ಜೈಪುರ: ಸಾಮಾನ್ಯವಾಗಿ ಪಾಠ ಮಾಡುವ ಶಿಕ್ಷಕರು ಹಾಗೂ ಅಧ್ಯಾಪಕರನ್ನು ಗುರುದೇವೋ ಭವ ಎಂದು ಹೇಳಲಾಗುತ್ತದೆ. ಆದರೆ ಇಲ್ಲೋರ್ವ ಪ್ರಾಧ್ಯಾಪಕ ಎತ್ತು ಏರಿಗಿಳಿದರೆ, ಕೋಣ ನೀರಿಗೆ ಇಳಿಯಿತಂತೆ ಹಾಗೇ. ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕದವನೆ ಅಡ್ಡದಾರಿ ಹಿಡಿದಿದ್ದಾನೆ. ಅಲ್ಲದೇ ತನ್ನ ಲೈಂಗಿಕ ಸುಖಕ್ಕೆ ಉದ್ಯೋಗವನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾನೆ. ಹೌದು, ರಾಜಸ್ಥಾನ (Rajastan) ತಾಂತ್ರಿಕ ವಿಶ್ವವಿದ್ಯಾನಿಲಯದ (Technical University) ಪ್ರಾಧ್ಯಾಪಕನೊಬ್ಬ (Professor) ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ವಿದ್ಯಾರ್ಥಿನಿಗೆ (Student) ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ವಿದ್ಯಾರ್ಥಿನಿ ನಿರಾಕರಿಸಿದ್ದಕ್ಕೆ ನಿನ್ನನ್ನು ಪರೀಕ್ಷೆಯಲ್ಲಿ (Exam) ಫೇಲ್ ಮಾಡಬಾರದು ಅಂದರೆ ನನ್ನ ಜೊತೆಗೆ ಲೈಂಗಿಕ ಕ್ರಿಯೆಗೆ ಒಪ್ಪಿಕೋ ಎಂದು ಬ್ಲ್ಯಾಕ್ ಮಾಡಿದ್ದಾನೆ. ಇದೀಗ ಆರೋಪಿ ಪ್ರಾಧ್ಯಪಕನನ್ನು ಪೊಲೀಸರು (Police) ಬಂಧಿಸಿದ್ದಾರೆ.
ಫೈನಲ್ ಇಯರ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯಿಂದ ದೂರು
ಫೈನಲ್ ಇಯರ್ನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ ಪ್ರೊಫೆಸರ್ ತನ್ನ ಸಹಪಾಠಿಯೊಬ್ಬನ ಮೂಲಕ ತನ್ನ ಮೇಲೆ ಲೈಂಗಿಕತೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾಳೆ. ಬುಧವಾರ ಈ ಪ್ರಕರಣ ಸಂಬಂಧ ಆಕೆಯ ಸಹಪಾಠಿಯನ್ನು ಕೂಡ ಪೊಲೀಸರು ಬಂಧಿಸಿರುವುದಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ ಅಮರ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಯುವತಿ ವಿರುದ್ಧ ಪ್ರೊಫೆಸರ್ ಅಶ್ಲೀಲ ಟೀಕೆ ಆಡಿಯೋ ವೈರಲ್
ಯುವತಿ ವಿರುದ್ಧ ಪ್ರೊಫೆಸರ್ ಮತ್ತು ಆಕೆಯ ಸಹಪಾಠಿ ಅಶ್ಲೀಲ ಟೀಕೆಗಳನ್ನು ಮಾಡಿರುವ ಸಂಭಾಷಣೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇದೀಗ ಈ ಆಡಿಯೋವನ್ನು ಯುವತಿ ಪೊಲೀಸರಿಗೆ ನೀಡಿ ದೂರು ನೀಡಿದ್ದಾಳೆ.
ಲೈಂಗಿಕ ಕ್ರಿಯೆ ಒಪ್ಪದಿದ್ದರೆ ಪರೀಕ್ಷೆಯಲ್ಲಿ ಫೇಲ್
ದೂರಿನಲ್ಲಿ, ಯುವತಿ ವಿಶ್ವವಿದ್ಯಾನಿಲಯದ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದು, ಸಹಪಾಠಿಯೊಬ್ಬನ ಮೂಲಕ ಪ್ರಾಧ್ಯಾಪಕರು ಲೈಂಗಿಕತೆಗೆ ನನ್ನನ್ನ ಬಳಸಿಕೊಳ್ಳಲು ಪ್ರಯತ್ನಿಸಿದರು. ಇದರಿಂದ ಪರೀಕ್ಷೆಯಲ್ಲಿ ಪಾಸ್ ಮಾಡುವುದಾಗಿ ಹೇಳಿದರು. ಆದರೆ ಇದಕ್ಕೆ ನಿರಾಕರಿಸಿದಾಗ, ಒಪ್ಪದಿದ್ದರೆ ಫೈನಲ್ ಇಯರ್ನಲ್ಲಿ ಫೇಲ್ ಮಾಡುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದರು ಎಂದು ತಿಳಿಸಿದ್ದಾಳೆ.
ಆರೋಪಿಗಳ ವಿರುದ್ಧ ಪೊಲೀಸರಿಂದ ಎಫ್ಐಆರ್ ದಾಖಲು
ಸಂತ್ರಸ್ತ ಯುವತಿ ಮತ್ತು ಇನ್ನೋರ್ವ ವಿದ್ಯಾರ್ಥಿನಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡ ಪೊಲೀಸರು, ಮಂಗಳವಾರ ದಾದಾಭಾರಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 354 ಡಿ (ಹಿಂಬಾಲಿಸುವುದು) ಮತ್ತು 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಕೇಸ್ ದಾಖಲಿಸಿ, ಅವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: Telangana: ಶಾಲೆಗೆ ಬರದ 10ನೇ ಕ್ಲಾಸ್ ವಿದ್ಯಾರ್ಥಿಯ ಮನೆಗೇ ಹೋದ ಶಿಕ್ಷಕ!
ಇತ್ತೀಚೆಗಷ್ಟೇ ಪಾಂಡವಪುರ ಶಿಕ್ಷಕನಿಗೆ ಧರ್ಮದೇಟು ನೀಡಿದ್ದ ವಿದ್ಯಾರ್ಥಿನಿಯರು
ಇತ್ತೀಚೆಗಷ್ಟೇ ಪಾಂಡವಪುರ ತಾಲೂಕಿನಲ್ಲಿ ಕಾಮುಕ ಶಿಕ್ಷಕನೋರ್ವನಿಗೆ ವಿದ್ಯಾರ್ಥಿನಿಯರೇ ತಕ್ಕ ಪಾಠ ಕಲಿಸಿದ್ದರು. ಕಟ್ಟೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತಿದ್ದ ವಿದ್ಯಾರ್ಥಿನಿಯರೇ ಚಾಂಡಾಳ ಗುರುವಿಗೆ ಧರ್ಮದೇಟು ನೀಡಿದ್ದರು. ಕಟ್ಟೇರಿ ಗ್ರಾಮದ RVMS ಸರ್ಕಾರಿ ಪ್ರೌಢಶಾಲೆಯ ಬಾಲಕಿಯರ ಹಾಸ್ಟೆಲ್ನಲ್ಲಿ ಕಳೆದ ವಾರ ರಾತ್ರಿ ಈ ಘಟನೆ ನಡೆದಿತ್ತು. ಶಾಲಾ ಮುಖ್ಯ ಶಿಕ್ಷಕ ಹಾಗೂ ಹಾಸ್ಟೆಲ್ ಮೇಲ್ವಿಚಾರಕ ಚಿನ್ಮಯಾನಂದ ಮೂರ್ತಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿಬಿದ್ದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ