ಮಾಜಿ ಪ್ರಧಾನಿ Rajiv Gandhi ಅಗಲಿ 30 ವರ್ಷಗಳು, ರಾಜೀವ್ ಹತ್ಯೆಯ ಕೊನೆಯ ಪ್ಲಾನ್ ಮತ್ತು ಆ ಜನರು !

ಇಂದಿಗೆ ರಾಜೀವ್ ಗಾಂಧಿ ಹತ್ಯೆಯಾಗಿ 30 ವರ್ಷಗಳಾದವು. ಅತ್ಯಂತ ಕರಾರುವಾಕ್ಕಾಗಿ ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದು ಭಯಾನಕ ಕೊಲೆ ನಡೆಸಿತ್ತು ಎಲ್​ಟಿಟಿಇ. ಕೊನೆಯ ಹಂತದ ತಯಾರಿಗಳು ಮತ್ತು ಹತ್ಯೆಯ ಆ ದಿನದ ರೋಚಕ ಕಥೆ ಇಲ್ಲಿದೆ...

ಹತ್ಯೆಯ ಕೆಲವೇ ಕ್ಷಣಗಳ ಮುಂಚೆ ರಾಜೀವ್ ಗಾಂಧಿ

ಹತ್ಯೆಯ ಕೆಲವೇ ಕ್ಷಣಗಳ ಮುಂಚೆ ರಾಜೀವ್ ಗಾಂಧಿ

  • Share this:
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯಸ್ಮರಣೆ ಇಂದು. LTTE ಉಗ್ರರು ರಾಜೀವ್ ಗಾಂಧಿ ಹತ್ಯೆ ಮಾಡದೇ ಹೋಗಿದ್ದರೆ ಎರಡು ಪ್ರಮುಖ ಘಟನೆಗಳು ಇರುತ್ತಿದ್ದವು ಎಂದು ಇತಿಹಾಸಕಾರರು ಗಮನಿಸುತ್ತಾರೆ. ಒಂದು Rajiv Gandhi ಆಗಿನ ಸಂದರ್ಭದಲ್ಲಿ ಭಾರತಕ್ಕೆ ಅತ್ಯಗತ್ಯವಾಗಿ ಬೇಕಾಗಿದ್ದ ಒಬ್ಬ ಯುವ ನಾಯಕನಾಗಿ ಯಶಸ್ವಿಯಾಗುತ್ತಿದ್ದರು. ಎರಡನೆಯದು ಎಲ್​ಟಿಟಿಇ ನಾಯಕ ಪ್ರಭಾಕರನ್ ಅಷ್ಟು ದಾರುಣ ಸಾವು ನೋಡುವ ಪ್ರಮೇಯ ಬಹುಶಃ ಬರುತ್ತಿರಲಿಲ್ಲ. ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತು. ಇಂದಿಗೆ ರಾಜೀವ್ ಗಾಂಧಿ ಹತ್ಯೆಯಾಗಿ 30 ವರ್ಷಗಳಾದವು. ಅತ್ಯಂತ ಕರಾರುವಾಕ್ಕಾಗಿ ಯೋಜನೆ ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದು ಭಯಾನಕ ಕೊಲೆ ನಡೆಸಿತ್ತು ಎಲ್​ಟಿಟಿಇ. ತಮಿಳು ಉಗ್ರರನ್ನು ಮಟ್ಟ ಹಾಕಲು ಶ್ರೀಲಂಕಾ ಸರ್ಕಾರದ ನೆರವಿಗೆ ಭಾರತ ಮತ್ತಷ್ಟು ಸೈನ್ಯವನ್ನು ಕಳಿಸುವ ಸಾಧ್ಯತೆ ಇದೆ ಎಂದು ಆಲೋಚಿಸಿದ ಪ್ರಭಾಕರನ್ ಮತ್ತು ಆತನ ಗುರು ಪೊಟ್ಟು ಅಮ್ಮನ್ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ತಮ್ಮ ದಾರಿಯಿಂದ ಸರಿಸಲು ನಿರ್ಧರಿಸಿದ್ದರು.

ಒಂಟಿ ಕಣ್ಣಿನ ಹಂತಕ: ಶಿವರಾಸನ್

ಈ ಹತ್ಯೆಯ ನಾಯಕತ್ವ ಸಿಕ್ಕಿದ್ದು ಶಿವರಾಸನ್​ಗೆ. ಭಾರತಕ್ಕೆ ಎಲ್​ಟಿಟಿಯ ಎಲ್ಲಾ ಗುಪ್ತ ಸಮಾಲೋಚನೆಗಳೂ ಗೊತ್ತಾಗುತ್ತಿವೆ ಎನ್ನುವ ವಿಚಾರ ಪ್ರಭಾಕರನ್​ಗೆ ತಿಳಿದಿತ್ತು. ಹಾಗಾಗಿ ರಾಜೀವ್ ಗಾಂಧಿ ಹತ್ಯೆ ವಿಚಾರವನ್ನು ಆತ ಬಹಳ ಆಲೋಚಿಸಿ ಶಿವರಾಸನ್​ಗೆ ಕೊಟ್ಟಿದ್ದ. ಸೆಪ್ಟೆಂಬರ್ 1990ರಲ್ಲಿ ಎರಡು ದೋಣಿಗಳ ಮೂಲಕ ಎರಡು ತಂಡಗಳಲ್ಲಿ ಎಲ್​ಟಿಟಿಇ ಹಂತಕರು ನಿರಾಶ್ರಿತರ ಸೋಗಿನಲ್ಲಿ ಬಂದು ಚೆನ್ನೈನಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಾರೆ. ಬಹುಕಾಲದವರಗೆ ಅವರು ಬಂದಿರುವ ಕೆಲಸ ಯಾವುದು ಎನ್ನುವುದರ ಬಗ್ಗೆ ಇವರಿಗೂ ಸಂಪೂರ್ಣ ಮಾಹಿತಿ ಇರುವುದಿಲ್ಲ. ಇಷ್ಟೇ ಜನರನ್ನು ಬಳಸಿ ಅಷ್ಟು ದೊಡ್ಡ ಹತ್ಯೆ ಸಾಧ್ಯವಿಲ್ಲ ಎನ್ನುವುದನ್ನು ಅರಿತ ಶಿವರಾಸನ್ ಕೆಲ ದಿನಗಳಲ್ಲೇ ಮತ್ತೆ ಶ್ರೀಲಂಕಾಗೆ ಹೋಗಿ ಜನವರಿ 1991ರಲ್ಲಿ ಮರಳಿದ್ದನು.

ಇದನ್ನೂ ಓದಿ: https://kannada.news18.com/news/explained/explainer-west-bengal-wants-upper-house-vidhan-parishad-back-how-states-have-councils-stg-sct-566683.html

ಸರಿಸುಮಾರು ಅದೇ ಸಂದರ್ಭದಲ್ಲಿ ಎಲ್​ಟಿಟಿಇ ಚಟುವಟಿಕೆಗಳನ್ನು ಮಟ್ಟಹಾಕಲು ಸೋತ ಹಿನ್ನೆಲೆಯಲ್ಲಿ ಡಿಎಂಕೆ ಸರ್ಕಾರವನ್ನು ತೆಗೆದುಹಾಕಿ ಕೇಂದ್ರಾಡಳಿತ ಹೇರಲಾಗಿತ್ತು. ಕಿಟ್ಟು ಮತ್ತು ಮುತ್ತುರಾಜ ಎನ್ನುವ ಮತ್ತಿಬ್ಬರು ಶಿವರಾಸನ್​ಗೆ ಸಹಾಯ ಮಾಡೋಕೆ ಸೇರಿಕೊಂಡರು. ಆದರೆ ಮುತ್ತುರಾಜನ್ ಮೇಲೆ ಗುಪ್ತಚರ ಕಣ್ಣಿಟ್ಟಿತ್ತು ಎನ್ನುವುದು ಇವರು ಯಾರಿಗೂ ತಿಳಿದಿರಲಿಲ್ಲ. ಕೊಲೆ ಸಂಚಿಗೆ ಬೇಕಾದ ಕೆಲ ಜನರ ವ್ಯವಸ್ಥೆ ಮಾಡಿ ಮುತ್ತುರಾಜನ್ ಒಂದು ದಿನ ಧಿಡೀರನೆ ಮಾಯವಾಗಿಬಿಟ್ಟಿದ್ದ. ಅವನು ಪೊಟ್ಟು ಅಮ್ಮನ್ ಆದೇಶದಂತೆ ಶ್ರೀಲಂಕಾಗೆ ಹೋಗಿದ್ದ ಎನ್ನುವುವು ನಂತರ ತಿಳಿಯಿತು. ಆದರೆ ಆತ ಶ್ರೀಲಂಕಾ ತಲುಪಿರಲೇ ಇಲ್ಲ. ಸಮುದ್ರ ಮಧ್ಯದಲ್ಲೇ ಆತನ ದೋಣಿ ಮುಳುಗಿತ್ತು. ಆತ ಸತ್ತಿದ್ದಾನೆ ಎಂದು ಭಾವಿಸಿ ಎಲ್​ಟಿಟಿಇ ಆತನಿಗೆ ಗೌರವ ಸಲ್ಲಿಸಿತ್ತು. ಆದ್ರೆ ಭಾರತದ ವಾಯುಸೇನೆ ಆತ ಸತ್ತಿಲ್ಲ ಎಂದೇ ನಂಬಿತ್ತು. ದೋಣಿ ಮಗುಚಿದ ನಂತರ ಶ್ರೀಲಂಕಾ ವಾಯುಸೇನೆ ಆತನನ್ನು ಬಂಧಿಸಿತ್ತು.

ಈ ನಡುವೆ ಕಾಸಿ ಆನಂದನ್ ಎನ್ನುವ ಎಲ್​ಟಿಟಿಇ ಸದಸ್ಯನ ಬಳಿ ರಾಜೀವ್ ಗಾಂಧಿಯನ್ನು ಭೇಟಿಯಾಗಿ ಮುಂದಿನ ಚುನಾವಣೆಗೆ ಶುಭ ಕೋರುವಂತೆ ಪ್ರಭಾಕರನ್ ಹೇಳಿಕಳಿಸಿದ್ದ. ಕೆಲ ದಿನಗಳ ನಂತರ ಲಂಡನ್ ಮೂಲದ ಶ್ರೀಲಂಕಾ ಬ್ಯಾಂಕರ್​ ಒಬ್ಬ ಎಲ್​ಟಿಟಿಇ ರಾಜೀವ್ ಗಾಂಧಿ ಜೊತೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತದೆ ಎಂದು ಸಂದೇಶ ಕಳಿಸಿದ್ದ. ಇದು ಎಲ್​ಟಿಟಿಇ ತಮ್ಮ ದಾರಿಗೆ ಬರುತ್ತಿದೆ ಎಂದು ಭಾರತೀಯ ಭದ್ರತಾ ಪಡೆಗಳನ್ನು ನಂಬಿಸುವ ಹುನ್ನಾರವಾಗಿತ್ತು.

ಇದನ್ನೂ ಓದಿ: https://kannada.news18.com/news/national-international/rajiv-gandhi-death-anniversary-a-memory-of-eye-witness-to-that-gory-incident-snvs-386031.html

ಈ ಸಂದರ್ಭದಲ್ಲಿ ಜಾಫ್ನಾ ಮತ್ತು ಚೆನ್ನೈ ನಡುವೆ ಕೆಲ ಗುಪ್ತ ಸಂದೇಶಗಳು ರವಾನೆಯಾಗಿದ್ದು ಅವು ರಾಜೀವ್ ಗಾಂಧಿ ಹತ್ಯೆಯ ನಂತರ ಬೆಳಕಿಗೆ ಬಂದವು. ಪತ್ರಕರ್ತನ ಸೋಗಿನಲ್ಲಿದ್ದ ಶಿವರಾಸನ್ ಶ್ರೀಪೆರಂಬದೂರಿನಲ್ಲಿ ಮೇ 21, 1991ರಂದು ರಾಜೀವ್ ಗಾಂಧಿಯ ಚುನಾವಣಾ ರ್ಯಾಲಿ ಇರುವುದನ್ನು ಕಾಂಗ್ರೆಸ್ ಕಾರ್ಯಕರ್ತರಿಂದ ತಿಳಿದುಕೊಂಡ.

ಕೊಲೆಗೂ ಮುನ್ನ ರಿಹರ್ಸಲ್ !

ಎಲ್ಲವೂ ತಾವು ಅಂದುಕೊಂಡಂತೆ ನಡೆಯಬೇಕು ಎನ್ನುವ ಮುನ್ನೆಚ್ಚರಿಕೆಯಿಂದ ಎಲ್​ಟಿಟಿಇ ರಾಜೀವ್ ಹತ್ಯೆಯ ಪ್ಲಾನ್​ಗೆ ಒಂದು ರಿಹರ್ಸಲ್ ಕೂಡಾ ನಡೆಸಿತ್ತು. ಮಾಜಿ ಪ್ರಧಾನಿ ವಿ ಪಿ ಸಿಂಗ್ ಚೆನ್ನೈನಲ್ಲಿ ಚುನಾವಣಾ ರ್ಯಾಲಿ ನಡೆಸಿದ್ದರು. ಆ ಸಂದರ್ಭದಲ್ಲಿ ಸಿಂಗ್​ರವರು ಹೊರಟಾಗ ಧನು ಅವರ ಬಳಿ ತೆರಳಿ ಗೌರವಸೂಚಕವಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದ. ಈ ವಿಡಿಯೋವನ್ನು ಎಲ್​ಟಿಟಿಇ ಅನೇಕ ಬಾರಿ ಮತ್ತೆ ಮತ್ತೆ ವೀಕ್ಷಿಸಿತ್ತು, ಏನಾದರೂ ತಪ್ಪುಗಳಿವೆಯಾ ಎಂದು ನೋಡಲು. ಯಾವ ತಪ್ಪುಗಳೂ ಇರಲಿಲ್ಲ.

ರಾಜೀವ್ ಅಂತ್ಯದ ಆ ದಿನ !

1991ರ ಮೇ 20ರಂದು ಎಲ್​ಟಿಟಿಇ ಕೊಲೆಗಾರರ ತಂಡ ಚೆನ್ನೈನ ಚಿತ್ರಮಂದಿರದಲ್ಲಿ ಒಂದು ಸಿನಿಮಾ ನೋಡಿತ್ತು. ಮಾರನೆಯ ದಿನ ಸಂಜೆ ಶ್ರೀಪೆರಂಬದೂರಿಗೆ ತೆರಳಿದ ಈ ತಂಡಕ್ಕೆ ಇವರ ಬಗ್ಗೆ ಏನೂ ತಿಳಿಯದ ಹರಿಬಾಭು ಎನ್ನುವ ಫೋಟೊಗ್ರಫರ್ ಒಬ್ಬ ಭೇಟಿಯಾದ. ರ್ಯಾಲಿಯಲ್ಲಿ ಕೈಯಲ್ಲಿ ಗಂಧದ ಹಾರ ಹಿಡಿದುಕೊಂಡಿದ್ದ ಧನು ನಿಂತಿದ್ದಳು. ಆಕೆಯ ಕೇಸರಿ ಬಣ್ಣದ ಸಲ್ವಾರ್​​ನೊಳಗೆ ಭಯಾನಕ ಬಾಂಬ್ ಫಿಟ್ ಮಾಡಲಾಗಿತ್ತು. ಅಲ್ಲಿದ್ದ ಮಹಿಳಾ ಪೋಲೀಸ್​ ವಿಐಪಿ ಸ್ಥಳದಲ್ಲಿ ಏನು ಮಾಡುತ್ತಿರುವೆ ಎಂದು ಗದರಿಸಿದಾಗ, ಆಕೆ ರಾಜೀವ್ ಗಾಂಧಿಗೆ ಹಾರ ಹಾಕುತ್ತಾಳೆ ಎಂದು ಫೋಟೊಗ್ರಫರ್ ಹರಿಬಾಬು ಹೇಳಿದ್ದ. ವೇದಿಕೆಯ ಬಳಿ ಬಿಳಿ ಕುರ್ತಾ ಪೈಜಾಮಾ ಧರಿಸಿದ್ದ ಶಿವರಾಸನ್ ನಿಂತಿದ್ದ.

ಕಾಯುತ್ತಿದ್ದ ಜನರ ಬಳಿ ರಾಜೀವ್ ಗಾಂಧಿ ತೆರಳಿದಾಗ ಧನು ಅವರ ಬಳಿ ಬಂದಳು. ಆಗ ಮತ್ತೆ ಅದೇ ಮಹಿಳಾ ಪೋಲೀಸ್ ಧನುವನ್ನು ತಳ್ಳಲು ಪ್ರಯತ್ನಿಸಿದ್ದಳು. ಆದರೆ ಖುದ್ದು ರಾಜೀವ್ ಆಕೆಯನ್ನು ತಡೆದು, “ಇರಲಿ…ಎಲ್ಲರಿಗೂ ಅವಕಾಶ ಸಿಗಲಿ” ಎಂದರು. ನಂತರ ಧನು ರಾಜೀವ್ ಕೊರಳಿಗೆ ಗಂಧದ ಹಾರಿ ಹಾಕಿ, ಕಾಲು ಮುಟ್ಟುವಂತೆ ಬಾಗಿದಳು..ನಂತರ ಮೇಲೆ ಏಳಲೇ ಇಲ್ಲ. ಬಟ್ಟೆಯ ಒಳಗಿದ್ದ ಬಾಂಬ್​ನ ನಳಿಕೆ ಎಳೆದು ತನ್ನನ್ನೂ ಸೇರಿದಂತೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸುತ್ತಲಿನ 16 ಜನರ ಸಾವಿಗೆ ಕಾರಣವಾದಳು.
Published by:Soumya KN
First published: