HOME » NEWS » National-international » RAJASTHAN SPEAKER CANT DISQUALIFY REBEL MLAS BEFORE SC ORDER IN WIN FOR PILOT CAMP SNVS

Rajasthan Crisis - ತನ್ನ ತೀರ್ಪು ಬರುವವರೆಗೂ ರೆಬೆಲ್ ಶಾಸಕರ ಮೇಲೆ ಕ್ರಮ ಕೈಗೊಳ್ಳದಿರಲು ಸ್ಪೀಕರ್​ಗೆ ಸುಪ್ರೀಂ ಸೂಚನೆ

ಪ್ರಜಾಪ್ರಭುತ್ವದಲ್ಲಿ ಭಿನ್ನಮತ ಇರಬಾರದಾ? ರಾಜಸ್ಥಾನ ಸ್ಪೀಕರ್ ಅವರನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ತನ್ನ ತೀರ್ಪು ಬರುವವರೆಗೂ ರೆಬೆಲ್ ಶಾಸಕರನ್ನು ಅನರ್ಹಗೊಳಿಸದಂತೆ ಆದೇಶ ನೀಡಿದೆ.

news18
Updated:July 23, 2020, 2:10 PM IST
Rajasthan Crisis - ತನ್ನ ತೀರ್ಪು ಬರುವವರೆಗೂ ರೆಬೆಲ್ ಶಾಸಕರ ಮೇಲೆ ಕ್ರಮ ಕೈಗೊಳ್ಳದಿರಲು ಸ್ಪೀಕರ್​ಗೆ ಸುಪ್ರೀಂ ಸೂಚನೆ
ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್
  • News18
  • Last Updated: July 23, 2020, 2:10 PM IST
  • Share this:
ನವದೆಹಲಿ(ಜುಲೈ 23): ರಾಜಸ್ಥಾನದಲ್ಲಿ ಸಚಿನ್ ಪೈಲಟ್ ನೇತೃತ್ವದ ಭಿನ್ನಮತ ಶಾಸಕರ ಗುಂಪು ಸದ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದೆ. ಸೋಮವಾರ ತನ್ನ ನ್ಯಾಯಪೀಠದಿಂದ ತೀರ್ಪು ಬರುವವರೆಗೂ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸ್ಪೀಕರ್ ಸಿ.ಪಿ. ಜೋಷಿ ಅವರಿಗೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ. ಹಾಗೆಯೇ, ರೆಬೆಲ್ ಶಾಸಕರ ಅರ್ಜಿ ವಿಚಾರಣೆಯಲ್ಲಿ ನಾಳೆ ರಾಜಸ್ಥಾನ್ ಹೈಕೋರ್ಟ್ ತೀರ್ಪು ನೀಡಲು ಸುಪ್ರೀಂ ಅನುಮತಿಸಿದೆ. ಆದರೆ, ಸುಪ್ರೀಂ ಕೋರ್ಟ್​ನಿಂದ ಅಂತಿಮ ತೀರ್ಪು ಬರುವವರೆಗೂ ಹೈಕೋರ್ಟ್ ತೀರ್ಪು ಚಾಲನೆಗೆ ಬರುವುದಿಲ್ಲ.

ರಾಜಸ್ಥಾನ ಸ್ಪೀಕರ್ ಸಿ.ಪಿ. ಜೋಷಿ ಅವರು ಪಕ್ಷಾಂತರ ಕಾಯ್ದೆ ಅಡಿ ಅನರ್ಹಗೊಳಿಸುವ ಎಚ್ಚರಿಕೆಯಾಗಿ 19 ರೆಬೆಲ್ ಶಾಸಕರಿಗೆ ನೋಟೀಸ್ ನೀಡಿದ್ದರು. ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಪೈಲಟ್ ಮತ್ತಿತರ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದರು. ನಾಳೆ ಶುಕ್ರವಾರ ಉಚ್ಚ ನ್ಯಾಯಾಲಯ ತೀರ್ಪು ನೀಡುತ್ತದೆ. ಅಲ್ಲಿಯವರೆಗೂ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಹೈಕೋರ್ಟ್ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸ್ಪೀಕರ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ರು. ರಾಜಸ್ಥಾನ ಹೈಕೋರ್ಟ್​ನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಿಂಧುತ್ವ ಇಲ್ಲ. ಇನ್ನೊಂದು ಸಾಂವಿಧಾನಿಕ ಸಂಸ್ಥೆಯ ಅಧಿಕಾರವನ್ನು ಮೊಟಕುಗೊಳಿಸುವ ಹಕ್ಕು ಹೈಕೋರ್ಟ್​ಗೆ ಇಲ್ಲ. ಅಲ್ಲದೇ, ತಾನು ಕೇವಲ ನೋಟೀಸ್ ಮಾತ್ರ ನೀಡಿದ್ದು. ಶಾಸಕರನ್ನು ಅನರ್ಹಗೊಳಿಸುವ ಕ್ರಮ ಕೈಗೊಂಡಿಲ್ಲ. ಅದಕ್ಕೂ ಮುನ್ನವೇ ಹೈಕೋರ್ಟ್ ಮಧ್ಯಪ್ರವೇಶಿಸುವುದು ಎಷ್ಟು ಸರಿ ಎಂದು ಸ್ಪೀಕರ್ ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಲಕ್ಷ ಹುದ್ದೆಗಳು ಖಾಲಿ ಇವೆ; ಆಡಳಿತ ನಡೆಸುವುದು ಕಷ್ಟವಾಗಿದೆ: ಸರ್ಕಾರದ ಕೂಗಿಗೆ ಕಿವಿಗೊಡದ ಸುಪ್ರೀಂ ಕೋರ್ಟ್

ಸ್ಪೀಕರ್ ಸಿಪಿ ಜೋಷಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸರ್ಕಾರವನ್ನ ಉರುಳಿಸಲು ಯತ್ನಿಸಿದ ಶಾಸಕರಿಗೆ ಹೆಚ್ಚು ಸಮಯ ಕೊಡಬಾರದು. ಹೈಕೋರ್ಟ್​ನ ವಿಚಾರಣೆಗೆ ತಡೆ ನೀಡಬೇಕು. ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯನ್ನು ಇಲ್ಲಿಗೇ ವರ್ಗ ಮಾಡಿ ಎಂದು ಮನವಿ ಮಾಡಿದರು.

ಆದರೆ, ಇದಕ್ಕೆ ಒಪ್ಪದ ಸುಪ್ರೀಂ ಕೋರ್ಟ್, ಭಿನ್ನಮತವನ್ನು ಹತ್ತಿಕ್ಕುವ ಪ್ರಯತ್ನವಾದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಮಾಡಿದಂತೆ. ಶಾಸಕರು ಜನರಿಂದ ಆರಿಸಲ್ಪಟ್ಟವರು. ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿತು. ಹಾಗೆಯೇ, ಹೈಕೋರ್ಟ್ ವಿಚಾರಣೆಯನ್ನು ವರ್ಗ ಮಾಡಲು ಈಗ ಸಾಧ್ಯವಿಲ್ಲ ಎಂದೂ ಕಪಿಲ್ ಸಿಬಲ್ ಅವರಿಗೆ ಸ್ಪಷ್ಟಪಡಿಸಿತು.

ಇದನ್ನೂ ಓದಿ: ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು?

ಶಾಸಕರ ವಿಚಾರವನ್ನು ಸ್ಪೀಕರ್ ನಿರ್ಧರಿಸಬೇಕೇ ವಿನಃ ಕೋರ್ಟ್ ಅಲ್ಲ. ಈ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದಕ್ಕೆ ಸಾಕ್ಷ್ಯಗಳಿವೆ ಎಂದು ಕಪಿಲ್ ಸಿಬಲ್ ವಾದಿಸಿದರು. ಆಗ ಸುಪ್ರೀಂ ನ್ಯಾಯಪೀಠ, ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದರೂ ಯಾಕೆ ಆ ಶಾಸಕರನ್ನು ಉಚ್ಛಾಟನೆ ಮಾಡಿಲ್ಲ? ನಿಮಗೆ ಒಂದು ದಿನ ಕಾಯಲು ಆಗುವುದಿಲ್ಲವಾ? ಎಂದು ಪ್ರಶ್ನೆ ಮಾಡಿತು.ಸೋಮವಾರ ವಿಶ್ವಾಸಮತ ಯಾಚನೆ?

ನ್ಯೂಸ್18ಗೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಜುಲೈ 27, ಸೋಮವಾರದಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ವಿಶ್ವಾಸ ಮತ ಯಾಚನೆಗಾಗಿ ಅಧಿವೇಶನ ಕರೆಯುವ ಸಾಧ್ಯತೆ ಇದೆ. ಈ ಬಿಕ್ಕಟ್ಟಿಗೆ ಒಂದು ಅಂತ್ಯ ಹಾಡಲು ಅವರು ಶೀಘ್ರದಲ್ಲೇ ವಿಶ್ವಾಸಮತ ಯಾಚನೆ ಕ್ರಮಕ್ಕೆ ಮುಂದಾಗಲಿದ್ದಾರೆನ್ನಲಾಗಿದೆ.
Published by: Vijayasarthy SN
First published: July 23, 2020, 1:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories