HOME » NEWS » National-international » RAJASTHAN SPEAKER CP JOSHI MOVE SC AGAINST HIGH COURT BREATHER TO PILOT SNVS

ರಾಜಸ್ಥಾನ ಹೈಡ್ರಾಮ; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲಿರುವ ಸ್ಪೀಕರ್

ಹೈಕೋರ್ಟ್​ನಿಂದ ಪ್ರಜಾತಂತ್ರ ವ್ಯವಸ್ಥೆಯ ಸಮತೋಲನದ ಸೂಕ್ಷ್ಮತೆ ಹಾಳಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ಥಾನ ಸ್ಪೀಕರ್ ಸಿ.ಪಿ. ಜೋಷಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಸ್ಪೆಷಲ್ ಲೀವ್ ಪೆಟಿಶನ್ ಹಾಕುತ್ತಿದ್ದಾರೆ.

Vijayasarthy SN | news18-kannada
Updated:July 22, 2020, 12:02 PM IST
ರಾಜಸ್ಥಾನ ಹೈಡ್ರಾಮ; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲಿರುವ ಸ್ಪೀಕರ್
ಸಿಪಿ ಜೋಷಿ
  • Share this:
ಜೈಪುರ್(ಜುಲೈ 22): ಸ್ಪೀಕರ್ ನೋಟಿಸ್ ವಿರುದ್ಧ ರಾಜಸ್ಥಾನ ರೆಬೆಲ್ ಕಾಂಗ್ರೆಸ್ ಶಾಸಕರ ಅರ್ಜಿ ವಿಚಾರದಲ್ಲಿ ಶುಕ್ರವಾರ ತೀರ್ಪು ಕೊಡುವವರೆಗೂ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸ್ಪೀಕರ್ ಸಿ.ಪಿ. ಜೋಷಿ ಅವರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಹೈಕೋರ್ಟ್ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷರು, “ಬಂಡಾಯ ಶಾಸಕರ ವಿಚಾರದಲ್ಲಿ ನಾವು ಯಾವುದೇ ಆದೇಶ ನೀಡಿಲ್ಲ. ಕೇವಲ ಶೋಕಾಸ್ ನೋಟೀಸ್ ಮಾತ್ರ ನೀಡಿದ್ದೇವೆ. ಈ ಹಂತದಲ್ಲಿ ಶಾಸಕರ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸಿದ್ದು ಯಾಕೆ?” ಎಂದು ಪ್ರಶ್ನೆ ಮಾಡಿದ್ದಾರೆ.

“ನೋಟೀಸ್ ಕೊಡಲು ಸ್ಪೀಕರ್ ಅವರಿಗೆ ಅಧಿಕಾರ ಇದೆ. ಸ್ಪೀಕರ್ ನಿರ್ಧಾರ ಬಂದ ಬಳಿಕ ನ್ಯಾಯಾಲಯದಲ್ಲಿ ಅದನ್ನು ಪರಾಮರ್ಶೆ ಮಾಡಬಹುದಿತ್ತು” ಎಂದು ಹೇಳಿದ ಸಿ.ಪಿ. ಜೋಷಿ, ರೆಬೆಲ್ ಶಾಸಕರು ಹೈಕೋರ್ಟ್​ನಲ್ಲಿ ಸಲ್ಲಿಸಿರುವ ಈ ಅರ್ಜಿಯು ಸಂವಿಧಾನದ ನಿಯಮಗಳಿಗೆ ಚ್ಯುತಿ ಮಾಡುವಂಥ ತಪ್ಪು ಮಾದರಿಗೆ ಎಡೆ ಮಾಡಿಕೊಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿನ್ ಪೈಲಟ್ ಸೇರಿದಂತೆ ರಾಜಸ್ಥಾನದ 19 ಕಾಂಗ್ರೆಸ್ ಶಾಸಕರು ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಸಂಪುಟದಲ್ಲಿದ್ದ ಪೈಲಟ್ ಮೊದಲಾದ ಕೆಲವರನ್ನು ಹೊರಹಾಕಲಾಗಿದೆ. ಹಾಗೆಯೇ, ಪಕ್ಷಾಂತರ ಕಾಯ್ದೆ ಅಡಿ ಈ 19 ರೆಬೆಲ್ ಶಾಸಕರಿಗೆ ಸ್ಪೀಕರ್ ಸಿ.ಪಿ. ಜೋಷಿ ಶೋಕಾಸ್ ನೋಟೀಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಪೈಲಟ್ ಮೊದಲಾದವರು ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಹೈಕೋರ್ಟ್ ವಿಚಾರಣೆ ವಿಳಂಬವಾಗುತ್ತಾ ಬಂದಿದ್ದು, ಇದೇ ಶುಕ್ರವಾರದಂದು ತೀರ್ಪು ಕಾಯ್ದಿರಿಸಿದೆ. ಅಲ್ಲಿಯವರೆಗೆ ಈ 19 ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್ ಸಿ.ಪಿ. ಜೋಷಿ ಅವರಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಚೀನಾ ಸರ್ಕಾರದಿಂದ ಕ್ರೈಸ್ತರ ದಬ್ಬಾಳಿಕೆ; ಶಿಲುಬೆ ಒಡೆದು ಕಮ್ಯೂನಿಸ್ಟ್‌ ನಾಯಕರ ಚಿತ್ರ ಹಾಕುವಂತೆ ಆದೇಶ

ರೆಬೆಲ್ ಶಾಸಕರ ಪರವಾಗಿ ಮುಕುಲ್ ರೋಹ್ಟಗಿ ವಾದ ಮಾಡುತ್ತಿದ್ದು, ಹೈಕೋರ್ಟ್​ಗೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಹಕ್ಕು ಇದೆ ಎಂದು ಪ್ರತಿಪಾದಿಸಿದ್ದಾರೆ.

ಇನ್ನು, ದ್ವಿಸದಸ್ಯ ಹೈಕೋರ್ಟ್ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ಸ್ಪೀಕರ್ ಜೋಷಿ ಅವರು ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಹಾಕುತ್ತಿದ್ದಾರೆ. ಸ್ಪೆಷಲ್ ಲೀವ್ ಪೆಟಿಶನ್ ಹಾಕಲಿರುವ ಅವರು ಇವತ್ತೇ ತಮ್ಮ ಅರ್ಜಿಯ ವಿಚಾರಣೆ ನಡೆಸಲು ಮನವಿ ಮಾಡಿಕೊಳ್ಳಲಿದ್ಧಾರೆ.

ಇದನ್ನೂ ಓದಿ: Covid Vaccine by AstraZeneca - ಡಿಸೆಂಬರ್​ನಲ್ಲೇ ಲಭ್ಯವಿರಲಿದೆ ಭಾರತದ ಈ ಕೋವಿಡ್-19 ಲಸಿಕೆಮತ್ತೊಂದು ಸಾಂವಿಧಾನಿಕ ಸಂಸ್ಥೆಗೆ ಹೈಕೋರ್ಟ್ ಆದೇಶ ಮಾಡಲು ಸಾಧ್ಯವಿಲ್ಲ. ಹೈಕೋರ್ಟ್ ನ್ಯಾಯಪೀಠದಿಂದ ಪ್ರಜಾತಂತ್ರ ಸಮತೋಲನದ ಸೂಕ್ಷ್ಮತೆಯೇ ನಾಶವಾಗುತ್ತದೆ. ಸ್ಪೀಕರ್ ಅವರ ಹಕ್ಕಿನ ಉಲ್ಲಂಘನೆ ಆಗಿದೆ ಎಂಬುದು ಸಿ.ಪಿ. ಜೋಷಿ ಅವರ ವಾದವಾಗಿದೆ. ಸ್ಪೀಕರ್ ನಿರ್ಧಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ ಎಂದು 1992ರಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
Published by: Vijayasarthy SN
First published: July 22, 2020, 11:47 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories