HOME » NEWS » National-international » RAJASTHAN POLITICAL CRISIS REBEL LEADER SACHIN PILOT DISMISSED AS DEPUTY CHIEF MINISTER MAK

Rajasthan Political Crisis: ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಉಪ ಮುಖ್ಯಮಂತ್ರಿ ಸ್ಥಾನದಿಂದ ಬಂಡಾಯ ನಾಯಕ ಸಚಿನ್ ಪೈಲಟ್‌ ವಜಾ

ಇಂದು ಸಹ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಆದರೆ, ಸತತ ಎರಡು ಬಾರಿಯೂ ಶಾಸಕರ ಸಭೆಯಲ್ಲಿ ಪಾಲ್ಗೊಳ್ಳದ ಕಾರಣವನ್ನು ಮುಂದಿಟ್ಟು ಸಚಿನ್‌ ಪೈಲಟ್‌ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜಸ್ಥಾನ ಪ್ರಾದೇಶಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎನ್ನಲಾಗುತ್ತಿದೆ.

news18-kannada
Updated:July 14, 2020, 2:22 PM IST
Rajasthan Political Crisis: ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಉಪ ಮುಖ್ಯಮಂತ್ರಿ ಸ್ಥಾನದಿಂದ ಬಂಡಾಯ ನಾಯಕ ಸಚಿನ್ ಪೈಲಟ್‌ ವಜಾ
ಸಚಿನ್​ ಪೈಲಟ್​.
  • Share this:
ಜೈಪುರ (ಜುಲೈ 14); ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಸ್ಥಾನದಿಂದ ಬಂಡಾಯ ನಾಯಕ ಸಚಿನ್‌ ಪೈಲಟ್‌ ಅವರನ್ನು ವಜಾ ಮಾಡಲಾಗಿದೆ. ಅಲ್ಲದೆ, ಅವರಿಗೆ ಬೆಂಬಲ ಸೂಚಿಸಿದ್ದ ಇಬ್ಬರು ಸಚಿವರನ್ನೂ ಸ್ಥಾನದಿಂದ ತೆರವುಗೊಳಿಸಲಾಗಿದೆ ಎಂದು ರಾಜಸ್ಥಾನ ಕಾಂಗ್ರೆಸ್‌ ಅಧಿಕೃತವಾಗಿ ಘೋಷಿಸಿದೆ.

ಕಳೆದ ಒಂದು ವಾರದಿಂದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಬಿಕ್ಕಟ್ಟು ಒಂದು ಹಂತದಲ್ಲಿ ಸರ್ಕಾರ ಉರುಳುವವರೆಗೆ ತಲುಪಿತ್ತು. ಆದರೆ, ನಿನ್ನೆ ಶಾಸಕರ ಸಭೆ ನಡೆಸಿ 102 ಶಾಸಕರ ಬಲಾಬಲ ತೋರಿಸುವ ಮೂಲಕ ಅಶೋಕ್‌ ಗೆಹ್ಲೋಟ್ ತಮ್ಮ ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದರು.

ಅಲ್ಲದೆ, ಇಂದು ಸಹ ಶಾಸಕರ ಸಭೆಯನ್ನು ಕರೆಯಲಾಗಿತ್ತು. ಆದರೆ, ಸತತ ಎರಡು ಬಾರಿಯೂ ಶಾಸಕರ ಸಭೆಯಲ್ಲಿ ಪಾಲ್ಗೊಳ್ಳದ ಕಾರಣವನ್ನು ಮುಂದಿಟ್ಟು ಸಚಿನ್‌ ಪೈಲಟ್‌ ಅವರನ್ನು ಉಪ ಮುಖ್ಯಮಂತ್ರಿ ಹಾಗೂ ರಾಜಸ್ಥಾನ ಪ್ರಾದೇಶಿಕ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿದೆ ಎನ್ನಲಾಗುತ್ತಿದೆ.

ಜೈಪುರದಲ್ಲಿ ನಿನ್ನೆ ನಡೆದ ಸಿಎಲ್​ಪಿ ಸಭೆಯಲ್ಲಿ ಬಂಡಾಯಗಾರ ಸಚಿನ್ ಪೈಲಟ್​ಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿತ್ತು. ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಣಯ ಮಾಡುವ ಮೂಲಕ ಸಚಿನ್ ಪೈಲಟ್​ಗೆ ಪರೋಕ್ಷ ಎಚ್ಚರಿಕೆ ನೀಡಲಾಗಿತ್ತು.

ಆದರೆ, ನಿನ್ನೆ ನಡೆದ ಶಾಸಕರ ಸಭೆಯಲ್ಲಿ ಸಚಿನ್‌ ಪೈಲಟ್‌ ಬೆಂಬಲಿತ ಶಾಸಕರು ಪಾಲ್ಗೊಂಡಿರಲಿಲ್ಲ. ಇಂದು ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕರು ಮತ್ತೊಂದು ಸುತ್ತಿನ ಶಾಸಕರ ಸಭೆಯನ್ನು ಆಯೋಜಿಸಿದ್ದರು. ಆದರೆ, ಈ ಸಭೆಗೂ ಸಹ ಸಚಿನ್ ಪೈಲಟ್ ಮತ್ತು ಅವರ‌ ಬೆಂಬಲಿತ ಶಾಸಕರು ಹಾಜರಾಗಿಲ್ಲ ಎನ್ನಲಾಗುತ್ತಿದೆ.

ಹೀಗಾಗಿ ಹೈಕಮಾಂಡ್‌ ನಾಯಕರ ನಿರ್ದೇಶನದ ಮೇರೆಗೆ ಇಂದು ರಾಜಸ್ಥಾನ ಕಾಂಗ್ರೆಸ್‌ ನಾಯಕರು ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಸಮಾಲೋಚನೆ ನಡೆಸಿದ್ದಾರೆ. ಈ ಸಮಾಲೋಚನೆಯಲ್ಲಿ ಬಂಡಾಯ ನಾಯಕ ಸಚಿನ್‌ ಪೈಲಟ್‌ ಮತ್ತು ಅವರ ಬೆಂಬಲಿತ ಸಚಿವರನ್ನು ಅವರ ಸ್ಥಾನದಿಂದ ಇಳಿಸುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.

2018ರ ರಾಜಸ್ಥಾನ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್‌ ಸಚಿನ್‌ ಪೈಲಟ್‌ ಅವರ ನಾಯಕತ್ವದಲ್ಲೇ ಎದುರಿಸಿತ್ತು. ಅಂದು ಪಕ್ಷದ ಚುಕ್ಕಾಣಿ ಹಿಡಿದಿದ್ದ ಸಚಿನ್‌ ಪೈಲಟ್‌ ಪಕ್ಷವನ್ನು ಗೆಲುವಿನ ದಡ ಸೇರಿಸಿದ್ದರು. 200 ಸ್ಥಾನಗಳ ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಬರೋಬ್ಬರಿ 107 ಸ್ಥಾನಗಳಲ್ಲಿ ಗೆಲುವು  ಸಾಧಿಸಿತ್ತು. ಇದೇ ಕಾರಣಕ್ಕೆ ಅವರು ಸಚಿನ್‌ ಪೈಲಟ್‌ ಉಪಮುಖ್ಯಮಂತ್ರಿ ಸ್ಥಾನವನ್ನೂ ಕೇಳಿದ್ದರು.ಆದರೆ, ಹಿರಿತನದ ಆಧಾರದ ಮೇಲೆ ಅಶೋಕ್‌ ಗೆಹ್ಲೋಟ್‌ ಅವರಿಗೆ ಸಿಎಂ ಸ್ಥಾನ ನೀಡಲಾಗಿತ್ತು. ಅಂದಿನಿಂದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲಟ್‌ ನಡುವೆ ವೈಮನ್ಯ ನಡೆದೇ ಇತ್ತು. ಆದರೆ, ಇಂದು ಎಲ್ಲವೂ ತಾರಕಕ್ಕೇರಿದ್ದು ಸಚಿನ್‌ ಪೈಲಟ್‌ ಅವರನ್ನು ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಹಂತಕ್ಕೆ ಬೆಳೆದಿದೆ.

ಇದನ್ನೂ ಓದಿ : Rajasthan Political Crisis: ರಾಜಸ್ಥಾನ ರಾಜಕೀಯ ಬಿಕ್ಕಟ್ಟು; ಉಪ ಮುಖ್ಯಮಂತ್ರಿ ಸ್ಥಾನದಿಂದ ಬಂಡಾಯ ನಾಯಕ ಸಚಿನ್ ಪೈಲಟ್‌ ವಜಾ


Youtube Video

ಇಷ್ಟಾದರೂ ಸಚಿನ್ ಪೈಲಟ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ಬದಲಾಗಿ ಅವರಿಗೆ ಮತ್ತೆ ಪಕ್ಷದಲ್ಲಿ ಸಕ್ರೀಯವಾಗುವ ಅವಕಾಶವನ್ನು ಹೈಕಮಾಂಡ್‌ ನಾಯಕರು ನೀಡಿದ್ದಾರೆ. ಈ ಕುರಿತು ಸಚಿನ್ ಪೈಲಟ್‌ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಬಲ್ಲ ಮೂಲಗಳ ಪ್ರಕಾರ ಪೈಲಟ್‌ ಈಗಾಗಲೇ ಪಕ್ಷದಿಂದ ಎರಡೂ ಕಾಲನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.
Published by: MAshok Kumar
First published: July 14, 2020, 1:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories