HOME » NEWS » National-international » RAJINIKANTH ACTOR THALAIVA RAJINIKANTH TO LAUNCH POLITICAL PARTY IN JANUARY 2021 SCT

Rajinikanth: ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ​; 2021ರ ಜನವರಿಯಲ್ಲಿ ಪಕ್ಷ ಆರಂಭ

Rajinikanth Political Party: ಟ್ವೀಟ್ ಮೂಲಕ ಮಾಹಿತಿ ನೀಡಿರುವ ರಜನಿಕಾಂತ್, ಜನವರಿಯಲ್ಲಿ ನಮ್ಮ ಹೊಸ ರಾಜಕೀಯ ಪಕ್ಷ ಉದ್ಘಾಟನೆಯಾಗಲಿದೆ. ಡಿ. 31ರಂದು ಪಕ್ಷದ ಬಗ್ಗೆ ಎಲ್ಲ ಮಾಹಿತಿಯನ್ನೂ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

Sushma Chakre | news18-kannada
Updated:December 3, 2020, 1:19 PM IST
Rajinikanth: ರಜನಿಕಾಂತ್ ರಾಜಕೀಯ ಪ್ರವೇಶ ಖಚಿತ​; 2021ರ ಜನವರಿಯಲ್ಲಿ ಪಕ್ಷ ಆರಂಭ
ರಜನಿಕಾಂತ್
  • Share this:
ಚೆನ್ನೈ (ಡಿ. 3): ಸೂಪರ್ ಸ್ಟಾರ್​ ರಜನಿಕಾಂತ್ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಈ ಪ್ರಶ್ನೆ ಬಹಳ ಸಮಯದಿಂದ ಕೇಳಿಬರುತ್ತಲೇ ಇದೆ. ಅವರ ಅನಾರೋಗ್ಯದ ಬಳಿಕ ಈ ಕುರಿತು ಚರ್ಚೆಗಳು ಕಡಿಮೆಯಾಗಿದ್ದವು. ಕೊನೆಗೂ ಈ ಎಲ್ಲ ಚರ್ಚೆಗಳಿಗೆ ತೆರೆ ಬಿದ್ದಿದ್ದು, 2021ರ ಜನವರಿಯಲ್ಲಿ ರಜನಿಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ. 2020ರ ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆ.

ರಜನಿಕಾಂತ್ ರಾಜಕೀಯ ಪ್ರವೇಶ ಮತ್ತು ಹೊಸ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಇಂದು ಟ್ವೀಟ್ ಮೂಲಕ ಈ ಬಗ್ಗೆ ಖಚಿತ ಮಾಹಿತಿ ನೀಡಿರುವ ರಜನಿಕಾಂತ್, ಜನವರಿಯಲ್ಲಿ ನಮ್ಮ ಹೊಸ ರಾಜಕೀಯ ಪಕ್ಷ ಉದ್ಘಾಟನೆಯಾಗಲಿದೆ. ಡಿ. 31ರಂದು ಪಕ್ಷದ ಬಗ್ಗೆ ಎಲ್ಲ ಮಾಹಿತಿಯನ್ನೂ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೇನು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಅವರ ರಾಜಕೀಯ ಪಕ್ಷದ ಘೋಷಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರಜಿನಿ ಮಕ್ಕಳ್ ಮಂಡ್ರಂ ಹಿರಿಯ ಪದಾಧಿಕಾರಿಗಳ ಜೊತೆ ರಜನಿಕಾಂತ್ ಮಹತ್ವದ ಸಭೆ ನಡೆಸಿದ ಬೆನ್ನಲ್ಲೇ ಹೊಸ ಪಕ್ಷದ ಘೋಷಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ.


ಸೂಪರ್​ಸ್ಟಾರ್​ ರಜನಿಕಾಂತ್ ರಾಜಕೀಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಬಗ್ಗೆ ಕೆಲವು ವರ್ಷಗಳಿಂದಲೂ ಚರ್ಚೆಗಳು ನಡೆಯುತ್ತಲೇ ಇವೆ. ರಜನಿಕಾಂತ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ, ಕಳೆದ ಮಾರ್ಚ್​ ತಿಂಗಳಲ್ಲಿ ರಜನಿ ಮಕ್ಕಳ್ ಮಂಡ್ರಂ ಎಂಬ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದರು. ಆದರೆ, ಅನಾರೋಗ್ಯದ ಕಾರಣದಿಂದ ಅವರು ರಾಜಕಾರಣದಿಂದ ದೂರವೇ ಉಳಿದಿದ್ದರು. ಅಲ್ಲದೆ, ವೈದ್ಯರು ಕೂಡ ಇಂತಹ ಆರೋಗ್ಯ ಪರಿಸ್ಥಿತಿಯಲ್ಲಿ ರಾಜಕೀಯದಿಂದ ದೂರ ಇರುವುದೇ ಉತ್ತಮ ಎಂಬ ಸಲಹೆ ನೀಡಿದ್ದರು.

ಆದರೆ ಕೆಲವು ವಾರಗಳ ಹಿಂದೆ ಅವರ ಬೆಂಬಲಿಗರು ಮತ್ತೆ ಸಕ್ರಿಯ ರಾಜಕೀಯದ ಬಗ್ಗೆ ಯೋಚನೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಜನಿ ಮಕ್ಕಳ್ ಮಂಡ್ರಂ ಪಕ್ಷದ ಪದಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಜನವರಿಯಲ್ಲಿ ನೂತನ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.

2021ರ ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ, ಜನವರಿಯಲ್ಲಿ ಸ್ಥಾಪನೆಯಾಗಲಿರುವ ತಮ್ಮದೇ ಆದ ಪ್ರಾದೇಶಿಕ ಪಕ್ಷದ ಮೂಲಕ ರಜನಿಕಾಂತ್ ರಾಜಕೀಯಕ್ಕೆ ಧುಮುಕಲಿದ್ದಾರಾ? ಎಂಬ ಕುತೂಹಲವೂ ಇದೆ. ರಜನಿಕಾಂತ್ ಅವರಿಗೆ ಕಿಡ್ನಿ ವೈಫಲ್ಯವಾಗಿ ಚಿಕಿತ್ಸೆ ಪಡೆದಿದ್ದರು. ಅವರ ಆರೋಗ್ಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಹೆಚ್ಚು ಪ್ರಯಾಣ ಮಾಡುವುದು, ಒತ್ತಡ ತೆಗೆದುಕೊಳ್ಳುವಂತಹ ಕೆಲಸಗಳಿಗೆ ಕೈ ಹಾಕದಿರುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ, ರಜನಿಕಾಂತ್ ರಾಜಕೀಯದಿಂದ ದೂರ ಸರಿಯಲಿದ್ದಾರೆ ಎನ್ನಲಾಗಿತ್ತು.
Published by: Sushma Chakre
First published: December 3, 2020, 1:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories