RajiniKanth: ಕೊನೆಗೂ ಸಕ್ರೀಯ ರಾಜಕಾರಣಕ್ಕೆ ತಾನು ಬರುವುದಿಲ್ಲ ಎಂದು ಘೋಷಿಸಿದ ರಜಿನಿಕಾಂತ್​; ಅಭಿಮಾನಿಗಳಲ್ಲಿ ನಿರಾಸೆ

ರಾಜಕೀಯಕ್ಕೆ ಎಂಟ್ರಿ ಕೊಡದೆ ಜನರಿಗೆ ನನ್ನಿಂದ ಮಾಡಬಹುದಾದ ಎಲ್ಲಾ ಸಹಾಯಗಳನ್ನು ಮಾಡುತ್ತೇನೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನನ್ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ನಟ ರಜಿನಿಕಾಂತ್​ ಟ್ವಿಟರ್​ನಲ್ಲಿ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳು ಜನರಲ್ಲಿ ಮನವಿ ಮಾಡಿದ್ದಾರೆ.

ರಜಿನಿಕಾಂತ್.

ರಜಿನಿಕಾಂತ್.

 • Share this:
  ರಾಜಕೀಯಕ್ಕೆ ಎಂಟ್ರಿ ಕೊಡದೆ ಜನರಿಗೆ ನನ್ನಿಂದ ಮಾಡಬಹುದಾದ ಎಲ್ಲಾ ಸಹಾಯಗಳನ್ನು ಮಾಡುತ್ತೇನೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನನ್ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಟ್ವಿಟರ್​ನಲ್ಲಿ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳು ಜನರಲ್ಲಿ ಮನವಿ ಮಾಡಿದ್ದಾರೆ.ಚೆನ್ನೈ (ಡಿಸೆಂಬರ್​ 29); ಕಳೆದ ಮೂರು ವರ್ಷಗಳಿಂದ ತಮಿಳುನಾಡು ಸಕ್ರೀಯ ರಾಜಕೀಯಕ್ಕೆ ತಾನು ಎಂಟ್ರಿ ನೀಡುವುದಾಗಿ ಆಗಿಂದಾಗ್ಗೆ ಹೇಳಿಕೆ ನೀಡಿದ್ದ, ರಜಿನಿ ಮಕ್ಕಳ್ ಮಂಡ್ರಮ್ ಎಂಬ ಹೆಸರಿನಲ್ಲಿ ತಮ್ಮ ಅಭಿಮಾನಿಗಳನ್ನು ಸಂಘಟಿಸಲು ಮುಂದಾಗಿದ್ದ, ಅಲ್ಲದೆ, ಎಲ್ಲಾ ಜಿಲ್ಲೆಗಳಲ್ಲೂ ತಮ್ಮ ಹೆಸರಿನ ರಾಜಕೀಯ ಘಟಕದ ಸ್ಥಾಪನೆಗೆ ಮುಂದಾಗುವ ಮೂಲಕ ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆ್ಗೆ ಎಂಟ್ರಿಗೆ ತಾನು ಸಿದ್ದ ಎಂದು ಪರೋಕ್ಷವಾಗಿ ನುಡಿದಿದ್ದ. ಆ ಮೂಲಕ ಎಲ್ಲಾ ಪಕ್ಷಗಳಲ್ಲೂ ಸಂಚಲನಕ್ಕೆ ಕಾರಣರಾಗಿದ್ದ ನಟ ರಜಿನಿಕಾಂತ್​ ಕೊನೆಗೂ ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ತಾವು ಸಕ್ರೀಯ ರಾಜಕಾರಣಕ್ಕೆ ಆಗಮಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜಕೀಯಕ್ಕೆ ಎಂಟ್ರಿ ಕೊಡದೆ ಜನರಿಗೆ ನನ್ನಿಂದ ಮಾಡಬಹುದಾದ ಎಲ್ಲಾ ಸಹಾಯಗಳನ್ನು ಮಾಡುತ್ತೇನೆ. ಹೀಗಾಗಿ ಅಭಿಮಾನಿಗಳು ದಯವಿಟ್ಟು ನನ್ನನ್ನು ಕ್ಷಮಿಸಬೇಕು, ನನ್ನ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಟ್ವಿಟರ್​ನಲ್ಲಿ ಮೂರು ಪುಟಗಳ ಪತ್ರ ಬರೆಯುವ ಮೂಲಕ ತಮಿಳು ಜನರಲ್ಲಿ ಮನವಿ ಮಾಡಿದ್ದಾರೆ.

  ಅಸಲಿಗೆ ಎರಡು ತಿಂಗಳ ಹಿಂದೆ ತಮ್ಮ ಅಭಿಮಾನಿಗಳ ಜೊತೆ ಸಭೆ ನಡೆಸಿದ್ದ ನಟ ರಜಿನಿಕಾಂತ್ ಡಿಸೆಂಬರ್​.31 ರಂದು ತಾನು ರಾಜಕೀಯ ಪಕ್ಷ ಘೋಷಿಸುವ ಬಗ್ಗೆ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದಿದ್ದರು. ಈ ನಡುವೆ ರಜಿನಿ ಹೆಸರಿನಲ್ಲಿ ತಮಿಳುನಾಡು ರಾಜಕಾರಣದಲ್ಲಿ ಅನೇಕ ಪ್ರಮುಖ ಪ್ರಸಂಗಗಳು ನಡೆದಿದ್ದವು. ಹೀಗಾಗಿ ತಮಿಳರ ತಲೈವರ್​ ಪೊಲಿಟಿಕಲ್​ ಎಂಟ್ರಿ ಪಕ್ಕಾ ಎಂದೇ ಅಂದಾಜಿಸಲಾಗಿತ್ತು. ಇದು ಸಾಮಾನ್ಯವಾಗಿ ಡಿಎಂಕೆ ಮತ್ತು ಎಡಿಎಂಕೆ ಪಕ್ಷಗಳಲ್ಲಿ ತಲ್ಲಣಕ್ಕೆ ಕಾರಣವಾಗಿತ್ತು.  ಆದರೆ, ಕೊನೆಗೂ ತಮಿಳರ ಆಸೆಗೆ ನಟ ರಜಿನಿಕಾಂತ್​ ತಣ್ಣೀರೆರಚಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಖಂಡಿತ ನಾನು ಬದಲಾವಣೆ ತರುತ್ತೇನೆ ಎಂದು ಆಶ್ವಾಸನೆ ನೀಡಿದ್ದ ರಜಿನಿಕಾಂತ್​ ಇಂದು ದಿಢೀರ್​ ಟ್ವೀಟ್ ಮಾಡುವ ಮೂಲಕ ಜನರಿಗೆ ಸಂದೇಶ ನೀಡಿದ್ದು ಈ ಸಂದೇಶದಲ್ಲಿ "ಆರೋಗ್ಯ ಸಮಸ್ಯೆ ಕಾರಣದಿಂದಾಗಿ ನಾನು ಸಕ್ರೀಯ ರಾಜಕೀಯದಿಂದ ದೂರ ಉಳಿಯಲಿದ್ದೇನೆ" ಎಂದು ಸ್ಪಷ್ಟೀಕರಣ ನೀಡಿದ್ದಾರೆ.

  ಅಭಿಮಾನಿಗಳಿಗೆ ರಜಿನಿ ಬರೆದಿರುವ ಪತ್ರದಲ್ಲಿ ಏನಿದೆ?

  "ನನ್ನ ಆರೋಗ್ಯ ಕಳೆದ ಹಲವು ದಿನಗಳಿಂದ ಹದಗೆಟ್ಟಿದೆ. ಈ ನಡುವೆ ಕೊರೋನಾ ಆರ್ಭಟ ಹೆಚ್ಚಾಗಿದ್ದು ವೈದ್ಯರ ಸಲಹೆಯನ್ನೂ ಮೀರಿ ನಾನು ಹೈದ್ರಾಬಾದ್​ನಲ್ಲಿ ನಡೆಯುತ್ತಿದ್ದ "ಅನ್ನಾತೆ" ಚಿತ್ರದ ಶೂಟಿಂಗ್​ನಲ್ಲಿ ಭಾಗವಹಿಸಿದ್ದೆ. ಕೊರೋನಾ ಬಗ್ಗೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾಗ್ಯೂ ನಮ್ಮ ಚಿತ್ರೀಕರಣದ ತಂಡದಲ್ಲಿ ನಾಲ್ವರಿಗೆ ಈ ಸೋಂಕು ತಗುಲಿತ್ತು.

  ನಾನು ಪರೀಕ್ಷೆಗೆ ಒಳಗಾಗಿದ್ದ ನನಗೆ ನೆಗೆಟೀವ್​ ಬಂದಿತ್ತಾದರೂ, ರಕ್ತದ ಒತ್ತಡ ಹೆಚ್ಚಾಗಿದೆ. ಹೀಗಾಗಿ ವಿಶ್ರಾಂತಿ ಪಡೆಯುತ್ತಿದ್ದೇನೆ. ಈ ಹಿಂದೆ ನಾನು ಡಿಸೆಂಬರ್​ 31 ರಂದು ಸಕ್ರೀಯ ರಾಜಕೀಯಕ್ಕೆ ಎಂಟ್ರಿ ನೀಡುತ್ತೇನೆ ಪಕ್ಷ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದ್ದೆ. ಆದರೆ, ಕಡಿಮೆ ಸಂಖ್ಯೆಯ ಚಿತ್ರೀಕರಣದ ಸೆಟ್​ನಲ್ಲೇ ಅನೇಕರಿಗೆ ಕೊರೋನಾ ಸೋಂಕು ತಗುಲಿದೆ ಎಂದರೆ ರಾಜಕೀಯ ಸಮಾವೇಶದಲ್ಲಿ ಸಾವಿರಾರು ಜನ ಸೇರುತ್ತಾರೆ. ಈ ವೇಳೆ ಎಷ್ಟು ಜನರಿಗೆ ಈ ಸೋಂಕು ತಗುಲಬಹುದು? ಎಂಬ ಆಲೋಚನೆಯೇ ನನ್ನನ್ನು ದಿಗ್ಬ್ರಾಂತಗೊಳಿಸಿದೆ.

  ಇದನ್ನೂ ಓದಿ : ಭಾರತದಲ್ಲಿ 6 ಜನರಲ್ಲಿ ಮ್ಯೂಟಂಟ್​​ ಕೊರೋನಾ ಸೋಂಕು ದೃಢ; ಆಘಾತಕಾರಿ ಮಾಹಿತಿ ಹೊರಹಾಕಿದ ICMR

  ಹೀಗಾಗಿ ರಾಜಕೀಯ ಸಮಾವೇಶಗಳನ್ನು ಆಯೋಜಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಆದರೆ, ಇಂತಹ ಸಮಾವೇಶಗಳನ್ನು ನಡೆಸದೆ ರಾಜಕೀಯದಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸುವುದು ಅಸಾಧ್ಯ. ಇಂತಹ ಗೆಲುವು ಸಿಗದಿದ್ದರೆ ನನ್ನ ದೂರದೃಷ್ಟಿಯ ರಾಜಕೀಯ ಬದಲಾವಣೆ ತರುವುದು ಸಾಧ್ಯವೇ ಇಲ್ಲ. ಹೀಗಾಗಿ ಸಕ್ರೀಯ ರಾಜಕೀಯಕ್ಕೆ ಪ್ರವೇಶಿಸುವ ನನ್ನ ತೀರ್ಮಾನವನ್ನು ಕೈಬಿಡಲು ನಾನು ನಿರ್ಧರಿಸಿದ್ದೇನೆ.

  ಸತ್ಯವನ್ನು ಹೇಳಲು ನಾನು ಎಂದಿಗೂ ಹಿಂದೇಟು ಹಾಕಿದವನಲ್ಲ. ಸಕ್ರೀಯ ರಾಜಕೀಯಕ್ಕೆ ಬರದಿದ್ದರೂ ಸಹ ನನ್ನ ತಮಿಳುನಾಡು ಜನರಿಗೆ ನನ್ನಿಂದಾದ ಸಹಾಯವನ್ನು ಖಂಡಿತ ನಾನು ಮಾಡುತ್ತೇನೆ. ಈ ನನ್ನ ತೀರ್ಮಾನವನ್ನು ನನ್ನ ಅಭಿಮಾನಿಗಳು ಮತ್ತು ತಮಿಳರು ಒಪ್ಪಿಕೊಳ್ಳುತ್ತಾರೆ ಎಂದು ನಾನು ಭಾವಿಸಿದ್ದೇನೆ" ಎಂದು ಬರೆದಿದ್ಧಾರೆ.
  Published by:MAshok Kumar
  First published: