ತಿರುವಳ್ಳುವರ್​ ರೀತಿ ನನ್ನನ್ನೂ ಕೇಸರೀಕರಣಗೊಳಿಸಲು ಯತ್ನಿಸಿದರು, ಆದರೆ ನಾನು ಬಿಜೆಪಿಗನಲ್ಲ; ರಜನಿಕಾಂತ್​​

ಅವರು ನನ್ನನ್ನು ಬಿಜೆಪಿ ಮನುಷ್ಯ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ, ಇದು ಸುಳ್ಳು, ಮಾಧ್ಯಮಗಳು ಕೂಡ ಅದೇ ರೀತಿ ಬಿಂಬಿಸಲು ಮುಂದಾಗಿದೆ. ಆದರೆ ನಾನು ಆ ರೀತಿಯಲ್ಲ. ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ನಿರ್ಧಾರ ಕೈಗೊಳ್ಳುವುದು ನನ್ನ ತೀರ್ಮಾನ

Seema.R | news18-kannada
Updated:November 8, 2019, 2:39 PM IST
ತಿರುವಳ್ಳುವರ್​ ರೀತಿ ನನ್ನನ್ನೂ ಕೇಸರೀಕರಣಗೊಳಿಸಲು ಯತ್ನಿಸಿದರು, ಆದರೆ ನಾನು ಬಿಜೆಪಿಗನಲ್ಲ; ರಜನಿಕಾಂತ್​​
ರಜನಿಕಾಂತ್​​
  • Share this:
ಚೆನ್ನೈ (ನ.08): ತಿರುವಳ್ಳುವರ್​ ರೀತಿಯೇ ನನಗೂ ಕೇಸರಿ ಬಣ್ಣ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಆದರೆ, ನಾನು ಬಿಜೆಪಿ ಮನುಷ್ಯನಲ್ಲ ಎಂದು ನಟ, ರಾಜಕಾರಣಿ ರಜನಿಕಾಂತ್​ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳ ಮುಂದೆ ಈ ಕುರಿತು ಮಾತನಾಡಿದ ಅವರು, ತಮ್ಮ ಪಕ್ಷಕ್ಕೆ ಸೇರುವಂತೆ ನನಗೆ ಬಿಜೆಪಿ ಆಹ್ವಾನ ನೀಡಿಲ್ಲ. ಆದರೆ, ನನಗೆ ಕೇಸರಿ ಬಣ್ಣ ಬಳಿಯುವ ಪ್ರಯತ್ನಗಳು ನಡೆಯುತ್ತಿದೆ . ತಮಿಳು ಕವಿ ತಿರುವಳ್ಳುವರು ಕೇಸರಿಗೊಳಿಸುವ ಪ್ರಕ್ರಿಯೆಯಂತೆ ಈ ವಿವಾದದಲ್ಲಿ ನನ್ನನ್ನು ಅನಗತ್ಯವಾಗಿ ಸೇರಿಸಲಾಗಿದೆ ಎಂದು ಬೇಸರವ್ಯಕ್ತಪಡಿಸಿದರು.

ತಮಿಳುನಾಡು ಬಿಜೆಪಿ ಪಕ್ಷ ಇತ್ತೀಚೆಗೆ ಕೇಸರಿ ಬಟ್ಟೆ ಹಾಕಿರುವ ಕವಿ ತಿರುವಳ್ಳುವರ್​ ಫೋಟೊವನ್ನು ಬಿಡುಗಡೆ ಮಾಡಿತ್ತು. ಅಲ್ಲದೇ, ರಜನಿಕಾಂತ್​ ಅವರು ಕೂಡ ಬಿಜೆಪಿ ಪರವಾಗಿದ್ದು, ಕಮಲಪಾಳೆಯ ಸೇರಲಿದ್ದಾರೆ ಎಂಬ ಅನೇಕ ಊಹಾಪೋಹಾಗಳನ್ನು ಕೂಡ ಹರಡಿದ್ದವು. ಈ ಹಿನ್ನೆಲೆ ಸೂಪರ್​ಸ್ಟಾರ್​  ಈ ಕುರಿತು ಮೌನ ಮುರಿದಿದ್ದಾರೆ.

"ಅವರು ನನ್ನನ್ನು ಬಿಜೆಪಿ ಮನುಷ್ಯ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ, ಇದು ಸುಳ್ಳು, ಮಾಧ್ಯಮಗಳು ಕೂಡ ಅದೇ ರೀತಿ ಬಿಂಬಿಸಲು ಮುಂದಾಗಿದೆ. ಆದರೆ ನಾನು ಆ ರೀತಿಯಲ್ಲ. ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕುರಿತು ನಿರ್ಧಾರ ಕೈಗೊಳ್ಳುವುದು ನನ್ನ ತೀರ್ಮಾನ" ಎಂದು ಕೂಡ ಇದೇ ವೇಳೆ ತಿಳಿಸಿದರು.

ರಜನಿಕಾಂತ್​ ಬಿಜೆಪಿ ಮೂಲಕ ಕ್ರಿಯಾಶೀಲ ರಾಜಕೀಯಕ್ಕೆ ಹೆಜ್ಜೆಇಡುತ್ತಾರೆ ಎಂಬ ಮಾತುಗಳು ಇತ್ತೀಚೆಗೆ ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಅವರು ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ, ಪೊನ್​ ರಾಧಾಕೃಷ್ಣನ್​ ಅವರನ್ನು ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದರು. ಈ ಭೇಟಿ ವೇಳೆ ರಜನಿಕಾಂತ್​ ಅವರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದೆ ಎಂಬ ಮಾತು ಕೇಳಿ ಬಂದಿದ್ದವು.

ಇದನ್ನು ಓದಿ: ಮುಗಿಯದ ಮಹಾ ಕಸರತ್ತು: ಠಾಕ್ರೆ ಭೇಟಿಯಾಗಲಿರುವ ಗಡ್ಕರಿ, ಪಟ್ಟು ಬಿಡದ ಸೇನೆ; ರಾಷ್ಟ್ರಪತಿ ಆಳ್ವಿಕೆ ಸಾಧ್ಯತೆ

ಈ ಕುರಿತು ಇಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, 'ತಿರುವಳ್ಳುವರ್​ ಅವರನ್ನು ಅನಗತ್ಯವಾಗಿ ವಿವಾದಕ್ಕೆ ಗುರಿಮಾಡಲಾಗುತ್ತಿದೆ. ಅವರೊಬ್ಬ ಸಂತ. ಅವರು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತರಾಗಿಲ್ಲ. ಅವರೊಬ್ಬರು ನಾಸ್ತಿಕರಾಗಿದ್ದು, ಅವರ ನಿಯಮಕ್ಕೆ ನಂಬಿಕೆಯಿಂದ ಇದ್ದರು. ತಿರುವಳ್ಳುವರ್​ ಅವರನ್ನು ಕೇಸರಿಕರಣ ಮಾಡುವ ಮೂಲಕ ವಿವಾದ ಹುಟ್ಟುಹಾಕುತ್ತಿದ್ದಾರೆ. ಇದು ತಪ್ಪು' ಎಂದರು.2017ರಲ್ಲಿ ತಮ್ಮ ರಾಜಕೀಯ ಪ್ರವೇಶ ಕುರಿತು ಪ್ರಕಟಿಸಿದ್ದ ರಜನಿಕಾಂತ್​, ತಮ್ಮ ಪಕ್ಷ ಆರಂಭಿಸುವವರೆಗೂ ತಾವು ನಟನೆ ಮಾಡುತ್ತೇನೆ ಎಂದಿದ್ದರು. ಸದ್ಯ ‘ದರ್ಬಾರ್​’ ಸಿನಿಮಾದಲ್ಲಿ ನಟಿಸುತ್ತಿರುವ ರಜನಿ ಅವರ ಚಿತ್ರದ ಮೋಷನ್​ ಫೋಸ್ಟರ್​ ನಿನ್ನೆ ಬಿಡುಗಡೆಯಾಗಿದೆ. ​

(ವರದಿ: ಪೂರ್ಣಿಮ ಮುರಳಿ)

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ