New Traffic Rules: ಓವರ್ ಲೋಡ್​ ಮಾಡಿದ ಲಾರಿ ಮಾಲೀಕನಿಗೆ 1.41 ಲಕ್ಷ ದಂಡ..!

ಮೊನ್ನೆ ಒಡಿಶಾದ ಲಾರಿ ಚಾಲಕನೊಬ್ಬ ಡಿಲ್​ ಇಲ್ಲದ ಕಾರಣಕ್ಕೆ, ಓವರ್​ ಲೋಡ್​ ಮಾಡಿದ್ದ ಕಾರಣಕ್ಕೆ ಸುಮಾರು 80 ಸಾವಿರಕ್ಕೂ ಹೆಚ್ಚು ದಂಡ ಕಟ್ಟಿದ್ದ. 

Latha CG | news18-kannada
Updated:September 11, 2019, 2:44 PM IST
New Traffic Rules: ಓವರ್ ಲೋಡ್​ ಮಾಡಿದ ಲಾರಿ ಮಾಲೀಕನಿಗೆ 1.41 ಲಕ್ಷ ದಂಡ..!
ಸಾಂದರ್ಭಿಕ ಚಿತ್ರ
Latha CG | news18-kannada
Updated: September 11, 2019, 2:44 PM IST
ರಾಜಸ್ಥಾನ(ಸೆ.11): ಹೊಸ ಟ್ರಾಫಿಕ್​ ನಿಯಮದಡಿ ಸಂಚಾರಿ ನಿಯಮ ಪಾಲಿಸದ ವಾಹನ ಸವಾರರು ದಂಡ ಕಟ್ಟುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹೊಸ ಮೋಟಾರು ವಾಹನ ಕಾಯ್ದೆ ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. ದಂಡದ ಪ್ರಮಾಣ ಹತ್ತು ಪಟ್ಟು ಜಾಸ್ತಿಯಾಗಿದೆ. ಇದರಿಂದಾಗಿ ವಾಹನ ಸವಾರರು ರಸ್ತೆಗಿಳಿಯಲು ಹೆದರುತ್ತಿದ್ದಾರೆ.

ರಾಜಸ್ಥಾನದಲ್ಲಿ ಪ್ರಕರಣವೊಂದು ವರದಿಯಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಲಾರಿ ಮಾಲೀಕ ಸುಮಾರು 1,41,000 ದಂಡ ಕಟ್ಟಿದ್ದಾರೆ. ಇದು ಅತೀ ದೊಡ್ಡ ಮೊತ್ತದ ದಂಡವಾಗಿದೆ ಎನ್ನಲಾಗಿದೆ. ಲಾರಿ ಮಾಲೀಕ ಭಗವಾನ್​ ರಾಮ್ ಸಂಚಾರಿ ನಿಯಮಗಳಡಿ​ ಬರೋಬ್ಬರಿ 1,41,000 ದಂಡ ಕಟ್ಟಿದ್ದಾರೆ. ಇದಕ್ಕೆ ಕಾರಣ ಲಾರಿಗೆ ಓವರ್​ ಲೋಡ್​ ಮಾಡಿದ್ದು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಟ್ರಾಫಿಕ್​ ದಂಡ ಕಟ್ಟಿದ್ದು ರಾಜಸ್ಥಾನದ ವ್ಯಕ್ತಿಯಾಗಿದ್ದಾರೆ.ಮೊನ್ನೆ ಒಡಿಶಾದ ಲಾರಿ ಚಾಲಕನೊಬ್ಬ ಡಿಲ್​ ಇಲ್ಲದ ಕಾರಣಕ್ಕೆ, ಓವರ್​ ಲೋಡ್​ ಮಾಡಿದ್ದ ಕಾರಣಕ್ಕೆ ಸುಮಾರು 80 ಸಾವಿರಕ್ಕೂ ಹೆಚ್ಚು ದಂಡ ಕಟ್ಟಿದ್ದ. ಚಾಲಕನಿಗೆ ಟ್ರಾಫಿಕ್​ ನಿಯಮ ಉಲ್ಲಂಘನೆ ಅಡಿಯಲ್ಲಿ  ಪೊಲೀಸರು ಬರೋಬ್ಬರಿ 86,500 ರೂ. ದಂಡ ವಿಧಿಸಿದ್ದರು. ನಾಗಪುರ ರಿಜಿಸ್ಟ್ರೇಷನ್​ ಲಾರಿ​​ ಚಾಲಕ ಅಶೋಕ್​ ಯಾದವ್ ಪೊಲೀಸರಿಗೆ ಟ್ರಕ್​ಗೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ನೀಡದಿದ್ದ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ದಂಡ ಬಿದ್ದಿದೆ ಎನ್ನಲಾಗಿತ್ತು.

ಟ್ರಾಫಿಕ್​ ನಿಯಮ ಉಲ್ಲಂಘನೆ; ಒಡಿಶಾದ ಲಾರಿ ಚಾಲಕನಿಗೆ ಬಿದ್ದ ದಂಡ ಬರೋಬ್ಬರಿ 86,500 ರೂ.

ಮೊನ್ನೆ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಕೂಡ ಮುಂಬೈನಲ್ಲಿ ವೇಗವಾಗಿ ವಾಹನ ಚಲಾಯಿಸಿದ ಕಾರಣಕ್ಕೆ ದಂಡ ಕಟ್ಟಿದ್ದೆ ಎಂದು ಹೇಳಿದ್ದರು. "ರಸ್ತೆ ಸಾರಿಗೆ ಸಚಿವನಾಗಿರುವ ನನ್ನ ಕಾರು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸುತ್ತಿತ್ತು ಎಂಬ ಕಾರಣಕ್ಕೆ ದಂಡ ಹಾಕಿದ್ದಾರೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ ಎಂದಿದ್ದಾರೆ. ಅತಿಯಾದ ವೇಗದಿಂದ ಓಡುತ್ತಿದ್ದ ನಿತಿನ್ ಗಡ್ಕರಿ ಅವರ ಖಾಸಗಿ ಕಾರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದಾರೆ" ಎಂದು ಹೇಳಿದ್ದರು.

First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...