• Home
 • »
 • News
 • »
 • national-international
 • »
 • ಪಶ್ಚಿಮಬಂಗಾಳ ಚುನಾವಣೆಗೂ ಮುನ್ನ ಟಿಎಂಸಿಯ ರಜಿಬ್ ಬ್ಯಾನರ್ಜಿ ಸೇರಿ ಐವರು ಮುಖಂಡರು ಬಿಜೆಪಿ ತೆಕ್ಕೆಗೆ

ಪಶ್ಚಿಮಬಂಗಾಳ ಚುನಾವಣೆಗೂ ಮುನ್ನ ಟಿಎಂಸಿಯ ರಜಿಬ್ ಬ್ಯಾನರ್ಜಿ ಸೇರಿ ಐವರು ಮುಖಂಡರು ಬಿಜೆಪಿ ತೆಕ್ಕೆಗೆ

ಬಿಜೆಪಿ ಸೇರ್ಪಡೆಯಾದ ಟಿಎಂಸಿ ಮಾಜಿ ಮುಖಂಡರಾದ ರಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥಿನ್ ಚಕ್ರಬೊರ್ಥಿ ಹಾಗೂ ರುದ್ರನಿಲ್ ಘೋಷ್ ಅವರು ದೆಹಲಿಯಲ್ಲಿ ಅಮಿತ್ ಶಾ ಅವರೊಂದಿಗೆ.

ಬಿಜೆಪಿ ಸೇರ್ಪಡೆಯಾದ ಟಿಎಂಸಿ ಮಾಜಿ ಮುಖಂಡರಾದ ರಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥಿನ್ ಚಕ್ರಬೊರ್ಥಿ ಹಾಗೂ ರುದ್ರನಿಲ್ ಘೋಷ್ ಅವರು ದೆಹಲಿಯಲ್ಲಿ ಅಮಿತ್ ಶಾ ಅವರೊಂದಿಗೆ.

ನಾನು ಅಮಿತ್ ಶಾ ಅವರೊಂದಿಗೆ ಎರಡು ವಿಷಯಗಳನ್ನು ಹೇಳಿದ್ದೇನೆ. ಒಂದು ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತು ಕಾನೂನು ಸುವ್ಯವಸ್ಥೆ ಸುಧಾರಿಸುವುದು. ಮತ್ತು ಬಂಗಾಳದ ಯುವ ಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕರಣಕ್ಕೆ ಕೇಂದ್ರದಿಂದ ಬಂಗಾಳಕ್ಕೆ ವಿಶೇಷ ಅನುದಾನ ಘೋಷಿಸಬೇಕು ಎಂದು ರಜಿಬ್ ಬ್ಯಾನರ್ಜಿ ಅವರು ಹೇಳಿದರು.

ಮುಂದೆ ಓದಿ ...
 • Share this:

  ಕೋಲ್ಕತ್ತ; ತೃಣಮೂಲ ಕಾಂಗ್ರೆಸ್ ತೊರೆದ ಪಶ್ಚಿಮ ಬಂಗಾಳದ ಮಾಜಿ ಸಚಿವ ರಜಿಬ್ ಬ್ಯಾನರ್ಜಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿಯಲ್ಲಿ ಸಭೆ ನಡೆಸಿದ ಬಳಿಕ ಅವರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರೊಂದಿಗೆ ನಾಲ್ಕು ಮಂದಿ ಟಿಎಂಸಿ ಮಾಜಿ ಮುಖಂಡರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.

  ಟಿಎಂಸಿ ಮಾಜಿ ಮುಖಂಡರಾದ ರಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥಿನ್ ಚಕ್ರಬೊರ್ಥಿ ಹಾಗೂ ರುದ್ರನಿಲ್ ಘೋಷ್ ಶನಿವಾರ ಬಿಜೆಪಿ ಸೇರ್ಪಡೆಯಾದರು. ಸೋನಾರ್ ಬಾಂಗ್ಲಾಗಾಗಿ ಬಿಜೆಪಿಯ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

  ರಜಿಬ್ ಬ್ಯಾನರ್ಜಿ, ಬೈಶಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥಿನ್ ಚಕ್ರಬೊರ್ಥಿ ಹಾಗೂ ಪಾರ್ಥಸಾರಥಿ ಚಟರ್ಜಿ ಅವರು ಬಿಜೆಪಿಯ ಮುಕುಲ್ ರಾಯ್ ಮತ್ತು ಕೈಲಾಶ್ ವಿಜಯ್ ವಾರ್ಗಿಯಾ ಅವರೊಂದಿಗೆ ಶನಿವಾರ ರಾತ್ರಿ ದೆಹಲಿಗೆ ತೆರಲಿ ಅಮಿತ್ ಶಾ ಅವರನ್ನು ಭೇಟಿಯಾದರು.  ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ವಿಜಯವಾರ್ಗಿಯಾ ಅವರು ಮಾತನಾಡಿ, ಬಂಗಾಳದ ಮಾಜಿ ಅರಣ್ಯ ಸಚಿವರಾದ ಬ್ಯಾನರ್ಜಿ ಅವರು ದೊಮಜೂರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.

  ಇದನ್ನು ಓದಿ: Mamata Banerjee: ಬಂಗಾಳದಲ್ಲಿ ಮುಗಿಯದ ಪಕ್ಷಾಂತರ ಪರ್ವ; ಟಿಎಂಸಿ ಪಕ್ಷದ ಓರ್ವ ಸಚಿವ ಸೇರಿ 4 ಜನ ಶಾಸಕರು ಬಿಜೆಪಿ ಕಡೆಗೆ!

  ಯಾವುದೇ ರಾಜ್ಯ ಕೇಂದ್ರ ಸರ್ಕಾರದ ಬೆಂಬಲ ಇಲ್ಲದೆ ಅಭಿವೃದ್ಧಿ ಹೊಂದುವುದು ಅಸಾಧ್ಯ. ಪಶ್ಚಿಮ ಬಂಗಾಳದ ಅಭಿವೃದ್ಧಿಗೂ ಸಹ ಕೇಂದ್ರ ಸರ್ಕಾರದ ಬೆಂಬಲ ಬೇಕು ಎಂದು ರಜಿಬ್ ಬ್ಯಾನರ್ಜಿ ಅವರು ಬಿಜೆಪಿ ಸೇರ್ಪಡೆಗೊಂಡ ಬಳಿಕ ದೆಹಲಿಯಲ್ಲಿ ಹೇಳಿದರು.

  ನಾನು ಅಮಿತ್ ಶಾ ಅವರೊಂದಿಗೆ ಎರಡು ವಿಷಯಗಳನ್ನು ಹೇಳಿದ್ದೇನೆ. ಒಂದು ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತು ಕಾನೂನು ಸುವ್ಯವಸ್ಥೆ ಸುಧಾರಿಸುವುದು. ಮತ್ತು ಬಂಗಾಳದ ಯುವ ಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕೈಗಾರಿಕರಣಕ್ಕೆ ಕೇಂದ್ರದಿಂದ ಬಂಗಾಳಕ್ಕೆ ವಿಶೇಷ ಅನುದಾನ ಘೋಷಿಸಬೇಕು ಎಂದು ರಜಿಬ್ ಬ್ಯಾನರ್ಜಿ ಅವರು ಹೇಳಿದರು.

  Published by:HR Ramesh
  First published: