HOME » NEWS » National-international » RAJASTHAN POLITICAL CRISIS CONGRESS SOURCES SAY PARTY WAS READY TO OFFER SACHIN PILOT TO CMS CHAIR RMD

Sachin Pilot: ರಾಜಸ್ಥಾನದಲ್ಲಿ ಬಂಡಾಯ ಶಮನಕ್ಕೆ ಮುಂದಾದ ಕಾಂಗ್ರೆಸ್; ಸಚಿನ್ ಪೈಲಟ್​ಗೆ ಸಿಎಂ ಸ್ಥಾನ?

Rajasthan Political Crisis: ಪೈಲಟ್ ದೆಹಲಿಗೆ ಕಾಂಗ್ರೆಸ್ ಹಿರಿಯ ನಾಯಕರನ್ನು ಭೇಟಿ ಮಾಡಲು ತೆರಳಿದ್ದರೂ ಅದು ಫಲಪ್ರಧವಾಗಲಿಲ್ಲ. ಇದರಿಂದ ಅಸಮಾಧನಗೊಂಡಿರುವ ಪೈಲಟ್ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.

news18-kannada
Updated:July 13, 2020, 10:04 AM IST
Sachin Pilot: ರಾಜಸ್ಥಾನದಲ್ಲಿ ಬಂಡಾಯ ಶಮನಕ್ಕೆ ಮುಂದಾದ ಕಾಂಗ್ರೆಸ್; ಸಚಿನ್ ಪೈಲಟ್​ಗೆ ಸಿಎಂ ಸ್ಥಾನ?
ಸಚಿನ್​ ಪೈಲಟ್​
  • Share this:
ಜೈಪುರ (ಜು.13): ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದೆ. ಮುಖ್ಯಮಂತ್ರಿ ಸ್ಥಾನ ಸಿಗದಿರುವ ಕಾರಣಕ್ಕೆ ಸಚಿನ್ ಪೈಲಟ್ ಪಕ್ಷದ ವಿರುದ್ಧವೇ ಬಂಡಾಯ ಎದ್ದಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕುರ್ಚಿ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಬಂಡಾಯ ಶಮನ ಮಾಡುವ ಅಗತ್ಯವಿದೆ. ಹೀಗಾಗಿ, ಸಚಿನ್ ಪೈಲಟ್ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕಾಂಗ್ರೆಸ್ನ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಸಚಿನ್ ಪೈಲಟ್ ಶನಿವಾರ ತಮ್ಮ ಆಪ್ತ ಶಾಸಕರು ಹಾಗೂ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಜೊತೆ ಸಭೆ ನಡೆಸಿದ್ದರು. ಸಭೆ ವೇಳೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ನೇರವಾಗಿ ಕಿಡಿಕಾರಿದ್ದರು. ಅಶೋಕ್ ನನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದ್ದಾರೆ. ನನಗೆ ಅನ್ಯಾಯ ಆಗುವುದನ್ನು ಎಂದಿಗೂ ಸಹಿಸೆನು ಎಂದು ಸಚಿನ್ ಆರೋಪಿಸಿದ್ದರು ಎನ್ನಲಾಗಿದೆ.

ಇನ್ನು, ಪೈಲಟ್ ದೆಹಲಿಗೆ ಕಾಂಗ್ರೆಸ್ ಹಿರಿಯ ನಾಯಕರನ್ನು ಭೇಟಿ ಮಾಡಲು ತೆರಳಿದ್ದರೂ ಅದು ಫಲಪ್ರಧವಾಗಲಿಲ್ಲ. ಇದರಿಂದ ಅಸಮಾಧನಗೊಂಡಿರುವ ಸಚಿನ್​ ಪೈಲಟ್ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದೆ.

ಸಿಎಂ ಸ್ಥಾನ ನೀಡಲು ಮುಂದಾದ ಕಾಂಗ್ರೆಸ್?:
ಕರ್ನಾಟಕದಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರ ರೂಪುಗೊಂಡಿತ್ತು. ಸರ್ಕಾರ ರಚನೆ ಆದ ಒಂದು ವರ್ಷದೊಳಗೆ ರೆಬೆಲ್ ಶಾಸಕರು ಬಿಜೆಪಿಗೆ ಹಾರಿದ್ದರು. ಮಧ್ಯ ಪ್ರದೇಶದಲ್ಲೂ ಆಪರೇಷನ್ ಕಮಲ ಯಶಸ್ವಿಯಾಗಿತ್ತು. ಈಗ ರಾಜಸ್ಥಾನದ ಮೇಲೆ ಬಿಜಿಪಿ ಕಣ್ಣಿಟ್ಟಿದೆ ಎಂಬುದು ಕಾಂಗ್ರೆಸ್ ಆರೋಪ.

ಈಗಾಗಲೇ ಸಚಿನ್ ತಮ್ಮ ಬಳಿ 30 ಶಾಸಕರು ಇರುವುದಾಗಿ ಹೇಳಿಕೊಂಡಿದ್ದಾರೆ. ಒಂದೊಮ್ಮೆ ಬಿಜೆಪಿ ಸಚಿನ್ ಅವರನ್ನು ಸೆಳೆದರೆ ಅವರ ಬೆಂಬಲಕ್ಕೆ ಇರುವ 30 ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಈ ವೇಳೆ ಸುಲಭವಾಗಿ ಕಾಂಗ್ರೆಸ್​ ಸರ್ಕಾರ ಬಿದ್ದು ಹೋಗುತ್ತದೆ. ಹೀಗಾಗಿ, ಕಾಂಗ್ರೆಸ್​ ನಾಯಕರಿಗೆ ಬಂಡಾಯ ಶಮನ ಅಗತ್ಯವಾಗಿದ್ದು, ಸಚಿನ್ ಪೈಲಟ್ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
Youtube Video
ಸಭೆಯಲ್ಲಿ ಕಾಂಗ್ರೆಸ್ ಭವಿಷ್ಯ ನಿರ್ಧಾರ:
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸಭೆಯಲ್ಲಿ ಎಷ್ಟು ಮಂದಿ ಶಾಸಕರು ಪಾಲ್ಗೊಳ್ಳುತ್ತಾರೆ ಎಂಬುದು ಕಾಂಗ್ರೆಸ್ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗೆಯೇ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದೇ ಆದರೆ ಸರ್ಕಾರ ಬೀಳುತ್ತದೆ ಎಂಬುದು ರಾಜಕೀಯ ಪಂಡಿತರ ಮಾತು.
Published by: Rajesh Duggumane
First published: July 13, 2020, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories