• Home
  • »
  • News
  • »
  • national-international
  • »
  • Rajiv Gandhi Assassins: ರಾಜೀವ್ ಗಾಂಧಿ ಹಂತಕರು ಜೈಲಿಂದ ಬಿಡುಗಡೆ, ಹೊಸ ಜೀವನ ಆರಂಭ ಎಂದ ನಳಿನಿ!

Rajiv Gandhi Assassins: ರಾಜೀವ್ ಗಾಂಧಿ ಹಂತಕರು ಜೈಲಿಂದ ಬಿಡುಗಡೆ, ಹೊಸ ಜೀವನ ಆರಂಭ ಎಂದ ನಳಿನಿ!

ರಾಜೀವ್ ಗಾಂಧಿ ಹಂತಕರ ಬಿಡುಗಡೆ

ರಾಜೀವ್ ಗಾಂಧಿ ಹಂತಕರ ಬಿಡುಗಡೆ

1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್ ಮತ್ತು ಇತರ ಐವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿನ್ನೆ ಮಹತ್ವದ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಐವರು ಹಂತಕರನ್ನು ಇಂದು ಜೈಲಿನಿಂದ ಬಿಡುಗಡೆ ಮಾಡಿದೆ.

  • News18 Kannada
  • Last Updated :
  • Tamil Nadu, India
  • Share this:

ತಮಿಳುನಾಡು: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು (former Prime Minister Rajiv Gandhi) ಹತ್ಯೆಗೈದ ಹಂತಕರು (Assassins ) ಇದೀಗ ಜೈಲಿನಿಂದ (Jail) ಬಿಡುಗಡೆಗೊಂಡಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್ (Nalini Sriharan), ಆಕೆ ಪತಿ ಶ್ರೀಹರನ್ (Sriharan) ಮತ್ತು ಇತರ ಮೂವರು ಅಪರಾಧಿಗಳನ್ನು ಇಂದು  ಸಂಜೆ ತಮಿಳುನಾಡು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಳಿನಿ ಶ್ರೀಹರನ್ ಮತ್ತು ಇತರ ಐವರನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ (Supreme Court) ನಿನ್ನೆ ಮಹತ್ವದ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ (Tamil Nadu Government) ಐವರು ಹಂತಕರನ್ನು ಇಂದು ಜೈಲಿನಿಂದ ಬಿಡುಗಡೆ ಮಾಡಿದೆ.


1990ರಲ್ಲಿ ರಾಜೀವ್ ಗಾಂಧಿ ಹತ್ಯೆ


1990ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಎಲ್‌ಟಿಟಿಇ ಭಯೋತ್ಪಾದಕಿ ಧನು ಎಂಬ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಗೆ ಬಲಿಯಾಗಿದ್ದರು. ಬಳಿಕ ಈ ಕೃತ್ಯಕ್ಕೆ ಸಾಥ್ ನೀಡಿ ಪರಾರಿಯಾಗಿದ್ದ ಎಲ್‌ಟಿಟಿಇ ಉಗ್ರರಾದ ಶಿವರಾಸನ್ ಹಾಗೂ ಶುಭಾರನ್ನು ಬೆಂಗಳೂರಿನ ಕೋಣನಕುಂಟೆಯಲ್ಲಿ ಪೊಲೀಸರು ಹತ್ಯೆ ಮಾಡಿದ್ದರು. ಇನ್ನು ಪೇರರಿವಾಳನ್, ಮುರುಗನ್, ಶಾಂತನ್, ನಳಿನಿ, ರಾಬರ್ಟ್ ಪಿಯಸ್, ಜಯಕುಮಾರ್ ಹಾಗೂ ರವಿಚಂದ್ರನ್- ಸೇರಿದಂತೆ 7 ಅಪರಾಧಿಗಳು ಅವರು 1991 ರಲ್ಲಿ ರಾಜೀವ್ ಹತ್ಯೆಗೆ ಸಂಬಂಧಿಸಿದಂತೆ ಆಜೀವ ಕಾರಾಗೃಹವಾಸ ಅನುಭವಿಸುತ್ತಿದ್ದರು. ಈ ಪೈಕಿ ಕಳೆದ ಮೇನಲ್ಲಿ ಪೇರರಿವಾಳನ್ ರೀಲಿಸ್ ಆಗಿದ್ದ.


1991ರಲ್ಲಿ ರಾಜೀವ್ ಗಾಂಧಿ ಹತ್ಯೆ ಸಂದರ್ಭದ ಸಂಗ್ರಹ ಫೋಟೋ


31 ವರ್ಷಗಳ ಬಳಿಕ ಜೈಲಿಂದ ಬಿಡುಗಡೆ


ಇಂದು ನಳಿನಿ ಶ್ರೀಹರನ್, ಆಕೆ ಪತಿ ಶ್ರೀಹರನ್ ಮತ್ತು ಇತರ ಮೂವರು ಅಪರಾಧಿಗಳನ್ನು ತಮಿಳುನಾಡು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ನಳಿನಿ ಶ್ರೀಹರನ್ 31 ವರ್ಷಗಳ ಬಳಿಕ ಬಿಡುಗಡೆಯಾಗಿದ್ದಾಳೆ.  ಇಂದು ಸಂಜೆ ವೆಲ್ಲೂರಿನ ಮಹಿಳಾ ವಿಶೇಷ ಕಾರಾಗೃಹದಿಂದ ಬಿಡುಗಡೆಯಾದ ತಕ್ಷಣ ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ನಳಿನಿ ತೆರಳಿದಳು. ಅಲ್ಲಿ ಪತಿ ವಿ ಶ್ರೀಹರನ್ ಅಲಿಯಾಸ್ ಮುರುಗನ್ ಬಿಡುಗಡೆಗೊಂಡಿದ್ದು, ಆತನನ್ನು ನೋಡಿ ಭಾವುಕಳಾದಳು.


ಜೈಲಿಂದ ಹೊರಬಂದ ನಳಿನಿ (ಕೃಪೆ: ANI)


ಇದು ನನಗೆ ಹೊಸ ಜೀವನ ಎಂದ ನಳಿನಿ


ಇನ್ನು ಜೈಲಿಂದ ಬಿಡುಗಡೆಗೊಂಡ ಬಳಿಕ ಮಾತನಾಡಿದ ನಳಿನಿ, ಇದು ತನಗೆ ಹೊಸ ಜೀವನವಾಗಿದೆ ಮತ್ತು ಸಾರ್ವಜನಿಕ ಜೀವನಕ್ಕೆ ಸೇರುವುದಿಲ್ಲ ಎಂದು ಹೇಳಿದಳು. ನನ್ನ ಪತಿ ಮತ್ತು ಮಗಳೊಂದಿಗೆ ಇದು ಹೊಸ ಜೀವನ. ನಾನು ಸಾರ್ವಜನಿಕ ಜೀವನಕ್ಕೆ ಹೋಗುವುದಿಲ್ಲ. 30 ವರ್ಷಗಳಿಗೂ ಹೆಚ್ಚು ಕಾಲ ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ತಮಿಳುನಾಡು ಜನರಿಗೆ ಧನ್ಯವಾದ ಹೇಳುತ್ತೇನೆ. ನಾನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಧನ್ಯವಾದ ಹೇಳುತ್ತೇನೆ. ನಾನು ನನ್ನ ಮಗಳೊಂದಿಗೆ ಮಾತನಾಡಿದ್ದೇನೆ ಎಂದಳು.


ಇದನ್ನೂ ಓದಿ: Rajiv Gandhi Assassins Release: ರಾಜೀವ್ ಹಂತಕರ ಬಿಡುಗಡೆಗೆ ಕಾಂಗ್ರೆಸ್‌ ವಿರೋಧ, ಸೋನಿಯಾ ನಿಲುವಿಗೆ ಸಿಂಘ್ವಿ ಆಕ್ಷೇಪ!


ನಿರಾಶ್ರಿತರ ಶಿಬಿರಕ್ಕೆ ಅಪರಾಧಿಗಳು


ಹತ್ಯೆಯಲ್ಲಿ ಶಾಮೀಲಾದ ಶ್ರೀಲಂಕಾದ ಪ್ರಜೆಗಳಾಗಿರುವ ಮುರುಗನ್, ರಾಬರ್ಟ್ ಪಯಾಸ್, ಜಯಕುಮಾರ್ ಮತ್ತು ಸಂತಾನ್ ಅವರ ಭವಿಷ್ಯ ಏನು ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ ಈ ನಾಲ್ಕು ಮಂದಿಯನ್ನೂ ತಿರುಚಿರಾಪಲ್ಲಿಯ ನಿರಾಶ್ರಿತರ ಶಿಬಿರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಗಿದೆ. ಈ ನಾಲ್ಕೂ ಮಂದಿಯನ್ನು ಆದಷ್ಟು ಬೇಗನೆ ಶ್ರೀಲಂಕಾಕ್ಕೆ ಗಡಿಪಾರು ಮಾಡಲು ಅಗತ್ಯವಾದ ಎಲ್ಲ ತುರ್ತು ಪ್ರಯಾಣ ಕಾಗದಪತ್ರಗಳ ವ್ಯವಸ್ಥೆ ಮಾಡುವಂತೆ ಜೈಲಿನ ಅಧಿಕಾರಿಗಳ ಜತೆ ವಲಸೆ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Published by:Annappa Achari
First published: