Rajasthan: ಗುಡಿಸಲಿನಲ್ಲಿ ಸಾಧು ಚೇತನ್ ದಾಸ್ ಹತ್ಯೆ, ದೇಹದ ಮೇಲೆ ಗಾಯದ ಗುರುತು!

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ಸಂಗರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಭಖ್ರವಾಲಿ ಗ್ರಾಮದ ನಿವಾಸಿ ಸಾಧು ಚೇತನ್ ದಾಸ್ ಮಂಗಳವಾರ ರಾತ್ರಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಸಾಧು ಚೇತಂದಾಸ್ ಅವರ ಮೃತದೇಹವು ಅವರ ಗುಡಿಸಲಿನ ಬಾಗಿಲಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಸಾಧು ಹತ್ಯೆಯ ನಂತರ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸಾಧು ಚೇತಂದಾಸ್ ಪಂಜಾಬ್ ನಿವಾಸಿಯಾಗಿದ್ದರು.

ಸಾಧು ಚೇತನ್ ದಾಸ್

ಸಾಧು ಚೇತನ್ ದಾಸ್

  • Share this:
ಹನುಮಾನ್‌ಗಢ್(ಆ.17): ರಾಜಸ್ಥಾನದ (Rajasthan) ಹನುಮಾನ್‌ಗಢ್ (Hanumangarh) ಜಿಲ್ಲೆಯ ಸಂಗರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಧು ಚೇತನ್ ದಾಸ್ ಅವರನ್ನು ಹತ್ಯೆ ಮಾಡಲಾಗಿದೆ. ಸಾಧು ಚೇತನ್​ ದಾಸರು (Chetan Das) ಭಖ್ರವಾಲಿ ಗ್ರಾಮದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ ಗುಡಿಸಲಿನ ಬಾಗಿಲಲ್ಲಿ ಸಾಧು ಶವ ಬಿದ್ದಿರುವುದು ಪತ್ತೆಯಾಗಿದೆ. ಸಾಧುವಿನ ಮೃತದೇಹ ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದರು. ಸಾಧು ಚೇತನ್​ ದಾಸ್ ಅವರ ದೇಹದ ಮೇಲೆ ಹಲವು ಗಾಯಗಳ ಗುರುತುಗಳಿದ್ದವು. ನಂತರ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಕೊಲೆಗೆ ಕಾರಣ ಏನು ಹಾಗೂ ಆರೋಪಿಗಳು ಯಾರು ಎಂದು ಇನ್ನಷ್ಟೇ ತಿಳಿದು ಬರಬೇಕಿದೆ. ಪೊಲೀಸರು ಸಂಪೂರ್ಣ ತನಿಖೆಯಲ್ಲಿ ತೊಡಗಿದ್ದಾರೆ.

ಸಂಗರಿಯಾ ಪೊಲೀಸರ ಪ್ರಕಾರ, ಸಾಧು ಚೇತನ್​ ದಾಸ್ ಸುಮಾರು 25 ವರ್ಷಗಳಿಂದ ಭಖ್ರಾವಲಿ ಗ್ರಾಮದ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ ಸಾಧು ಚೇತನದಾಸ್ ಅವರ ಮೃತದೇಹ ಗುಡಿಸಲಿನ ಹೊರಗೆ ಬಿದ್ದಿತ್ತು. ದೇಹದ ಸುತ್ತ ರಕ್ತ ಚಿಮ್ಮಿತ್ತು. ಅಪರಿಚಿತ ದುಷ್ಕರ್ಮಿಗಳು ಸನ್ಯಾಸಿಯನ್ನು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರ ಪ್ರಕಾರ ಸಾಧು ಚೇತಂದಾಸ್ ಪಂಜಾಬ್ ನಿವಾಸಿ. ಹಳ್ಳಿಯ ಸಾಧುಗಳು ಗುಡಿಸಲಿನಲ್ಲಿ ಪ್ರತಿನಿತ್ಯ ಚೇತನದಾಸರಿಗೆ ಅನ್ನ ನೀಡುತ್ತಿದ್ದರು.

ಇದನ್ನೂ ಓದಿ:  Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

ಸಾಧು ಚೇತನದಾಸರು ಗ್ರಾಮದ ಎಲ್ಲ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.

ಸಾಧು ಚೇತಂದಾಸ್ ಹತ್ಯೆಯ ಮಾಹಿತಿಯ ನಂತರ, ಸಂಗರಿಯಾ ಡಿಎಸ್ಪಿ ಪ್ರತೀಕ್ ಮೈಲ್ ಮತ್ತು ಸಂಗರಿಯಾ ಪೊಲೀಸ್ ಠಾಣಾಧಿಕಾರಿ ಹನುಮಂತರಾಮ್ ಬಿಷ್ಣೋಯ್ ಕೂಡ ಸ್ಥಳಕ್ಕೆ ತಲುಪಿದರು. ಅವರು ಸ್ಥಳವನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಪೊಲೀಸರು ಗ್ರಾಮಸ್ಥರನ್ನು ವಿಚಾರಣೆಗೊಳಪಡಿಸಿದಾಗ ಸಾಧು ಚೇತನದಾಸ್ ಯಾರೊಂದಿಗೂ ವಿವಾದ, ಜಗಳ ಮಾಡಿಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅವರು ತಮ್ಮ ಗುಡಿಸಲಿನಲ್ಲಿ ವಾಸಿಸುತ್ತಿದ್ದರು ಮತ್ತು ಗ್ರಾಮದ ಎಲ್ಲ ಜನರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎನ್ನಲಾಗಿದೆ.

ಇದನ್ನೂ ಓದಿ:  Banashankari Murder Case: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

ಹಂತಕರನ್ನು ಶೀಘ್ರ ಹಿಡಿಯಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು

ಹಳ್ಳಿಗರು ಗುಡಿಸಲಿನಲ್ಲಿ ಊಟ ಕೊಟ್ಟು ನಿತ್ಯ ಭೇಟಿ ಮಾಡುತ್ತಿದ್ದರು. ಆದರೆ ಇಂದು ಸಾಧುವಿನ ಮೃತದೇಹ ನೋಡಿ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಸನ್ಯಾಸಿ ಹತ್ಯೆಯ ಮಾಹಿತಿಯಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಸಾಧು ಚೇತನದಾಸ್ ಹತ್ಯೆಗೆ ಗ್ರಾಮಸ್ಥರು ಸಂತಾಪ ಸೂಚಿಸಿದ್ದು, ಆದಷ್ಟು ಬೇಗ ಹಂತಕರನ್ನು ಬಂಧಿಸಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಸಾಧು ಚೇತನದಾಸ್ ಮೃತದೇಹವನ್ನು ಸಂಗಾರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಪೊಲೀಸರು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದಾರಾದರೂ, ಇದುವರೆಗೆ ಕೊಲೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ.
Published by:Precilla Olivia Dias
First published: