• Home
  • »
  • News
  • »
  • national-international
  • »
  • Convict of Rajiv Gandhi: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಿರಪರಾಧಿ ಎಂದು ಸಮರ್ಥಿಸಿಕೊಂಡ ನಳಿನಿ

Convict of Rajiv Gandhi: ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ನಿರಪರಾಧಿ ಎಂದು ಸಮರ್ಥಿಸಿಕೊಂಡ ನಳಿನಿ

ನಳಿನಿ  ಶ್ರೀಹರನ್

ನಳಿನಿ ಶ್ರೀಹರನ್

ನಾನು ಕಾಂಗ್ರೆಸ್ ಕುಟುಂಬದಿಂದ ಬಂದವಳು. ಇಂದಿರಾಗಾಂಧಿ ನಿಧನರಾದಾಗ ನಾವು ಊಟ-ತಿಂಡಿ ಬಿಟ್ಟು ನಾಲ್ಕೈದು ದಿನ ಅಳುತ್ತಿದ್ದೆವು. ರಾಜೀವ್ ಗಾಂಧಿ ಸತ್ತಾಗಲೂ ಮೂರು ದಿನ ಕಣ್ಣೀರು ಹಾಕಿದ್ದೇ ಎಂದ ನಳಿನಿ ಶ್ರೀಹರನ್​

  • Share this:

ರಾಜೀವ್ ಗಾಂಧಿ ಹತ್ಯೆ (Murder) ಪ್ರಕರಣದಲ್ಲಿ ಮೊನ್ನೆ ಮೊನ್ನೆ ಬಿಡುಗಡೆಯಾದ ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ (Nalini Sriharan) ಜೈಲಿನಿಂದ ಹೊರಬರುತ್ತಿದ್ದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಜೊತೆ ಜೈಲಿನಲ್ಲಿದ್ದಾಗ (Jail) ಭೇಟಿಯಾದ ಬಗ್ಗೆ ಮತ್ತು ಅವರೊಂದಿಗೆ ಮಾತನಾಡಿದ ಬಗ್ಗೆ ಹೇಳಿದ್ದರು. ಅಲ್ಲದೇ ಮೊದಲಿಗೆ ಯುಕೆಯಲ್ಲಿರುವ ಮಗಳನ್ನು (Doughter) ನೋಡುವ ಬಗ್ಗೆ ತವಕ ವ್ಯಕ್ತಪಡಿಸಿದ್ದರು.


"ರಾಜೀವ್ ಗಾಂಧಿ ಸತ್ತಾಗ ದಿನಗಟ್ಟಲೆ ಕಣ್ಣೀರಾಕಿದ್ದೆ"
ಮತ್ತೊಂದು ಹೇಳಿಕೆಯಲ್ಲಿ ನಳಿನಿ ಶ್ರೀಹರನ್ ಮಾಜಿ ಪ್ರಧಾನಿ ಹತ್ಯೆಯಾದಾಗ ದಿನಗಟ್ಟಲೆ ಅಳುತ್ತಿದ್ದೆ ಎಂದು ಹೇಳಿದ್ದಾರೆ. ನಳಿನಿ ತಾವು ಕಾಂಗ್ರೆಸ್ ಕುಟುಂಬದವರು, ಆದರೆ ರಾಜೀವ್ ಗಾಂಧಿಯನ್ನು ಕೊಂದ ಆರೋಪವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.


''ನಾನು ಕಾಂಗ್ರೆಸ್ ಕುಟುಂಬದಿಂದ ಬಂದವಳು. ಇಂದಿರಾಗಾಂಧಿ ನಿಧನರಾದಾಗ ನಾವು ಊಟ-ತಿಂಡಿ ಬಿಟ್ಟು ನಾಕ್ಲೈದು ದಿನ ಅಳುತ್ತಿದ್ದೆವು. ರಾಜೀವ್ ಗಾಂಧಿ ಸತ್ತಾಗಲೂ ಮೂರು ದಿನ ಕಣ್ಣೀರು ಹಾಕಿದ್ದೇವೆ. ಆದರೆ ನಾನು ಅವರನ್ನು ಕೊಂದ ಆರೋಪವನ್ನು ಹೊತ್ತಿದ್ದೇನೆ. ಆ ಆರೋಪವನ್ನು ತೆರವುಗೊಳಿಸಿದರೆ ಮಾತ್ರ ನಾನು ವಿಶ್ರಾಂತಿ ಪಡೆಯಲು ಸಾಧ್ಯ'' ಎಂದು ನಳಿನಿ ಶ್ರೀಹರನ್ ಹೇಳಿದ್ದಾರೆ.


ನಿರಪರಾಧಿ ಎಂದು ಸಮರ್ಥಿಸಿಕೊಂಡ ನಳಿನಿ
ಹಲವಾರು ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಳಿನಿ ತಾನು ನಿರಪರಾಧಿ ಎಂದು ಸಮರ್ಥಿಸಿಕೊಂಡರು, ಆದರೆ ಮಾಜಿ ಪ್ರಧಾನಿ ಹತ್ಯೆಯ ಹಿಂದೆ ಯಾರಿದ್ದಾರೆಂದು ಕೇಳಿದರೆ ಇದಕ್ಕೆ ಉತ್ತರಿಸಲು ನಿರಾಕರಿಸಿದರು.


"ನಾನು ಅಂಥ ಯಾರನ್ನೂ ಸೂಚಿಸಲು ಸಾಧ್ಯವಿಲ್ಲ. ನನಗೆ ಒಬ್ಬರನ್ನು ದೂಷಿಸುವ ಅಥವಾ ಆರೋಪಿಸುವ ಅಭ್ಯಾಸವಿಲ್ಲ. ಹಾಗೆ ಮಾಡಿದ್ದರೆ 32 ವರ್ಷ ಜೈಲಿನಲ್ಲಿ ಇರುತ್ತಿರಲಿಲ್ಲ. ನನಗೆ ಅವರ ಬಗ್ಗೆ ಅಥವಾ ಅವರು ಯಾರು ಎಂದು ಗೊತ್ತಿಲ್ಲ" ಎಂದು ನಳಿನಿ ಅವರು ಹೇಳಿದ್ದಾರೆ.


ನಳಿನಿಯ ಹೇಳಿಕೆಗೆ ನಿವೃತ್ತ ಪೊಲೀಸ್ ಅಧಿಕಾರಿ ಗರಂ
ಇನ್ನೂ ನಳಿನಿಯ ಈ ಹೇಳಿಕೆಗೆ ನಿವೃತ್ತ ಪೊಲೀಸ್ ಅಧಿಕಾರಿ ಅನುಸೂಯಾ ಅರ್ನೆಸ್ಟ್ ಡೈಸಿ ಕೆಂಡಾಮಂಡಲವಾಗಿದ್ದು, ಪ್ರತ್ಯುತ್ತರ ನೀಡಿದ್ದಾರೆ. "ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ನಳಿನಿ ಮಾತನಾಡುತ್ತಿದ್ದು, ತಾನು ನಿರಪರಾಧಿ ಎಂದು ಆಕೆ ಹೇಳಿದರೆ ನ್ಯಾಯಾಲಯದ ಆದೇಶವನ್ನು ಮರುಪರಿಶೀಲಿಸಿ ನಿಜವಾದ ಅಪರಾಧಿಗಳನ್ನು ಕಂಡುಹಿಡಿಯಲು ಮತ್ತೊಂದು ತನಿಖೆಯನ್ನು ಪ್ರಾರಂಭಿಸಬೇಕು'' ಎಂದು ಅನುಸೂಯಾ ಹೇಳಿದರು. ಹತ್ಯೆ ಸಂದರ್ಭದಲ್ಲಿದ್ದ ಘಟನಾ ಸ್ಥಳದಲ್ಲಿದ್ದ ಅರ್ನೆಸ್ಟ್ ಅವರು ಬಾಂಬ್ ಸ್ಫೋಟದ ಪರಿಣಾಮ ಮೂರು ಬೆರಳುಗಳನ್ನು ಕಳೆದುಕೊಂಡಿದ್ದಾರೆ.


ಇದನ್ನೂ ಓದಿ: ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್​ ರೈಲಿಗೆ ಕರು ಡಿಕ್ಕಿ; ಹಸು ಮಾಲೀಕನಿಗೆ ಬೀಳುತ್ತಂತೆ ಭಾರೀ ದಂಡ


ಮೊದಲ ಸುದ್ದಿಗೋ಼ಷ್ಠಿಯಲ್ಲಿ ಹಲವು ವಿಚಾರ ಬಿಚ್ಚಿಟ್ಟ ನಳಿನಿ
ಇನ್ನೂ ಬಿಡುಗಡೆ ಬಳಿಕ ತಮ್ಮ ಮೊದಲ ಸುದ್ದಿಗೋ಼ಷ್ಠಿಯಲ್ಲಿ ಬಿಡುಗಡೆಗೆ ಸಹಾಯ ಮಾಡಿದ ಗಾಂಧಿ ಕುಟುಂಬಕ್ಕೆ ಮತ್ತು ತಮಿಳುನಾಡು ಸಿಎಂಗೆ ಧನ್ಯವಾದಗಳನ್ನು ತಿಳಿಸಿದ್ದರು. ಈ ವೇಳೆ ಮಾತನಾಡುತ್ತಿರುವಾಗ ಪ್ರಿಯಾಂಕಾ ಗಾಂಧಿ ಅವರ ತಂದೆಯ ಹತ್ಯೆ ಬಗ್ಗೆ ಕೇಳಿದ್ದರು, ನನಗೆ ತಿಳಿದಿರುವಷ್ಟು ಹೇಳಿದೆ ಎಂದಿದ್ದರು.


ನಾನು ಗರ್ಭಿಣಿ ಎಂದು ಸಹ ಲೆಕ್ಕಿಸದೇ ನಮ್ಮನ್ನು ಜೀವಾವಧಿ ಶಿಕ್ಷೆಗೆ ಗುರಿಯಾದವರಂತೆ ನಡೆಸಿಕೊಳ್ಳುತ್ತಿದ್ದರು ಎಂದು ಪೊಲೀಸರನ್ನು ದೂರಿದ್ದರು. ಇದೇ ಸಂದರ್ಭದಲ್ಲಿ ತಮ್ಮ ಮಗಳು ಹರಿತಾಳನ್ನು ಭೇಟಿ ಮಾಡಲು ಸಹಾಯ ಮಾಡುವಂತೆ ಸರ್ಕಾರವನ್ನು ನಳಿನಿ ಕೇಳಿಕೊಂಡಿದ್ದರು.


ಮೂರು ದಶಕಗಳ ಜೈಲುವಾಸದ ನಂತರ ಬಿಡುಗಡೆ
ಇನ್ನೂ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳನ್ನು ಮೂರು ದಶಕಗಳ ಜೈಲುವಾಸದ ನಂತರ ಬಿಡುಗಡೆ ಮಾಡಲಾಯಿತು. ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಒಂದು ದಿನದ ನಂತರ ಅವರನ್ನು ರಿಲೀಸ್‌ ಮಾಡಲಾಗಿದೆ. 1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆ ಪ್ರಕರಣದಲ್ಲಿ ನಳಿನಿ ಸೇರಿ ಅವರ ಪತಿ ಶ್ರೀಹರನ್ ಮತ್ತು ಇತರೆ ಅಪರಾಧಿಗಳಾದ ಸಂತನ್, ಮುರುಗನ್, ರಾಬರ್ಟ್ ಪಾಯಸ್ ಮತ್ತು ಆರ್.ಪಿ ರವಿಚಂದ್ರನ್ ಅವರು ಜೈಲು ಪಾಲಾಗಿದ್ದರು.

First published: