Rajasthan: ರಾಜಸ್ಥಾನದ ಆರು ಜಿಲ್ಲೆಗಳಲ್ಲಿ ಜಿಲ್ಲಾ ಪರಿಷತ್ (zila parishad) ಮತ್ತು ಪಂಚಾಯತ್ ಸಮಿತಿ ಚುನಾವಣೆಗಳ ಮತ ಎಣಿಕೆ ಶನಿವಾರ ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರು ಜಿಲ್ಲೆಗಳಲ್ಲಿ 200 ಜಿಲ್ಲಾ ಪರಿಷತ್ ಸದಸ್ಯರು, 1,564 ಪಂಚಾಯತ್ ಸಮಿತಿ ಸದಸ್ಯರು, 6 ಜಿಲ್ಲಾ ಪ್ರಮುಖರು ಮತ್ತು ಅವರ ನಿಯೋಗಿಗಳು ಮತ್ತು 78 ಪ್ರಧಾನ್ ಗಳನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಾಗಿದೆ ಎಂದು ಚುನಾವಣಾ ಆಯುಕ್ತ ಪಿ ಎಸ್ ಮೆಹ್ರಾ ಹೇಳಿದ್ದಾರೆ.
ಈ ಪೈಕಿ ಒಬ್ಬ ಜಿಲ್ಲಾ ಪರಿಷತ್ ಸದಸ್ಯರು ಮತ್ತು 26 ಪಂಚಾಯಿತಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
199 ಜಿಲ್ಲಾ ಪರಿಷತ್ ಮತ್ತು 1,537 ಪಂಚಾಯಿತಿ ಸಮಿತಿ ಸದಸ್ಯರ ಫಲಿತಾಂಶಗಳನ್ನು ಶನಿವಾರ ಪ್ರಕಟಿಸಲಾಗುವುದು, ಮತಗಳ ಎಣಿಕೆಯು ಆಯಾ ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.
ಮೆಹ್ರಾ ಪ್ರಕಾರ, ಎಲ್ಲಾ ಮೂರು ಹಂತಗಳಲ್ಲಿ, ಶೇಕಡಾ 64.40 ರಷ್ಟು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಮಾತ್ರ ಎಣಿಕೆ ಕೇಂದ್ರಗಳಲ್ಲಿ ನಿಯೋಜಿಸಲಾಗುವುದು ಎಂದು ಅವರು ಹೇಳಿದರು.
ಬೆಳಗಾವಿ ಮಹಾನಗರ ಪಾಲಿಕೆ ಮತದಾನ ಪ್ರಕ್ರಿಯೆ (Belgaum Municipal Corporation Election voting) ಶುಕ್ರವಾರ ಮುಕ್ತಾಯಗೊಂಡಿದ್ದು, ಬೆಳಗಾವಿ ಪಾಲಿಕೆಗೆ ಇದೇ ಮೊದಲ ಸಲ ಪಕ್ಷಗಳ ಆಧಾರದ ಮೇಲೆ ಚುನಾವಣೆ ನಡೆದಿದೆ.
ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ವರೆಗೆ ಮತದಾನ ಪ್ರಕ್ರಿಯೆ ನಡೆದಿದೆ. ಬಹುತೇಕ ಶಾಂತ ರೀತಿಯಲ್ಲಿ ಮತದಾನ ನಡೆದಿದ್ದು, ಸಣ್ಣಪುಟ್ಟ ಗೊಂದಲಗಳು ಸೃಷ್ಠಿಯಾಗಿದ್ದವು. ಬೆಳಗಾವಿ ನಗರದಲ್ಲಿ ಇಂದು ಚುನಾವಣೆಯಲ್ಲಿ ಶೇ. 50.41ರಷ್ಟು ಮತದಾನ ನಡೆದಿದೆ. ಕಡಿಮೆ ಮತದಾನ ಆಗಿರುವ ಹಿನ್ನಲೆ ಯಾರಿಗೆ ಲಾಭ, ಯಾರಿಗೆ ನಷ್ಟ ಎಂಬ ಲೆಕ್ಕಚಾರಗಳು ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಎಂಇಎಸ್ ಗೆ ಈ ಚುನಾವಣೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಇದನ್ನೂ ಓದಿ: Madhya Pradesh: ಸರ್ಕಾರಿ ನೇಮಕಾತಿಗಳಲ್ಲಿ OBCಗಳಿಗೆ ಶೇ 27 ಮೀಸಲಾತಿ ಘೋಷಿಸಿದ ಮಧ್ಯಪ್ರದೇಶ ಸರ್ಕಾರ
ಬೆಳಗಾವಿಯಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ ಶೇ 50.41ರಷ್ಟು ಮತದಾನ ಆಗಿದ್ದು, ಇದೇ ತಿಂಗಳ 6ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 385 ಜನ ಅಭ್ಯರ್ಥಿಗಳ ಭವಿಷ್ಯ ಶೀಘ್ರ ನಿರ್ಧಾರವಾಗಲಿದೆ. ಕಾಂಗ್ರೆಸ್, ಬಿಜೆಪಿಗೆ ಎಂಎಇಸ್ ಈ ಸಲದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ