ಆರು ವರ್ಷದ ಮಗನ ಮುಂದೆ ಹಿರಿಯ ಅಧಿಕಾರಿ ಜತೆ ಸೆಕ್ಸ್​ ಮಾಡಿದ ಪ್ರಕರಣ: ಮಹಿಳಾ ಕಾನ್ಸ್​ಟೇಬಲ್​ ಬಂಧನ

Rajasthan Police Viral Video Swimming Pool: ರಾಜಸ್ಥಾನ ಪೊಲೀಸ್​ ಸೇವಾ ಆಯೋಗದ ಹಿರಿಯ ಅಧಿಕಾರಿ ಮತ್ತು ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ಪೂಲ್​ನಲ್ಲಿ ಸಂಭೋಗ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್​ ಆಗಿತ್ತು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೈಪುರ: ಹಿರಿಯ ಅಧಿಕಾರಿ ಜೊತೆ ಲೈಂಗಿಕ ಕ್ರಿಯೆ ಮಾಡುತ್ತಿರುವ ದೃಶ್ಯ ವೈರಲ್​ ಆದ ಬೆನ್ನಲ್ಲೇ ರಾಜಸ್ಥಾನ ಮಹಿಳಾ ಕಾನ್ಸ್​ಟೇಬಲ್​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Rajasthan Viral Police Sex Scandal Video). ರಾಜಸ್ಥಾನ ಪೊಲೀಸ್​ ಸೇವಾ ಆಯೋಗದ ಹಿರಿಯ ಅಧಿಕಾರಿ ಮತ್ತು ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ಪೂಲ್​ನಲ್ಲಿ ಸಂಭೋಗ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋ ವೈರಲ್​ ಆಗಿತ್ತು. ಅದೆಲ್ಲಕ್ಕಿಂತ ಮುಖ್ಯವಾಗಿ ಕಾನ್ಸ್​ಟೇಬಲ್​ರ ಆರು ವರ್ಷದ ಮಗನ ಮುಂದೆಯೇ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದು ವ್ಯಾಪಕ ಖಂಡನೆಗೆ ಕಾರಣವಾಗಿತ್ತು. ಇದೀಗ ಕಾನ್ಸ್​ಟೇಬಲ್​ ವಶಕ್ಕೆ ಪಡೆದ ವಿಶೇಷ ತನಿಖಾ ತಂಡ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಸೆಪ್ಟೆಂಬರ್​ 17ರವರೆಗೂ ಕಸ್ಟಡಿಗೆ ಪಡೆದಿದ್ದಾರೆ.

  ಜೈಪುರದ ಕಲ್ವಾರ್​ ಏರಿಯಾದ ಸಂಬಂಧಿಯೊಬ್ಬರ ಮನೆಯಲ್ಲಿ ಮಹಿಳಾ ಕಾನ್ಸ್​ಟೇಬಲ್​ ಅಡಗಿದ್ದರು. ಇದನ್ನು ಪತ್ತೆಹಚ್ಚಿ, ಪೊಲೀಸರು ಬಂಧಿಸಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಪೋಕ್ಸೊ (Protection of Children from Sexual Offenses Act) ಕಾಯಿದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಜ್ಮೇರ್​ ಜಿಲ್ಲೆಯ ಪುಷ್ಕರ್​ ರೆಸಾರ್ಟ್​ನಲ್ಲಿ ವಿಡಿಯೋವನ್ನು ಕಾನ್ಸ್​ಟೇಬಲ್​ ತಮ್ಮ ಮೊಬೈಲ್​ನಲ್ಲಿಯೇ ಚಿತ್ರೀಕರಿಸಿದ್ದರು ಎನ್ನಲಾಗಿದೆ. ಜುಲೈ 10ನೇ ತಾರೀಕು, ರೆಸಾರ್ಟ್​ಗೆ ಹಿರಿಯ ಅಧಿಕಾರಿ ಮತ್ತು ಕಾನ್ಸ್​ಟೇಬಲ್​ ತೆರಳಿದ್ದರು. ಜತೆಗೆ ಆರು ವರ್ಷದ ಮಗನನ್ನೂ ಕಾನ್ಸ್​ಟೇಬಲ್​ ಕರೆದೊಯ್ದಿದ್ದರು ಎನ್ನಲಾಗಿದೆ.

  ಇನ್ನೂ ಪ್ರಕರಣದ ಇನ್ನೊಬ್ಬ ಆರೋಪಿ ಹೀರಾ ಸೈನಿ, ರಾಜಸ್ಥಾನ ಪೊಲೀಸ್​ ಸೇವೆಯ ಹಿರಿಯ ಅಧಿಕಾರಿಯಾಗಿದ್ದು, ಬೀವಾರ್​ ಸರ್ಕಲ್​ ಅಧಿಕಾರಿಯಾಗಿ ಕಾರ್ಯದಲ್ಲಿದ್ದರು. ಈ ವೇಳೆ ಮಹಿಳಾ ಕಾನ್ಸ್​ಟೇಬಲ್​ ಜೈಪುರದಲ್ಲಿ ನಿಯುಕ್ತಿಗೊಂಡಿದ್ದರು. ಕಾನ್ಸ್​ಟೇಬಲ್​ ಹುಟ್ಟುಹಬ್ಬ ಆಚರಣೆಗೆಂದು ಇಬ್ಬರೂ ರೆಸಾರ್ಟ್​ಗೆ ತೆರಳಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: Weird News: 10 ವರ್ಷದಲ್ಲಿ 25 ಬಾರಿ 25 ಬೇರೆ ಬೇರೆ ಗಂಡಸರ ಜೊತೆ ಓಡಿಹೋದ ಹೆಂಡತಿ: ಆದರೂ ಆಕೆಯನ್ನೇ ಪ್ರೀತಿಸುತ್ತಾರಂತೆ ಗಂಡ

  ವಿಶೇಷ ತನಿಖಾ ತಂಡದ ಮೂಲಗಳ ಪ್ರಕಾರ ಹಿರಿಯ ಮತ್ತು ಕಿರಿಯ ಅಧಿಕಾರಿ ಇಬ್ಬರೂ ಲಕ್ಷುರಿ ರೂಮಿನ ಖಾಸಗಿ ಪೂಲ್​ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಮತ್ತು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಆರು ವರ್ಷದ ಮಗ ಕೂಡ ಮುಂದೆಯೇ ಇದ್ದ ಎನ್ನಲಾಗುತ್ತಿದೆ. ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಮಹಿಳಾ ಕಾನ್ಸ್​ಟೇಬಲ್​ ಇಬ್ಬರ ಖಾಸಗಿ ಪ್ರಣಯದ ವಿಡಿಯೋಗಳನ್ನು ಮಾಡಿ ಮೊಬೈಲ್​ನಲ್ಲಿ ಹೈಡ್​ ಮಾಡಿ ಇಡುತ್ತಿದ್ದರು. ಬೇರೆ ಫೋಲ್ಡರ್​ ಮಾಡಿ, ಅಪ್ಪಿತಪ್ಪಿ ಯಾರ ಕಣ್ಣಿಗೂ ಕಾಣದಂತೆ ಎಚ್ಚರವಹಿಸಿದ್ದರು. ಆದರೆ ಹೇಗೋ ಅಚಾತುರ್ಯದಿಂದ ಆ ವಿಡಿಯೋಗಳು ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಪೋಸ್ಟ್​ ಆಗಿದೆ. ಅದನ್ನು ಗಮನಿಸಿ ಡಿಲೀಟ್​ ಮಾಡುವ ಮುನ್ನ ಗಂಡ ಮತ್ತು ಸಂಬಂಧಿ ಎಲ್ಲರೂ ಅದನ್ನು ವೀಕ್ಷಿಸಿದ್ದಾರೆ ಎಂದು ಮಾಹಿತಿ ನೀಡಿದರು.

  ಇದನ್ನೂ ಓದಿ: ಲಿವಿಂಗ್​ ರಿಲೇಷನ್​ಶಿಪ್​ನಲ್ಲಿ ಅಕ್ರಮ ಸಂಬಂಧದ ಘಾಟು: ಪ್ರೇಯಸಿಯ ಖಾಸಗಿ ಭಾಗಕ್ಕೆ ಖಾರದ ಪುಡಿ ಹಚ್ಚಿ ಕೊಲೆ

  ಮಹಿಳಾ ಕಾನ್ಸ್​ಟೇಬ್​, ಹಿರಿಯ ಅಧಿಕಾರಿ ಸೈನಿ ಇಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ. ಜತೆಗೆ ಇನ್ನಿಬ್ಬರು ಹಿರಿಯ ಅಧಿಕಾರಿಗಳು ಮತ್ತು ಠಾಣಾ ಮುಖ್ಯಸ್ಥರನ್ನು ಕೂಡ ಅಧಿಕಾರ ದುರುಪಯೋಗ ಮಾಡಿ ಪ್ರಕರಣ ಮುಚ್ಚಿಹಾಕಲು ಹೊರಟ ಆರೋಪದ ಮೇಲೆ ಅಮಾನತ್ತು ಮಾಡಲಾಗಿದೆ.

  ಕಾನ್ಸ್​ಟೇಬಲ್​ ಗಂಡ ಪ್ರಕರಣ ಬೆಳಕಿಗೆ ಬರುತ್ತಲೇ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದರು. ಈ ದೂರನ್ನು ಆಗಸ್ಟ್​ 10ರಂದೇ ಠಾಣೆಗೆ ಕಳುಹಿಸಿ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಆದಾಗ್ಯೂ ಪ್ರಕರಣ ದಾಖಲಿಸಿಕೊಳ್ಳದೇ, ಮುಚ್ಚಿಹಾಕಲು ಯತ್ನಿಸಲಾಗಿತ್ತು. ಹಿರಿಯ ಅಧಿಕಾರಿ ತಮಗಿದ್ದ ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಕರಣ ಆಚೆ ಬರದಂತೆ ತಡೆಯಲು ಯತ್ನಿಸಿದ್ದರು.

  ಜುಲೈ ಕೊನೆಯಲ್ಲಿ ಮಹಿಳಾ ಕಾನ್ಸ್​ಟೇಬಲ್​ ಕಲ್ವಾರ್​ ಠಾಣೆಯಲ್ಲಿ ಬೆದರಿಕೆ ಪ್ರಕರಣದ ದಾಖಲಿಸಿದ್ದರು. ತಮ್ಮ ಖಾಸಗಿ ದೃಶ್ಯವಿದೆ, ಹತ್ತು ಲಕ್ಷ ಕೊಡದಿದ್ದರೆ ಸೋರಿಕೆ ಮಾಡುವುದಾಗಿ ವ್ಯಕ್ತಿಯೊಬ್ಬರು ಕರೆಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾನ್ಸ್​ಟೇಬಲ್​ ದೂರು ನೀಡಿದ್ದರು.
  Published by:Sharath Sharma Kalagaru
  First published: