ಕರುಣಾನಿಧಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ತಮಿಳುನಾಡು ಸಿಎಂ ವಿರುದ್ಧ ರಜನಿಕಾಂತ್ ಕಿಡಿ

news18
Updated:August 14, 2018, 1:19 PM IST
ಕರುಣಾನಿಧಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ತಮಿಳುನಾಡು ಸಿಎಂ ವಿರುದ್ಧ ರಜನಿಕಾಂತ್ ಕಿಡಿ
news18
Updated: August 14, 2018, 1:19 PM IST
ನ್ಯೂಸ್ 18 ಕನ್ನಡ


ಚೆನ್ನೈ (ಆ.14) : ಕರುಣಾನಿಧಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ತಮಿಳುನಾಡಿನ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ವಿರುದ್ಧ ತಮಿಳುನಾಡಿನ ಸೂಪರ್​ಸ್ಟಾರ್ ಮತ್ತು ರಾಜಕಾರಣಿ ರಜನಿಕಾಂತ್ ಕಿಡಿಕಾರಿದ್ದಾರೆ.ಕರುಣಾನಿಧಿ ಮತ್ತು ಜಯಲಲಿತಾ ಅವರಿಗಿಂತ ನೀವು ದೊಡ್ಡವರೇ ಎಂದು ಪಳನಿಸ್ವಾಮಿ ಅವರನ್ನು ಪ್ರಶ್ನಿಸಿರುವ ರಜನಿಕಾಂತ್​, ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಹಾಗೂ ತಮಿಳುನಾಡು ರಾಜ್ಯದ ಇಡೀ ಸಂಪುಟ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿಯವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದು ಹೇಳಿದರು.


ಕರುಣಾನಿಧಿಗಾಗಿ ದಕ್ಷಿಣ ಭಾರತದ ಕಲಾವಿದರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಮರೀನಾ ಬೀಚ್ ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಥಳ ನೀಡುವ ಕುರಿತಂತೆ ಪರ ಹಾಗೂ ವಿರೋಧದ ಕೂಗುಗಳು ಕೇಳಿ ಬಂದಿದ್ದವು. ಅಂತಿಮವಾಗಿ ಮದ್ರಾಸ್ ಹೈಕೋರ್ಟ್ ಆದೇಶದ ಮೂಲಕ ವಿವಾದಕ್ಕೆ ಅಂತ್ಯ ಹಾಡಿತ್ತು. ಒಂದು ವೇಳೆ ಮದ್ರಾಸ್ ಹೈಕೋರ್ಟ್ ಆದೇಶವನ್ನು ಸರ್ಕಾರ ಪ್ರಶ್ನಿಸಿದ್ದೇ ಆಗಿದ್ದರೆ, ಸರ್ಕಾರದ ವಿರುದ್ಧ ನಾನು ಪ್ರತಿಭಟನೆ ನಡೆಸುತ್ತಿದ್ದೆ ಎಂದು ಹೇಳಿದ್ದಾರೆ.

Loading...


ಕರುಣಾನಿಧಿಯವರ ಅಂತಿಮ ಸಂಸ್ಕಾರದಲ್ಲಿ ಇಡೀ ಭಾರತ ಬಂದಿತ್ತು. ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಪ್ರಧಾನಮಂತ್ರಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಆಗಮಿಸಿದ್ದರು. ಆದರೆ, ತಮಿಳುನಾಡಿನ ಮುಖ್ಯಮಂತ್ರಿಗಳು ಆಗಮಿಸಿರಲಿಲ್ಲ. ತಮಿಳುನಾಡಿನ ಇಡೀ ಸಂಪುಟ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿರಲಿಲ್ಲ. ಇದರಿಂದ ಜನತೆ ಏನೆಂದು ಆಲೋಚಿಸಬೇಕು? ನೀವೇನು ಎಂಜಿಆರ್ ಅಥವಾ ಜಯಲಲಿತಾರೇ? ಎಂದು ಪ್ರಶ್ನಿಸಿದರು.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...