಕ್ಕೊಳಗಾಗಿದ್ದರು.

“ರಾಜೀವ್ ಎಲ್ಲಿ ಎಂದು ನಾನು ಕಿರುಚುತ್ತಿದ್ದೆ. ಅವರೆಲ್ಲೂ ಕಾಣುತ್ತಿರಲಿಲ್ಲ. ನನ್ನ ಸುತ್ತಮುತ್ತ 12 ಶವಗಳು ಬಿದ್ದಿದ್ದವು” ಎಂದು ಪಾಂಡಿಯನ್ ಹೇಳುತ್ತಾರೆ. ಅಂದು ರಾಜೀವ್ ಗಾಂಧಿ ಅವರ ಭಾಷಣವನ್ನು ತಮಿಳಿಗೆ ಭಾಷಾಂತರ ಮಾಡಲು ಪಾಂಡಿಯನ್ ಅಲ್ಲಿಗೆ ಹೋಗಿದ್ದರು.

First published: May 21, 2020, 10:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories