Rajinikanth: ತಮಿಳುನಾಡು ಸ್ಟೆರ್​ಲೈಟ್​ ಗೋಲಿಬಾರ್​ ಪ್ರಕರಣ; ನಟ ರಜನಿಕಾಂತ್​ಗೆ ಸಮನ್ಸ್​ ಜಾರಿ ಮಾಡಿದ ನ್ಯಾಯಾಲಯ!

ಘಟನೆಯ ನಂತರ ಗಾಯಾಳುಗಳನ್ನು ಭೇಟಿಯಾಗಿದ್ದ ರಜನಿಕಾಂತ್‌, ಪ್ರತಿಭಟನೆಯಲ್ಲಿ ಸಾಮಾಜ ವಿರೋಧಿಗಳು ನುಸುಳಿದ್ದರಿಂದ ಹಿಂಸಾಚಾರ ಸಂಭವಿಸಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಏಕ ಮಹಿಳಾ ನ್ಯಾಯಾಂಗ ಪೀಠವು ಅವರಿಗೆ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ.

ರಜನಿಕಾಂತ್.

ರಜನಿಕಾಂತ್.

  • Share this:
    ಚೆನ್ನೈ (ಡಿಸೆಂಬರ್​ 21); ತಮಿಳುನಾಡಿನ ತೂತುಕುಡಿಯಲ್ಲಿರುವ ಸ್ಟೆರ್‌ಲೈಟ್‌ ತಾಮ್ರ ಕರಗಿಸುವ ಘಟಕದಲ್ಲಿ 2018ರಲ್ಲಿ ನಡೆದಿದ್ದ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ 13 ಜನ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸುವಂತೆ ಏಕ ಸದಸ್ಯ ವಿಚಾರಣಾ ನ್ಯಾಯಾಲಯ ತಮಿಳು ನಟ ರಜನಿಕಾಂತ್​ ಅವರಿಗೆ ಸಮಸ್ಸ್ ಜಾರಿ ಮಾಡಿದೆ. ವೇದಾಂತ ಗ್ರೂಪ್‌ನ ಸ್ಟೆರ್‌ಲೈಟ್ ತಮಿಳುನಾಡಿನ ದೈತ್ಯ ಗಣಿಗಾರಿಕಾ ಕಂಪೆನಿ. ಆದರೆ, ಈ ಕಂಪೆನಿಯಿಂದ ಸುತ್ತಮುತ್ತಲಿನ ಪರಿಸರ ಹಾನಿಯಾಗುತ್ತಿದೆ ಎಂದು ಒತ್ತಾಯಿಸಿ ಸ್ಥಳೀಯರು ಪ್ರತಿಭಟಿಸಿದ್ದರು. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಸಂಘಟನೆಗಳು ಸಹ ಕೈಜೋಡಿಸಿದ್ದವು. ಹೀಗಾಗಿ ಈ ಘಟಕವನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆ ಪೊಲೀಸ್​ ದಾಳಿಯಿಂದಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಕೊನೆಗೆ ಜನಸಮೂಹವನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ ಪರಿಣಾಮ 13 ಜನರು ಮೃತಪಟ್ಟಿದ್ದರು.ಈ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು.

    ಘಟನೆಯ ನಂತರ ಗಾಯಾಳುಗಳನ್ನು ಭೇಟಿಯಾಗಿದ್ದ ರಜನಿಕಾಂತ್‌, ಪ್ರತಿಭಟನೆಯಲ್ಲಿ ಸಾಮಾಜ ವಿರೋಧಿಗಳು ನುಸುಳಿದ್ದರಿಂದ ಹಿಂಸಾಚಾರ ಸಂಭವಿಸಿದೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಏಕ ಮಹಿಳಾ ನ್ಯಾಯಾಂಗ ಪೀಠವು ಅವರಿಗೆ ಸಮನ್ಸ್ ನೀಡಿದೆ ಎನ್ನಲಾಗುತ್ತಿದೆ. ಈ ಹಿಂದೆ ನಿವೃತ್ತ ನ್ಯಾಯಾಧೀಶ ಅರುಣಾ ಜಗದೀಸನ್ ಅವರು ರಜನಿಕಾಂತ್ ಅವರಿಗೆ ಸಮನ್ಸ್ ನೀಡಿದ್ದರಾದರೂ ಅವರು ಸಮಸ್ಸ್‌‌ನಿಂದ ವಿನಾಯತಿ ಪಡೆದಿದ್ದರು.

    ಇದನ್ನೂ ಓದಿ : ಪಶ್ಚಿಮ ಬಂಗಾಳದ ಬಿಜೆಪಿ ಸಂಸದನ ಹೆಂಡತಿ ಸುಜಾತಾ ಮೊಂಡಾಲ್ ಖಾನ್ ಟಿಎಂಸಿಗೆ ಸೇರ್ಪಡೆ; ಕಮಲಕ್ಕೆ ಮುಖಭಂಗ

    ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಸರ್ಕಾರದ ಆಡಳಿತದ ವಿರುದ್ದ ಕಿಡಿಕಾರಿದ್ದ ರಜನಿಕಾಂತ್, ಹಿಂಸಾಚಾರಕ್ಕೆ ಸಮಾಜ ವಿರೋಧಿಗಳು ಕಾರಣ, ಅವರ ವಿರುದ್ದ ಕಠಿಣ ಕ್ರಮತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಆದರೆ, ರಜನಿಕಾಂತ್​ ತಮ್ಮ ಹೇಳಿಕೆಯಲ್ಲಿ ಎಲ್ಲೂ ಪೊಲೀಸರ ವರ್ತನೆ ಮತ್ತು ಜನರ ಮೇಲೆ ಗುಂಡು ಹಾರಿಸುವ ನಿರ್ಧಾರವನ್ನು ಖಂಡಿಸಿರಲಿಲ್ಲ.

    ಹೀಗಾಗಿ ಸ್ಥಳೀಯರು ಸಹ ನಟ ರಜನಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದರು. ಇದೀಗ ಈ ಪ್ರಕರಣದ ಸಂಬಂಧ ನೇರವಾಗಿ ನ್ಯಾಯಾಲಯವೇ ವಿಚಾರಣೆ ನಡೆಸುತ್ತಿದ್ದು, ವಿಚಾರಣೆಗೆ ಸಹಕರಿಸುವಂತೆ ರಜನಿಕಾಂತ್​ ಅವರಿಗೆ ಸಮನ್ಸ್​ ಜಾರಿ ಮಾಡಿದೆ.
    Published by:MAshok Kumar
    First published: