ಒಂದು ಬಾರಿ ಪ್ರೀತಿಯಲ್ಲಿ ಬಿದ್ದರೆ ಎಂತಹ ಕಲ್ಲು ಮನಸ್ಸು ಹೊಂದಿರುವವರು ಸಹ ಕರಗಿ ಹೋಗುತ್ತಾರೆ. ಪ್ರೀತಿಯಲ್ಲಿ ಬಿದ್ದವರು ಲೋಕವನ್ನೇ ಮರೆತು ಹೋಗಿರುತ್ತಾರೆ. ಕೆಲವರು ಪ್ರೀತಿ (Love) ಮಾಡಿ ಜೀವನದಲ್ಲಿ ಸರಿಯಾದ ದಾರಿಯಲ್ಲಿ ಸಾಗಿದರೆ, ಇನ್ನೂ ಕೆಲವರು ಪ್ರೀತಿಯಿಂದ ಜೀವನವನ್ನು ನಾಶ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿದೆ. ಪ್ರೀತಿ ಎಷ್ಟು ಸುಂದರವಾಗಿರುತ್ತದೆಯೋ, ಅಷ್ಟೇ ಅಪಾಯ ಕೂಡ. ಇದಕ್ಕೆ ಸಾಕ್ಷಿ ಎಂಬಂತೆ ಹುಡುಗನೊಬ್ಬ ತನ್ನ ಪ್ರೇಯಸಿ (Lover) ಬೇರೆ ಯುವಕನನ್ನು (Rajathan Boy) ಮದುವೆಯಾದಳು (Marriage) ಎಂಬ ಕಾರಣಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ.
ಹೌದು, ಓದುವ ವಯಸ್ಸಿನಲ್ಲಿಯೇ ಪ್ರೀತಿಯಲ್ಲಿ ಸಿಲುಕಿದ 17 ವರ್ಷದ ಹುಡುಗನೊಬ್ಬ ಈಗ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸಣ್ಣ ವಯಸ್ಸಿನಲ್ಲಿಯೇ ಪ್ರೀತಿಯ ಬಲೆಗೆ ಬಿದ್ದ, ಬಾಳಿ ಬದುಕಬೇಕಾಗಿದ್ದ ಹುಡುಗ ಈಗ ಕೊನೆಯುಸಿರೆಳೆದಿದ್ದಾನೆ. ಮತ್ತೊಂದೆಡೆ, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಘಟನೆ
ತಾನು ಪ್ರೀತಿಸುತ್ತಿದ್ದ ಗೆಳತಿ ಬೇರೊಬ್ಬನನ್ನು ಮದುವೆಯಾದಳು ಎಂಬ ಕಾರಣಕ್ಕೆ 17 ವರ್ಷದ ಹುಡುಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ. ಗುರುವಾರ ರಾತ್ರಿ ಮಹಾತ್ಮ ಗಾಂಧಿ ಆಸ್ಪತ್ರೆಯ ಆವರಣದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವು
ಮೃತ ಬಾಲಕನನ್ನು ಕೆಲವು ದಾರಿಹೋಕರು ಯಶ್ ವ್ಯಾಸ್ ಎಂದು ಗುರುತಿಸಿದ್ದಾರೆ. ನಂತರ ಆತನನ್ನು ದಾರಿಹೋಕರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಬಾಲಕ ಮೃತಪಟ್ಟಿದ್ದಾನೆ ಎಂದು ಸರ್ಕಲ್ ಆಫೀಸರ್ (ಭಿಲ್ವಾರಾ ನಗರ) ನರೇಂದ್ರ ದೈಮಾ ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ವೇಳೆ ಮೃತ ಬಾಲಕ ಯಶ್ ವ್ಯಾಸ್ ಮತ್ತು ಬಾಲಕಿ ಇಬ್ಬರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಬಾಲಕ ಸಾಯುವ ಮುನ್ನ ತನ್ನ ಗೆಳತಿ ಮದುವೆಯಾಗುತ್ತಿರುವ ವಿಚಾರವಾಗಿ ಅಸಮಾಧಾನಗೊಂಡು ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಗನನ್ನು ಕಳೆದುಕೊಂಡು ಹೆತ್ತವರ ಕಣ್ಣೀರು
ಇದೀಗ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಆತನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಪ್ರೀತಿ ಹಿಂದೆ ಬಿದ್ದ ಹುಡುಗ ಸಾವನ್ನಪ್ಪಿದ್ದು, ಇಷ್ಟು ವರ್ಷ ಸಾಕಿ, ಸಲುಹಿದ್ದ ಮಗನನ್ನು ಕಳೆದುಕೊಂಡ ಹೆತ್ತವರು ಕಣ್ಣೀರಿಡುತ್ತಿದ್ದಾರೆ.
ಮಧ್ಯಪ್ರದೇಶದಲ್ಲೊಂದು ತದ್ವಿರುದ್ಧ ಕೇಸ್
ಮತ್ತೊಂದೆಡೆ ಇದಕ್ಕೆ ತದ್ವಿರುದ್ಧ ಎಂಬಂತೆ ಮಧ್ಯಪ್ರದೇಶದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಗೆ ಪ್ರಿಯಕರನೇ ಚಾಕು ಇರಿಸಿರುವ ಘಟನೆ ನಡೆದಿದೆ.
ಶುಕ್ರವಾರ ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯುವಕನೇ ಸುಪಾರಿ ನೀಡಿ ಅಟ್ಯಾಕ್ ಮಾಡಿಸಿದ್ದಾನೆ. ಇದೀಗ 20 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಚಾಕು ಇರಿತ
ಚಾಕುವಿನಿಂದ ದಾಳಿಗೊಳಗಾದ ಬಾಲಕಿಯನ್ನು 10ನೇ ತರಗತಿ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದ್ದು, ಡಿಸೆಂಬರ್ 7 ರಂದು ಜಿಲ್ಲೆಯ ಘಾಮಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿ ತನ್ನ ಕೋಚಿಂಗ್ ತರಗತಿಗಳಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಇದನ್ನೂ ಓದಿ: Bengaluru: ಪತ್ನಿಯನ್ನ ಗೆಳೆಯರ ಜೊತೆ ಮಲಗಿಸಿ ವಿಡಿಯೋ ಮಾಡಿದ ವಿಕೃತ ಟೆಕ್ಕಿ ಅರೆಸ್ಟ್
ವರದಿಗಳ ಪ್ರಕಾರ ಆರೋಪಿ ವಿಶಾಲ್ ಕೇವತ್ ಬಾಲಕಿಯನ್ನು ಪ್ರೀತಿಸುತ್ತಿದ್ದ. ನಂತರ ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಹುಡುಗಿ ಅವನ ಮುಂಗಡವನ್ನು ತಿರಸ್ಕರಿಸಿದಾಗ, ಅವನು ತನ್ನ ಮೇಲೆ ದಾಳಿ ಮಾಡಲು ಅಪ್ರಾಪ್ತ ಯುವಕನನ್ನು ನೇಮಿಸಿಕೊಂಡನು. ಈ ಎಲ್ಲಾ ವಿಚಾರ ತನಿಖೆ ವೇಳೆ ಪೊಲೀಸರ ಮುಂದೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ