ಹೋಟೆಲ್​ಗೆ ಕರೆಸಿ ಪೋರ್ನ್ ವಿಡಿಯೋ ಮಾಡಿದ್ಳು; ಲೋನ್ ನೆಪದಲ್ಲಿ 44ರ ಆಂಟಿಯ ಸಂಚಿನ ಕಥೆ

Honey Trap- ಪ್ರಾಜೆಕ್ಟ್​ಗೆ ಸಾಲ ಪಡೆಯುವುದಾಗಿ ಹೇಳಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ನ ಮ್ಯಾನೇಜರ್​ನನ್ನು ಹೋಟೆಲ್ ರೂಮಿಗೆ ಕರೆಸಿ ಅಶ್ಲೀಲವಾಗಿ ವರ್ತಿಸಿ ವಿಡಿಯೋ ರೆಕಾರ್ಡ್ ಮಾಡಿದ ಈ ಮಹಿಳೆ ನಂತರ ಮಾಡಿದ್ದ ಬ್ಲ್ಯಾಕ್ ಮೇಲ್ ಕೆಲಸ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • News18
 • Last Updated :
 • Share this:
  ಜೈಪುರ: ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank Manager) ಮ್ಯಾನೇಜರ್ ಒಬ್ಬನನ್ನು ಹೋಟೆಲಿಗೆ ಕರೆಸಿಕೊಂಡ ಖತರ್ನಾಕ್ ಮಹಿಳೆ(Woman)ಯ ಕಥೆ ಇದು. ಮ್ಯಾನೇಜರ್ ನನ್ನು ಹೋಟೆಲಿಗೆ ಕರೆಸಿಕೊಂಡು ಅಶ್ಲೀಲ ವಿಡಿಯೋ ಮಾಡಿ ಹನಿಟ್ರ್ಯಾಪ್ (honey-trapping) ಮಾಡಲು ಮುಂದಾಗಿ ಪೊಲೀಸರ ಅತಿಥಿಯಾಗಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಹಿಂದೆಯೂ ಮಹಿಳೆ ಇದೇ ರೀತಿ ಪುರುಷರನ್ನ ಕರೆಸಿಕೊಂಡು ಹನಿಟ್ರ್ಯಾಪ್ ವ್ಯೂಹದಲ್ಲಿ ಸಿಲುಕಿಸಿ ಹಣ ಕಿತ್ಕೊಂಡಿದ್ದಳು. ನಂತರ ಜೈಲುವಾಸ ಅನುಭವಿಸಿ ದೆಹಲಿಯಿಂದ ಜೈಪುರಗೆ ಬಂದೂ ಅದೇ ರೀತಿ ಹಣ ದೋಚಲು ಮುಂದಾಗಿದ್ದಳು.

  ಯಾರು ಈ ಆಂಟಿ? ಏನಿದು ಪ್ರಕರಣ?

  ಜೈಪುರದ (Jaipur) ಭರತಪುರದಲ್ಲಿ ವಾಸವಾಗಿದ್ದ 44 ವರ್ಷದ ಸೀಮಾ ಶರ್ಮಾ ಮೂಲತಃ ದೆಹಲಿಯ ಉತ್ತಮನಗರದ ನಿವಾಸಿ. ಕಳೆದ ಕೆಲ ತಿಂಗಳಿನಿಂದ ಜೈಪುರದಲ್ಲಿ ವಾಸವಾಗಿದ್ದ ಸೀಮಾ ಹಣ ದೋಚಲು ವ್ಯಕ್ತಿಯೋರ್ವನನ್ನು ಹುಡುಕುತ್ತಿದ್ದಳು. ಈ ವೇಳೆ ಆಕೆಯ ಕಣ್ಣಿಗೆ ಬಿದ್ದಿದ್ದು 52 ವರ್ಷದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮ್ಯಾನೇಜರ್ (Bank Manager). ಆತನ ಗೆಳೆಯನ ಮೂಲಕವೇ ಮ್ಯಾನೇಜರ್ ಪರಿಚಯ ಮಾಡಿಕೊಂಡಿದ್ದ ಪ್ರೊಜೆಕ್ಟ್ ಗಾಗಿ ಸಾಲ ಪಡೆದುಕೊಳ್ಳುವ ಕುರಿತಾಗಿ ಮಾತನಾಡಲು ಮ್ಯಾನೇಜರ್ ನನ್ನು ಕರೆಸಿಕೊಂಡಿದ್ದಾಳೆ.

  ಹೋಟೆಲ್ ನಲ್ಲಿ ಪಕ್ಕಾ ಪ್ಲಾನ್:

  ಬ್ಯಾಂಕ್ ಮ್ಯಾನೇಜರ್ ಬರುವ ಮೊದಲೇ ಹೋಟೆಲ್ (Hotel) ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿಕೊಂಡಿದ್ದಳು. ಮ್ಯಾನೇಜರ್ ಒಳಗೆ ಬರುತ್ತಿದ್ದಂತೆ ಆತನೊಂದಿಗೆ ಅಶ್ಲೀಲವಾಗಿ ನಡೆದುಕೊಂಡು ಎರಡು ವಿಡಿಯೋ ಮಾಡಿದ್ದಾಳೆ. ಮ್ಯಾನೇಜರ್ ಹೋಟೆಲ್ ನಿಂದ ಹೊರ ಹೋಗುತ್ತಿದ್ದಂತೆ ಕರೆ ಮಾಡಿದ ಸೀಮಾ, ಇಬ್ಬರ ಅಶ್ಲೀಲ ವಿಡಿಯೋ ಸೆರೆ ಹಿಡಿದಿರುವ ವಿಷಯ ತಿಳಿಸಿದ್ದಾಳೆ. ಈ ವಿಷಯ ಕೇಳುತ್ತಿದ್ದಂತೆ ಬ್ಯಾಂಕ್ ಮ್ಯಾನೇಜರ್ ಒಂದು ಕ್ಷಣ ಆತಂಕಕ್ಕೆ ಒಳಗಾಗಿದ್ದರು. ವಿಡಿಯೋ ವೈರಲ್ ಮಾಡದಿರಲು 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇರಿಸಿದ್ದಳು. ದೆಹಲಿಗೆ ಬಂದು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದಳು. ಆದ್ರೆ ಬ್ಯಾಂಕ್ ಮ್ಯಾನೇಜರ್ ತಿಳಿ ಹೇಳಿದ್ರೂ ತನ್ನ ಪಟ್ಟು ಸಡಿಸಲಿರಲಿಲ್ಲ. ಕೊನೆಯದಾಗಿ ಸೆಪ್ಟೆಂಬರ್ 27ರಂದು ವಿಧಾಯಕಪುರಿಗೆ ಠಾಣೆಗೆ ತೆರಳಿದ ಬ್ಯಾಂಕ್ ಮ್ಯಾನೇಜರ್ ಹನಿಟ್ರ್ಯಾಪ್ ದೂರು ನೀಡಿದ್ದರು.

  ಇದನ್ನೂ ಓದಿ: Teacher Sent Obscene Messages To Student: ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಶಿಕ್ಷಕನಿಗೆ ಬುದ್ಧಿ ಕಲಿಸಲು ವಿದ್ಯಾರ್ಥಿಗಳು ಮಾಡಿದ್ದೇನು?

  ಸಿನಿಮೀಯ ರೀತಿಯಲ್ಲಿ ಆಂಟಿ ಬಂಧನ:

  ದೂರು ದಾಖಲಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿನಿಮೀಯ ರೀತಿಯಲ್ಲಿ ಆಂಟಿಯನ್ನು ಬಂಧಿಸಿದ್ದಾರೆ. ಪೊಲೀಸರ ಸೂಚನೆಯಂತೆ ಸೀಮಾಗೆ ಕರೆ ಮಾಡಿದ ಬ್ಯಾಂಕ್ ಮ್ಯಾನೇಜರ್ ಹಣ ಅರೇಂಜ್ ಮಾಡಿಕೊಂಡಿದ್ದು ಎಲ್ಲಿ ತಲುಪಿಸಬೇಕು ಎಂದು ಕೇಳಿದಾಗ ಭರತಪುರಕ್ಕೆ ಬರುವಂತೆ ಹೇಳಿದ್ದಾಳೆ. ಬ್ಯಾಂಕ್ ಮ್ಯಾನೇಜರ್ ಜೊತೆ ಪೊಲೀಸರು ಸಹ ಮಾರುವೇಷದಲ್ಲಿ ಹೋಗಿದ್ದರು. ಆದ್ರೆ ಭರತಪುರ ಹೋಗುತ್ತಿದ್ದಂತೆ ಪ್ಲಾನ್ ಬದಲಿಸಿದ ಸೀಮಾ ಅಲ್ವಾರಾಗೆ ಬರುವಂತೆ ಹೇಳಿದ್ದಾಳೆ. ಆದ್ರೆ ಅಲ್ಲಿಯೂ ಆಕೆ ಬಂದಿರಲಿಲ್ಲ. ಕೊನೆಗೆ ಕರೆ ಮಾಡಿದ ಸೀಮಾ, ತಾನೇ ಜೈಪುರಕ್ಕೆ ಬರುತ್ತಿರೋದಾಗಿ ತಿಳಿಸುತ್ತಾಳೆ. ಪೊಲೀಸರ ಹೆಣೆದ ಬಲೆಯಲ್ಲಿ ತಾನೇ ಬಂದು ಬೀಳುತ್ತಾಳೆ.

  ಜೈಪುರಿಗೆ ಬಂದ ಸೀಮಾ ಬ್ಯಾಂಕ್ ಮ್ಯಾನೇಜರ್ ನನ್ನು ರಾಜಾಪಾರ್ಕ್​ಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಯಾವುದೇ ತಪ್ಪು ಮಾಡದೇ ಪೊಲೀಸರು ಸೀಮಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೇಟಿಯಾಗುತ್ತಿದ್ದಂತೆ ಸೀಮಾ ಹಣ ಕೇಳಿದ್ದಾಳೆ. ಮ್ಯಾನೇಜರ್ ಒಂದು ಲಕ್ಷ ರೂ. ನೀಡಿದ್ದಕ್ಕೆ ಕೋಪಗೊಂಡು ಶೀಘ್ರದಲ್ಲಿಯೇ ಉಳಿದ ಹಣ ನೀಡುವಂತೆ ತಾಕೀತು ಮಾಡಿ ಹೋಗುತ್ತಿರುವಾಗ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: