• Home
  • »
  • News
  • »
  • national-international
  • »
  • Rajiv Gandhi Birth Anniversary : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನ- ಗಣ್ಯರಿಂದ ಗೌರವ ನಮನ

Rajiv Gandhi Birth Anniversary : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮ ದಿನ- ಗಣ್ಯರಿಂದ ಗೌರವ ನಮನ

ಮಾಜಿ ಪ್ರಧಾನಿ ರಾಜೀವ್ ಗಾಂಧಿ

ಮಾಜಿ ಪ್ರಧಾನಿ ರಾಜೀವ್ ಗಾಂಧಿ

Rajiv Gandhi: ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿ ಜನ್ಮ ದಿನದ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ದೇಶದಾದ್ಯಂತ ಹಮ್ಮಿಕೊಂಡಿದೆ.

  • Share this:

ಇಂದು ಭಾರತದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ 77ನೇ ಜನ್ಮದಿನ.  ರಾಷ್ಟ್ರದಲ್ಲಿ ಹೊಸ ಪೀಳಿಗೆಯ ಪರಿವರ್ತನೆಯಲ್ಲಿ ಪ್ರಮುಖವಾಗಿದ್ದ,  ಶ್ರೀ ರಾಜೀವ್ ಗಾಂಧಿ ಅವರು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಜನಾದೇಶ ಪಡೆದ ನಾಯಕರಾಗಿದ್ದರು. ಜೊತೆಗೆ ಅವರು   40ನೇ ವಯಸ್ಸಿಗೆ ಭಾರತದ ಯುವ ಪ್ರಧಾನಮಂತ್ರಿಯಾಗುವ ಮೂಲಕ  ವಿಶ್ವದ ಅತ್ಯಂತ ಕಿರಿಯ  ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.


ಇನ್ನು ರಾಜೀವ್ ಗಾಂಧಿ ಜನ್ಮ ದಿನದ ಹಿನ್ನಲೆ ರಾಜಕೀಯ ನಾಯಕರು ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ ಸಹ ರಾಜೀವ್ ಗಾಂಧಿ ಅವರ ಜನ್ಮ ದಿನದ ಹಿನ್ನಲೆ ಅವರನ್ನ ನೆನೆದು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್, ಶಶಿ ತರೂರ್ ಮತ್ತು ದಿಗ್ವಿಜಯ್ ಸಿಂಗ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜೀವ್ ಗಾಂಧಿ ಫೋಟೋ ಹಂಚಿಕೊಳ್ಳುವ ಮೂಲಕ ನಮ್ಮ ನಾಯಕನನ್ನ ನೆನೆದಿದ್ದಾರೆ.


ಹಾಗೆಯೇ ಕಾಂಗ್ರೆಸ್ ನಾಯಕ ಕಮಲ್ ನಾಥ್ ತಮ್ಮ ಖಾತೆಯಲ್ಲಿ ,ಆಧುನಿಕ ಭಾರತದ ವಾಸ್ತುಶಿಲ್ಪಿ, ಸಂವಹನ ಕ್ರಾಂತಿಯ ಪಿತಾಮಹ, ದೇಶದ ಮಾಜಿ ಪ್ರಧಾನಿ, ಭಾರತ ರತ್ನ ದಿವಂಗತ ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆಯಂದು  ಅವರಿಗೆ ಗೌರವ ಸಮರ್ಪಣೆ. ದೇಶದ ಅಭಿವೃದ್ಧಿ, ಪ್ರಗತಿ ಮತ್ತು ಪ್ರಗತಿಯಲ್ಲಿ ಅವರ ಕೊಡುಗೆ ಸದಾ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: ತಾಲಿಬಾನ್​ ರೀತಿ ಟಿಎಂಸಿ ನಾಯಕರನ್ನು ಹೊಡೆದುಹಾಕಿ ಎಂದ ತ್ರಿಪುರಾ ಬಿಜೆಪಿ ಶಾಸಕ


ಕೇವಲ ಕಾಂಗ್ರೆಸ್ ನಾಯಕರು ಮಾತ್ರವಲ್ಲದೇ, ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಹ ರಾಜೀವ್ ಗಾಂಧಿ ಅವರ ಜನ್ಮದಿನದ ಹಿನ್ನಲೆ ಅವರ ಫೋಟೋ ಹಂಚಿಕೊಂಡಿದ್ದು, ಅವರ ನೆನಪಿನಲ್ಲಿ ವಿಶೇಷ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.


ಆಗಸ್ಟ್ 20, 1944 ರಂದು ಶ್ರೀಮತಿ ಇಂದಿರಾ ಗಾಂಧಿ ಹಾಗೂ ಫಿರೋಝ್ ಗಾಂಧಿ ದಂಪತಿಗಳ ಮೊದಲ ಮಗ ರಾಜೀವ್ ಗಾಂಧಿ ಜನನವಾಗಿದ್ದು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಶ್ರೀ ರಾಜೀವ್ ಗಾಂಧಿ ಅವರು ಕೇಂಬ್ರಿಡ್ಜ್ನ ಟ್ರಿನಿಟಿ ಕಾಲೇಜಿಗೆ ಸೇರಿದರು. ಆದರೆ, ನಂತರ ಅವರು ಲಂಡನ್ನ ಇಂಪಿರಿಯಲ್ ಕಾಲೇಜಿಗೆ ಸ್ಥಳಾಂತರಗೊಂಡು, ಮೆಕ್ಯಾನಿಕಲ್ ಎಂಜಿನಿಯರಿಂದ ಪದವಿ ಪೂರ್ಣಗೊಳಿಸಿದರು.


ಇನ್ನು ರಾಜೀವ್ ಗಾಂಧಿ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ ಎಂಬುದು ಪ್ರತಿಯೊಬ್ಬರು ತಿಳಿದಿರುವ ವಿಚಾರ.  ಅವರ ಸಹಪಾಠಿಗಳು ಹೇಳುವಂತೆ, ಅವರ ಕಪಾಟಿನಲ್ಲಿ ವಿಜ್ಞಾನ ಮತ್ತು ಎಂಜಿನಿಯರಿಂದ ಕುರಿತ ಸಂಪುಟಗಳು ಸಾಲು ಸಾಲಾಗಿದ್ದವು. ತತ್ವ ಶಾಸ್ತ್ರ, ರಾಜಕಿಯ ಅಥವಾ ಇತಿಹಾಸ ಪುಸ್ತಕಗಳು ಅಲ್ಲಿರಲಿಲ್ಲ. ಅವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು ಅವರಿಗೆ ತುಂಬಾ ಖುಷಿ ಕೊಡುತ್ತಿದ್ದ ಸಂಗತಿ ಎಂದರೆ ಫ್ಲೈಯಿಂಗ್. ಇಂಗ್ಲೆಂಡ್ನಿಂದ  ಭಾರತಕ್ಕೆ ಹಿಂದಿರುಗಿದ ನಂತರ ಕಮರ್ಷಿಯಲ್ ಪೈಲೆಟ್ ಲೈಸನ್ಸ್ ಪಡೆದು, ಭಾರತದ ದೇಶೀಯ ವಿಮಾನ ಸಂಸ್ಥೆ ಇಂಡಿಯನ್ ಏರ್ಲೈನ್ಸ್ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.


1980ರಲ್ಲಿ ಅವರ ಸೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ದುರಂತ ಸಾವಿನ ನಂತರ ರಾಜೀವ್ ಗಾಂಧಿ ಅವರಿಗೆ ರಾಜಕೀಯದಲ್ಲಿ ತಾಯಿಗೆ ಸಹಕಾರ ನೀಡುವಂತೆ ಹೆಚ್ಚಿನ ಒತ್ತಡಗಳು ಬಂದವು,. ಇದಕ್ಕೆ ಒಪ್ಪಿಕೊಂಡ ರಾಜೀವ್ ಗಾಂಧಿ, ತಮ್ಮ ಸೋದರನ ಸಾವಿನಿಂದ ತೆರವಾದ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದರು.


ಅಲ್ಲದೇ ತಾಯಿಯ ಸಾವಿನಂತಹ ನೋವಿನ ಸಂದರ್ಭದಲ್ಲಿ ಸಹ ರಾಷ್ಟ್ರದ ಜವಾಬ್ದಾರಿಯನ್ನ ಹೊತ್ತು ಕೆಲಸ ಮಾಡಿದ್ದರು. ಹಲವಾರು ಸವಾಲಿನ ಹೊಣೆಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ದೇಶ ಏಳಿಗೆಗೆ ಯೋಜನೆಗಳನ್ನು ಜಾರಿಗೆ ತಂದಿದ್ದರು.

Published by:Sandhya M
First published: