• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Rajiv Gandhi Assassination: ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್​​

Rajiv Gandhi Assassination: ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್​​

ನಳಿನಿ ಶ್ರೀಹರನ್​​

ನಳಿನಿ ಶ್ರೀಹರನ್​​

ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ ಸಂಬಂಧ ತಮಿಳುನಾಡಿನ ವೆಲ್ಲೂರಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಕೋವಿಡ್ ತಮಿಳುನಾಡು ಮುಖ್ಯಮಂತ್ರಿ ನಾಗರಿಕ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಸುಮಾರು ಐದು ಸಾವಿರ ಹಣವನ್ನು ಮಂಗಳವಾರ ನೀಡಿದ್ದಾರೆ.

ಮುಂದೆ ಓದಿ ...
 • Share this:

  ಭಾರತ ಕೋವಿಡ್ ಎರಡನೇ ಅಲೆ ಸಂಬಂಧ ಯಾವ ಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ತಿಳಿದೇ ಇದೆ. ಭಾರತದ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಸಾಕಷ್ಟು ಮಂದಿ ಸಹಾಯ ಮಾಡುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸಲಿ ಎಂದು ಸಾವಿರಾರು ಮಂದಿ ಹಾರೈಸುತ್ತಲೇ ಇದ್ದಾರೆ. ಕೈಲಾದ ಮಟ್ಟಿಗೆ ಆಕ್ಸಿಜನ್, ವೆಂಟಿಲೇಟರ್, ಹಣ ಹೀಗೆ ಇನ್ನಿತರ ವಸ್ತುಗಳನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಇದೇ ರೀತಿಯಲ್ಲಿ ತಮಿಳುನಾಡಿನ ವೆಲ್ಲೂರಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರು ಮುಖ್ಯಮಂತ್ರಿ ನಾಗರಿಕ ಪರಿಹಾರ ನಿಧಿಗೆ (ಸಿಎಂಪಿಆರ್​​ಎಫ್-CMPRF) ಹಣ ನೀಡಿದ್ದಾರೆ.


  ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ(Former Prime Minister Rajiv Gandhi ) ಹತ್ಯೆ ಪ್ರಕರಣ ಸಂಬಂಧ ತಮಿಳುನಾಡಿನ ವೆಲ್ಲೂರಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್ ಕೋವಿಡ್ ತಮಿಳುನಾಡು ಮುಖ್ಯಮಂತ್ರಿ ನಾಗರಿಕ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಸುಮಾರು ಐದು ಸಾವಿರ ಹಣವನ್ನು ಮಂಗಳವಾರ ನೀಡಿದ್ದಾರೆ.


  ಮೇ 11 ರಂದು ಮುಖ್ಯಮಂತ್ರಿ ಸ್ಟ್ಯಾಲಿನ್(CM MK Stalin) ಅವರು ಕೋವಿಡ್ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ದೇಣಿಗೆ ನೀಡುವಂತೆ ಜನತೆಯ ಬಳಿ ಮನವಿ ಮಾಡಿಕೊಂಡರು. ಸರ್ಕಾರದ ಹೇಳಿಕೆಯ ಪ್ರಕಾರ ಸಿಎಂಪಿಆರ್‍ಎಫ್ ಒಂದೇ ವಾರದಲ್ಲಿ 69ಕೋಟಿ ಸಂಗ್ರಹಿಸಿದೆ. ಇದರಲ್ಲಿ 25 ಕೋಟಿ ಹಣವನ್ನು ಕೋವಿಡ್ -19ಗಾಗಿ ರೆಮ್‍ಡೆಸಿವಿರ್ ಮತ್ತು ಇತರ ಔಷಧಿಗಳಿಗೆ ಮೀಸಲಿಡಲಾಗಿದೆ ಮತ್ತು ಇತರ 25 ಕೋಟಿ ರೂ.ಗಳನ್ನು ಇತರ ರಾಜ್ಯಗಳಿಂದ ಆಮ್ಲಜನಕವನ್ನು ಖರೀದಿಸಲು ಬಳಸಿಕೊಳ್ಳಲಾಗುತ್ತದೆ. ಕೈಗಾರಿಕೋದ್ಯಮಿಗಳು, ನಟ ರಜನಿಕಾಂತ್ ಅವರಂತಹ ಹಲವಾರು ನಟರು ಮತ್ತು ಪ್ರತಿಪಕ್ಷ ಎಐಎಡಿಎಂಕೆ 1 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಹೇಳಿದೆ.


  ಇದನ್ನೂ ಓದಿ: Gautam Adani: ಗೌತಮ್ ಅದಾನಿ ಪ್ರಪಂಚದಲ್ಲೇ ಎರಡನೇ ಶ್ರೀಮಂತ ಏಷ್ಯಾದ ವ್ಯಕ್ತಿ..!


  ನಳಿನಿಯವರು(Nalini Sriharan) ತಮ್ಮ ಕೈದಿ ನಗದು ಖಾತೆಯಲ್ಲಿರುವ ಉಳಿತಾಯದ ಹಣದಲ್ಲಿ ಐದು ಸಾವಿರ ಹಣ ನೀಡಿದ್ದಾರೆ ಎಂದು ನಳಿನಾ ಪರ ವಕೀಲರಾದ ಪುಗಜೆಂದಿ ಪಂಡಿಯಾನ್ ಹೇಳಿದ್ದಾರೆ. ತಮಿಳುನಾಡಿದ ಕೈದಿ ನಿಯಾಮವಳಿಗಳ ಪ್ರಕಾರ, ಕೈದಿ ನಗದು ಖಾತೆಯಲ್ಲಿ ಕೈದಿಗಳು ಜೈಲಿನಲ್ಲಿ ಸಂಪಾದಿಸಿದ ಹಣವನ್ನು ಮತ್ತು ಕುಟುಂಬದವರು ಅವರಿಗೆ ನೀಡಿದ ಹಣವನ್ನು ಇಡಲಾಗುತ್ತದೆ. ಬಟ್ಟೆ ಹೊಲಿಗೆಯಲ್ಲಿ ಹಣ ಸಂಪಾದಿಸಿದ್ದ ನಳಿನಿ ಅವರು ಕೋವಿಡ್ ಮೊದಲನೇ ಅಲೆಯ ನಂತರ ಹೊಲಿಗೆ ನಿಲ್ಲಿಸಿದರು ಎಂದು ಪಂಡಿಯಾನ್ ತಿಳಿಸಿದರು.


  ನಳಿನಿ ಅವರು ಸೋಮವಾರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡುವುದಾಗಿ ಸೋಮವಾರ ಜೈಲಿನ ಸೂಪರಿಡೆಂಟ್ ಪೊಲೀಸ್ ಅಧಿಕಾರಿಗೆ ಹೇಳಿದ್ದರು. ಮಂಗಳವಾರ ಅದಕ್ಕೆ ಒಪ್ಪಿಗೆ ದೊರೆಯಿತು. ಆದರೆ ಅವರು ಹಣ ದೇಣಿಗೆಯ ಉದ್ದೇಶ ಹೇಳಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.


  1991ರ ಮೇ 21ರಂದು ತಮಿಳುನಾಡಿನ ಪೆರಂಬುದೂರು ಬಳಿ ಚುನಾವಣಾ ರ‍್ಯಾಲಿ ವೇಳೆ ಮಾನವ ಬಾಂಬ್ ಸ್ಫೋಟಿಸಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಗಿತ್ತು. ಕೃತ್ಯದಲ್ಲಿ ಭಾಗಿಯಾಗಿದ್ದ 26 ಮಂದಿಗೆ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಸುಪ್ರೀಂ ಕೋರ್ಟ್ ಮೂವರ ಗಲ್ಲನ್ನು ಮಾತ್ರ ಕಾಯಂಗೊಳಿಸಿ, ನಾಲ್ವರ ಗಲ್ಲು ಶಿಕ್ಷೆಯನ್ನು ಜೀವಾವಧಿಯಾಗಿ ಮಾರ್ಪಡಿಸಿತ್ತು. ಉಳಿದ 19 ಮಂದಿಯನ್ನು ಬಿಡುಗಡೆಗೊಳಿಸಿತ್ತು. ಸೋನಿಯಾ ಗಾಂಧಿಯವರ ಹಸ್ತಕ್ಷೇಪದ ಮೇಲೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಯಿತು. ಗಾಂಧಿ ಕುಟುಂಬವು ಹಲವಾರು ಅಪರಾಧಿಗಳನ್ನು ಕ್ಷಮಿಸಿದ್ದಾರೆ. ಮಾರ್ಚ್ 2008ರಲ್ಲಿ ಪ್ರಿಯಾಂಕಾ ಗಾಂಧಿ ಅವರು ವಾದ್ರಾ ವೆಲ್ಲೂರು ಜೈಲಿನಲ್ಲಿ ಅಪರಾಧಿ ನಳಿನಿಯನ್ನು ಭೇಟಿಯಾಗಲು ಹೋದರು. ಈ ಪ್ರಕರಣದ ಇತರ ಆರು ಆರೋಪಿಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.


  ಒಟ್ಟಿನಲ್ಲಿ ನಳಿನಿ ಸೇರಿದಂತೆ ಹತ್ತು ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಲು ಯೋಚನೆ ಮಾಡಿದ್ದರು. ಈಗಾಗಲೇ ನಳಿನಿಯವರು 30 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅಲ್ಲದೇ ಕಳೆದ ವರ್ಷ ಯಾವುದೋ ಕ್ಲುಲ್ಲಕ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೂ ಯತ್ನಿಸಿದ್ದರು.

  Published by:Latha CG
  First published: