Viral Video: ಪ್ಲೀಸ್, ನನಗೇ ಮತ ಹಾಕಿ; ಯುವತಿಯರ ಕಾಲಿಗೆ ಬಿದ್ದು ಮತಯಾಚನೆ

ಈ ವಿಡಿಯೋ ಕ್ಲಿಪ್ ಅನ್ನು ಅನ್‌ಸೀನ್ ಇಂಡಿಯಾ ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಸಖತ್ ವೈರಲ್ ಆಗಿದೆ.

ನನಗೇ ವೋಟ್ ಮಾಡಿ..

ನನಗೇ ವೋಟ್ ಮಾಡಿ..

 • Share this:
  ಚುನಾವಣೆ ಬಂತೆಂದ್ರೆ ಸಾಕು, ಅಭ್ಯರ್ಥಿಗಳು ಮತ ಸೆಳೆಯಲು ಏನು ಬೇಕಾದ್ರೂ ಮಾಡ್ತಾರೆ. ಈ ಮಾತಿಗೆ ಇನ್ನೊಂದು ತಾಜಾ ತಾಜಾ ಉದಾಹರಣೆ ಇದೀಗ ವರದಿಯಾಗಿದೆ. ಅದೂ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಲ್ಲ, ವಿದ್ಯಾರ್ಥಿ ಸಂಘದ (Student Elections) ಚುನಾವಣೆಯಲ್ಲಿ! ಹೌದು, ರಾಜಸ್ಥಾನದ (Rajasthan) ಬರಾನ್‌ನಲ್ಲಿ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ವಿದ್ಯಾರ್ಥಿ ಸಂಘದ ಮುಖಂಡರು ವಿದ್ಯಾರ್ಥಿಗಳ ಕಾಲಿಗೆ ಬಿದ್ದು ತಮ್ಮ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಈ ಅಪೂರ್ವ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದವರೆಲ್ಲರೂ ಆಶ್ಚರ್ಯಚಕಿತರಾದ್ದಾರೆ. ಹೀಗೆ ಕಾಲಿಗೆ ಬಿದ್ದು ಮತ ಹಾಕಿ ಎಂದು ಮನವಿ ಮಾಡಿದ ದೃಶ್ಯಗಳು ಇದೀಗ ಭಾರೀ ವೈರಲ್ (Rajasthan Viral Video) ಆಗುತ್ತಿದೆ.

  ಈ ವಿಡಿಯೋ ಕ್ಲಿಪ್ ಅನ್ನು ಅನ್‌ಸೀನ್ ಇಂಡಿಯಾ ಎಂಬ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು ಸಖತ್ ವೈರಲ್ ಆಗಿದೆ.  ವೈರಲ್ ಆಗಿರುವ ವಿಡಿಯೋದಲ್ಲಿ ವಿದ್ಯಾರ್ಥಿ ಸಂಘದ ಮುಖಂಡರು ತಮ್ಮ ಬ್ಯಾಚ್‌ಮೇಟ್‌ಗಳೊಂದಿಗೆ ಮತಯಾಚನೆ ಮಾಡುವುದನ್ನು ಕಾಣಬಹುದು. ವಿದ್ಯಾರ್ಥಿ ಸಂಘದ ಮುಖಂಡರು ತಮಗೇ ಮತ ಹಾಕುವಂತೆ ಬಾಲಕಿಯರ ಕಾಲಿಗೆ ಬಿದ್ದು ಕೈಮುಗಿದು ಮನವಿ ಕೂಡ ಮಾಡಿದ್ದಾರೆ.

  ಎರಡು ವರ್ಷಗಳ ನಂತರ ಚುನಾವಣೆ
  ಎರಡು ವರ್ಷಗಳ ನಂತರ ಶುಕ್ರವಾರ ರಾಜಸ್ಥಾನದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿತ್ತು. ಶನಿವಾರ ಬೆಳಗ್ಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನದ ನಂತರ ಫಲಿತಾಂಶ ಹೊರಬೀಳಲಿದೆ.

  ಅಜ್ಜಿಯ ಮೃತದೇಹದ ಜೊತೆ ಕುಟುಂಬಸ್ಥರ ನಗುವ ಫೋಟೋ!
  ಯಾರಾದರೂ ಸತ್ತಾಗ ಅಳುವುದು ಸಹಜದ ರೂಢಿ. ಆದರೆ ಸದ್ಯ ಭಾರೀ ವೈರಲ್ ಆಗುತ್ತಿರುವ ಚಿತ್ರವೊಂದು ಈ ‘ಸಹಜ ರೂಢಿ’ಗೆ ಸೆಡ್ಡು ಹೊಡೆದಿದೆ! ಹೌದು, ಕೇರಳದ ಪತ್ತನಂತಿಟ್ಟದ ಮಲ್ಲಪಲ್ಲಿಯ ಕುಟುಂಬವೊಂದು ತಮ್ಮ ಮನೆಯ ವಯಸ್ಸಾದ ಮಹಿಳೆಯ ಶವಸಂಸ್ಕಾರದ ವೇಳೆ ನಗುತ್ತಿರುವ ಫೋಟೋ ಇದೀಗ ಭಾರೀ ಸದ್ದು ಮಾಡುತ್ತಿದೆ. ಈ ಕುಟುಂಬದ ಸದಸ್ಯರೇ ಆಗಿದ್ದ 95 ವರ್ಷದ ಮರಿಯಮ್ಮ  ಅವರು ಆಗಸ್ಟ್ 17 ರಂದು ನಿಧನರಾಗಿದ್ದರು. ಅವರ ಶವಪೆಟ್ಟಿಗೆಯ ಬಳಿ ಇಡೀ ಕುಟುಂಬ ನೆರೆದಿದ್ದು ಎಲ್ಲರೂ ನಗುನಗುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

  ಇದನ್ನೂ ಓದಿ: Senthil Balaji vs Savukku Shankar: ಯೂಟ್ಯೂಬರ್ ವಿರುದ್ಧ ಹೈಕೋರ್ಟ್​ನಲ್ಲಿ ಗೆದ್ದ ಸಚಿವ! ಏನಿದು ಪ್ರಕರಣ?

  ಅಜ್ಜಿಯ ಮೃತದೇಹದ ಜೊತೆಗೆ ಕ್ಲಿಕ್ಕಿಸಿರುವ ಎಲ್ಲರ ಮುಖದಲ್ಲೂ ನಗು ಬೀರುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋ ಸುತ್ತಮುತ್ತ ಇದೀಗ ನಾನಾ ರೀತಿಯ ಚರ್ಚೆಗಳು ಬಿರುಸಾಗಿ ಸಾಗಿವೆ.

  ಹಲವರಿಂದ ಮೆಚ್ಚುಗೆ-ಟೀಕೆ
  ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶವಸಂಸ್ಕಾರದ ವೇಳೆ ನಗುವ ಈ ಫೋಟೊವನ್ನು ಮೆಚ್ಚಿ ಕಮೆಂಟ್ ಮಾಡಿದ್ದರೆ ಇನ್ನು ಹಲವರು ವಿರೋಧಿಸಿದ್ದಾರೆ. ಮೃತಪಟ್ಟವರಿಗೆ ಖುಷಿಯ ವಿದಾಯ ಹೇಳಬೇಕು ಎಂಬುದು ಸ್ವಾಗತಿಸಿದವರ ವಾದವಾಗಿದ್ದರೆ, ಕುಟುಂಬದ ಸದಸ್ಯೆಯೇ ಮೃತಪಟ್ಟಾಗ ನಗುವುದಾದರೂ ಹೇಗೆ ಸಾಧ್ಯ? ನಗುವುದು ಎಷ್ಟು ಸರಿ? ಎಂದು ಪ್ರಶ್ನೆ ಎತ್ತಿದ್ದಾರೆ.

  ಇದನ್ನೂ ಓದಿ: Viral News: ಮದುವೆ ದುಡ್ಡಲ್ಲಿ ರಸ್ತೆ ನಿರ್ಮಿಸಿದ ಟೆಕ್ಕಿ! ಈತನೇ ನಿಜವಾದ ಶ್ರೀಮಂತ!

  ಅಷ್ಟಕ್ಕೂ ಈ ನಗುವಿಗೆ ಏನು ಕಾರಣ?
  ಹೀಗೆ ನಾನಾ ವಿಧದ ಪ್ರತಿಕ್ರಿಯೆಗಳ ನಂತರ ಸ್ವತಃ ಕುಟುಂಬದ ಸದಸ್ಯರೇ ಶವಪೆಟ್ಟಿಗೆಯ ಬಳಿ ನಗುತ್ತಾ ಫೋಟೋ ಕ್ಲಿಕ್ಕಿಸಿಕೊಂಡ ಕಾರಣವನ್ನು ವಿವರಿಸಿದ್ದಾರೆ. 95 ವರ್ಷಗಳ ಕಾಲ ಮರಿಯಮ್ಮ ಅವರು ಸಾಕಷ್ಟು ಪ್ರೀತಿಯನ್ನು ಕೊಟ್ಟು- ಸ್ವೀಕರಿಸಿ ನೆಮ್ಮದಿಯ ಜೀವನ ನಡೆಸಿದ್ದಾರೆ. ಕುಟುಂಬಸ್ಥರೆಲ್ಲ ಸೇರಿ ಆಕೆಯನ್ನು ಸಂತಸದಿಂದ ಬೀಳ್ಕೊಟ್ಟಿದ್ದೇವೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
  Published by:guruganesh bhat
  First published: