HOME » NEWS » National-international » RAJINIKANTH MAKKAL MANDRAM AS SOME MEMBERS MOVE TO DMK MAK

RajiniKanth: ರಾಜಕೀಯದಿಂದ ದೂರ ಉಳಿದ ರಜಿನಿಕಾಂತ್​; DMK ಪಾಲಾದ ಸೂಪರ್​ಸ್ಟಾರ್​ ಅಭಿಮಾನಿಗಳು; ಬಿಜೆಪಿಗೆ ನಿರಾಸೆ

ಇತ್ತೀಚೆಗೆ ರಜಿನಿಕಾಂತ್​ ರಾಜಕೀಯಕ್ಕೆ ಪ್ರವೇಶಿಸದೆ ಇದ್ದರೂ ಸಹ ಅವರ ನಡೆ ಮತ್ತು ಹೇಳಿಕೆಗಳು ಬಿಜೆಪಿ ಗೆ ಪರವಾದ ಧ್ವನಿಯಾಗಿದೆ ಎನ್ನಲಾಗುತ್ತಿತ್ತು. ಹೀಗಾಗಿ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆ ಪತ್ಯಕ್ಷ ಅಥವಾ ಪರೋಕ್ಷವಾಗಿ ಸಹಾಯ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಅವರ ಅಭಿಮಾನಿಗಳು ಸದ್ದಿಲ್ಲದೆ ಡಿಎಂಕೆ ಪಾಲಾಗುತ್ತಿರುವುದು ಬಿಜೆಪಿ ನಿರಾಸೆ ಮೂಡಿಸಿದೆ ಎನ್ನಲಾಗುತ್ತಿದೆ.

news18-kannada
Updated:January 18, 2021, 1:28 PM IST
RajiniKanth: ರಾಜಕೀಯದಿಂದ ದೂರ ಉಳಿದ ರಜಿನಿಕಾಂತ್​; DMK ಪಾಲಾದ ಸೂಪರ್​ಸ್ಟಾರ್​ ಅಭಿಮಾನಿಗಳು; ಬಿಜೆಪಿಗೆ ನಿರಾಸೆ
ನಟ ರಜಿನಿಕಾಂತ್.
  • Share this:
ಚೆನ್ನೈ (ಜನವರಿ 18); ತಮಿಳುನಾಡು ಸಿನಿರಂಗದ ಸೂಪರ್​ ಸ್ಟಾರ್​ ರಜಿನಿಕಾಂತ್​ ಇತ್ತೀಚೆಗೆ ನಾಲ್ಕು ಪುಟಗಳ ತಮ್ಮ ಹೇಳಿಕೆಯನ್ನು ನೀಡಿದ್ದು, ಆ ಹೇಳಿಕೆಯಲ್ಲಿ ಅನಾರೋಗ್ಯದ ಕಾರಣ ತಾವು ತಮಿಳುನಾಡು ರಾಜಕೀಯದಿಂದ ದೂರ ಉಳಿಯುವುದಾಗಿಯೂ, ರಾಜಕೀಯದಿಂದ ಹೊರಗಿದ್ದೆ ಜನರಿಗೆ ತಮ್ಮ ಕೈಲಾದ ಸೇವೆಯನ್ನು ಮಾಡುವುದಾಗಿಯೂ ತಿಳಿಸಿದ್ದರು. ಈ ಹೇಳಿಕೆ ಸಾಮಾನ್ಯವಾಗಿ ರಜಿನಿ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆಯನ್ನು ಮೂಡಿಸಿತ್ತು. ಅಲ್ಲದೆ, ರಜಿನಿ ಅಭಿಮಾನಿಗಳು ಸಾರ್ವಜನಿಕವಾಗಿ ಅವಹೇಳನಕ್ಕೂ ಒಳಗಾಗಿದ್ದುಂಟು. ಈ ನಡುವೆ ನಟ ರಜಿನಿಕಾಂತ್ ಅವರ ರಜಿನಿ ಮಕ್ಕಳ್ ಮಂಡ್ರಮ್​ಗೆ ರಾಜೀನಾಮೆ ನೀಡುತ್ತಿರುವ ಅವರ ಅಭಿಮಾನಿಗಳು ಡಿಎಂಕೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಇದರ ಬೆನ್ನಿಗೆ ಎಚ್ಚೆತ್ತಿರುವ ರಜಿನಿ ಮಕ್ಕಳ್ ಮಂಡ್ರಮ್​ ಸಹ "ಅವರು ಇತರ ಪಕ್ಷಗಳಿಗೆ ಸೇರಿದರೂ ಸಹ ಅವರು ಯಾವಾಗಲೂ ರಜನಿ ಅಭಿಮಾನಿಗಳು ಎಂಬುದನ್ನು ಮರೆಯಬಾರದು" ಎಂದು ಹೇಳಿದೆ.

ಸೂಪರ್​ಸ್ಟಾರ್ ರಜಿನಿಕಾಂತ್​ ರಾಜಕೀಯದಿಂದ ಹೊರಗುಳಿದಿದ್ದರೂ ಸಹ ಆಡಳಿತರೂಢ ಎಐಎಡಿಎಂಕೆ ಪಕ್ಷದ ಜೊತೆಗೆ ಮೈತ್ರಿ ಸಾಧಿಸಿಕೊಂಡಿರುವ ಬಿಜೆಪಿ ಪಕ್ಷವನ್ನು ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಬೆಂಬಲಿಸುತ್ತಾರೆ ಎನ್ನಲಾಗಿತ್ತು. ಬಿಜೆಪಿ ಬೆಂಬಲಿಗರೂ ಸಹ ಇದನ್ನೇ ಆಶಿಸಿದ್ದರು. ಆದರೆ, ಇದೀಗ ರಜಿನಿ ಮಕ್ಕಳ್ ಮಂಡ್ರಂ ಸದಸ್ಯರು ಸದ್ದಿಲ್ಲದೆ ಪ್ರಬಲ ವಿರೋಧ ಪಕ್ಷವಾದ ಡಿಎಂಕೆ ಗೆ ಸೇರ್ಪಡೆಯಾಗುತ್ತಿರುವುದು ಬಿಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಡಿಸೆಂಬರ್​ ಕೊನೆ ವಾರದಲ್ಲಿ ತಾವು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು 70 ವರ್ಷದ ರಜಿನಿಕಾಂತ್​ ಸ್ಪಷ್ಟಪಡಿಸಿದ್ದರು. ಈ ಸಂಬಂಧ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಕೋರಿ ಪತ್ರವೊಂದನ್ನು ಬರೆದು ಅದನ್ನು ಟ್ವೀಟ್​ ಸಹ ಮಾಡಿದ್ದರು. ಆದರೆ, ನಟ ರಜನೀಕಾಂತ್ ಅವರ ತೀರ್ಮಾನದಿಂದ ಬೇಸತ್ತಿದ್ದ ಅವರ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರು ಕಳೆದ ಮೂರು ವಾರಗಳಿಂದ ರಜಿನಿಕಾಂತ್​ ರಾಜಕೀಯಕ್ಕೆ ಪ್ರವೇಶಿಸಲೇಬೇಕು ಎಂದು ಎಲ್ಲೆಡೆ ಹೋರಾಟ ನಡೆಸಿದ್ದರು. ಈ ಕುರಿತು ಮತ್ತೆ ಟ್ವೀಟ್ ಮಾಡಿದ್ದ ರಜಿನಿಕಾಂತ್​, "ನಾನು ಮತ್ತೆ ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಹೊಂದಿಲ್ಲ. ದಯವಿಟ್ಟು ಅಭಿಮಾನಿಗಳು ನನ್ನ ಮೇಲೆ ಒತ್ತಡ ಹೇರಬೇಡಿ" ಎಂದು ಮನವಿ ಮಾಡಿದ್ದರು.

"ಪ್ರತಿಭಟನೆಯಲ್ಲಿ ಭಾಗವಹಿಸದಿದ್ದಕ್ಕಾಗಿ ನನ್ನ ಅಭಿಮಾನಿಗಳು, ರಜಿನಿ ಮಕ್ಕಳ್ ಮಂಡ್ರಮ್ ಸದಸ್ಯರನ್ನು ನಾನು ಪ್ರಶಂಸಿಸುತ್ತೇನೆ. ಆದರೆ, ಕಳೆದ ತಿಂಗಳು ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ವಿವರಿಸಿದರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದವರ ಬಗ್ಗೆ ನನಗೆ ಬೇಸರ ಮತ್ತು ಚಿಂತೆ ಇದೆ" ಎಂದು ರಜನಿಕಾಂತ್ ಹೇಳಿದ್ದರು.

ಇದನ್ನೂ ಓದಿ: Rajinikanth: ನಾನು ರಾಜಕೀಯಕ್ಕೆ ಬರಲೇಬೇಕೆಂಬ ನಿಮ್ಮ ಹೋರಾಟವನ್ನು ನಿಲ್ಲಿಸಿ; ಅಭಿಮಾನಿಗಳಲ್ಲಿ ರಜನೀಕಾಂತ್ ಒತ್ತಾಯ

1996 ರ ಚುನಾವಣೆಯಲ್ಲಿ ಆಡಳಿತಾರೂ AIADMK ವಿರುದ್ಧ ಆಡಳಿತ ವಿರೋಧಿ ಅಲೆ ಉಂಟಾಗಲು ಆ ಮೂಲಕ ದಿವಂತಗ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಸೋಲುವಲ್ಲಿ ರಜಿನಿಕಾಂತ್ ಪ್ರಮುಖ ಪಾತ್ರವಹಿಸಿದ್ದರು. "ಜಯಲಲಿತಾ ಅವರನ್ನು ಮತ್ತೆ ಅಧಿಕಾರಕ್ಕೆ ತಂದರೆ ತಮಿಳುನಾಡನ್ನು ದೇವರು ಸಹ ಉಳಿಸಲು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಸಂಚಲವನ್ನು ಉಂಟು ಮಾಡಿತ್ತು. ಅಂದಿನಿಂದ ತಲೈವಾ ರಾಜಕೀಯ ಎಂಟ್ರಿಗೆ ಇಡೀ ತಮಿಳುನಾಡಿನ ಜನ ಕಾದು ಕುಳಿತಿದ್ದರು.
ಇತ್ತೀಚೆಗೆ ರಜಿನಿಕಾಂತ್​ ರಾಜಕೀಯಕ್ಕೆ ಪ್ರವೇಶಿಸದೆ ಇದ್ದರೂ ಸಹ ಅವರ ನಡೆ ಮತ್ತು ಹೇಳಿಕೆಗಳು ಬಿಜೆಪಿ ಗೆ ಪರವಾದ ಧ್ವನಿಯಾಗಿದೆ ಎನ್ನಲಾಗುತ್ತಿತ್ತು. ಹೀಗಾಗಿ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆ ಪತ್ಯಕ್ಷ ಅಥವಾ ಪರೋಕ್ಷವಾಗಿ ಸಹಾಯ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ, ಇದೀಗ ಅವರ ಅಭಿಮಾನಿಗಳು ಸದ್ದಿಲ್ಲದೆ ಡಿಎಂಕೆ ಪಾಲಾಗುತ್ತಿರುವುದು ಬಿಜೆಪಿ ನಿರಾಸೆ ಮೂಡಿಸಿದೆ ಎನ್ನಲಾಗುತ್ತಿದೆ.
Published by: MAshok Kumar
First published: January 18, 2021, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories